3ರಿಂದ ರಾಜ್ಯ ಮಟ್ಟದ ಯುವಜನೋತ್ಸವ
Team Udayavani, Dec 31, 2019, 3:00 AM IST
ಮಂಗಳೂರು: 2019-20ನೇ ಸಾಲಿನ ರಾಜ್ಯಮಟ್ಟದ ಯುವಜನೋತ್ಸವ ಜ.3ರಿಂದ 5ರವರೆಗೆ ಶಿವಮೊಗ್ಗದಲ್ಲಿ ನಡೆಯಲಿದೆ. ದ.ಕ. ಜಿಲ್ಲಾಮಟ್ಟದ ಯುವ ಜನೋತ್ಸವದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಅಭ್ಯರ್ಥಿಗಳು, ಈ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಲು ಅರ್ಹರು. ಸ್ಪರ್ಧಿಗಳು ಜ. 3ರ ಬೆಳಗ್ಗೆ 10 ಗಂಟೆ ಒಳಗೆ ನಿಗದಿತ ನಮೂನೆ ಪ್ರವೇಶ ಅರ್ಜಿಯೊಂದಿಗೆ ಸಂಘಟಕರಲ್ಲಿ ವರದಿ ಮಾಡಬೇಕು ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.