Udayavni Special

ಎಚ್ಚರ!…ಸಾರ್ವಜನಿಕ ಸೆಂಟರ್‌ನಲ್ಲಿ ಮೊಬೈಲ್‌ ಚಾರ್ಜ್ ಮಾಡುವುದು ಎಷ್ಟು ಸುರಕ್ಷಿತ?

Team Udayavani, Nov 30, 2020, 11:05 AM IST

ಎಚ್ಚರ!…ಸಾರ್ವಜನಿಕ ಸೆಂಟರ್‌ನಲ್ಲಿ ಮೊಬೈಲ್‌ ಚಾರ್ಜ್ ಮಾಡುವ ಮುನ್ನ ಇರಲಿ ಎಚ್ಚರ

ಬೆಂಗಳೂರು: ಸಾರ್ವಜನಿಕರೇ ಎಚ್ಚರ… ಸಾರ್ವಜನಿಕ ಸ್ಥಳಗಳಲ್ಲಿರುವ ಯುಎಸ್‌ಬಿ ಪವರ್‌ ಸ್ಟೇಷನ್‌ ಹಾಗೂ ಚಾರ್ಜಿಂಗ್‌ ಸೆಂಟರ್‌ಗಳಲ್ಲಿ ಮೊಬೈಲ್‌ ಚಾರ್ಜ್‌ ಮಾಡಿಕೊಳ್ಳುವ ಮುನ್ನ ಎಚ್ಚರಿಕೆ ವಹಿಸಿ! ಅಲ್ಲಿಯೇ ಅಳವಡಿಸಿರುವ ಕೇಬಲ್‌ ಮೂಲಕ ಜಾರ್ಜಿಂಗ್ ‌ಮಾಡಿಕೊಳ್ಳುವುದರಿಂದ ತಮ್ಮ ಮೊಬೈಲ್‌

ಡೇಟಾ ಕಳವು ಅಥವಾ ನಕಲು ಮಾಡುವ ಸಾಧ್ಯತೆಯಿದೆ! ಜತೆಗೆ “ಮಾಲ್ವೇರ್‌’ ಎಂಬ ಆ್ಯಪ್‌ ಮೂಲಕ ಆ್ಯಂಡ್ರ್ಯಾಯ್ಡ ಮೊಬೈಲ್‌ ಹ್ಯಾಕ್‌ ಮಾಡುವ ಸೈಬರ್‌ ವಂಚಕರು ಸಕ್ರಿಯವಾಗಿದ್ದಾರೆ.

ಬಸ್‌, ರೈಲು, ವಿಮಾನ ನಿಲ್ದಾಣ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾನ್ಯವಾಗಿ ಮೊಬೈಲ್‌ ಚಾರ್ಜಿಂಗ್‌ ಪಾಯಿಂಟ್‌ ಅಳವಡಿಸಿರುತ್ತಾರೆ. ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ ಜಾರ್ಜಿಂಗ್‌ ಮಾಡಿಕೊಂಡಾಗ ತಮ್ಮ ಮೊಬೈಲ್‌ನಲ್ಲಿರುವ ಡೇಟಾ ಸಂಪೂರ್ಣವಾಗಿ ಆ ಕೇಬಲ್‌ನಲ್ಲಿ ಸಂಗ್ರಹವಾಗುತ್ತದೆ.

ಇದನ್ನೂ ಓದಿ:ಗ್ರೇಟರ್‌ ಹೈದರಾಬಾದ್‌ ಪಾಲಿಕೆ ಚುನಾವಣೆ : “ಜೋ ಜೀತಾ ವಹೀ ಸಿಕಂದರ್‌’

ನಂತರ ವಂಚಕರು ಆ ಕೇಬಲ್‌ ಕೊಂಡೊಯ್ದು ಅವರ ಕಂಪ್ಯೂಟರ್‌ ಅಥವಾ ಮೊಬೈಲ್‌ಗ ಸಂಪರ್ಕಿಸಿಕೊಂಡು ಕಳವು ಡೇಟಾಗಳ ಬಳಸಿ ವಿವಿಧ ರೀತಿಯಲ್ಲಿ ವಂಚನೆ ಮಾಡಬಹುದು. ಇಲ್ಲವಾದಲ್ಲಿ ಡೇಟಾ ಮೂಲಕ ಮೊಬೈಲ್‌ ಮಾಲೀಕನಿಗೆ ಬ್ಲ್ಯಾಕ್‌ ಮೇಲ್‌ ಮಾಡಬಹುದು ಎನ್ನುತ್ತಾರೆ ಸೈಬರ್‌ ತಜ್ಞರು.

ಅಂತಾರಾಷ್ಟ್ರೀಯ ಮಟ್ಟದ ದಂಧೆ: ಕಳೆದ ಹತ್ತಾರು ವರ್ಷಗಳಿಂದ ಸಾರ್ವಜನಿಕರ ಡೇಟಾ ಮಾರಾಟ ದಂಧೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ನಡೆಯುತ್ತಿದೆ. ಹ್ಯಾಕರ್ಸ್‌ಗಳು ಹಾಗೂ ನಿರ್ದಿಷ್ಟ ಸಂಸ್ಥೆಗಳು ಪ್ರತಿ ದೇಶದಲ್ಲೂ ಆ್ಯಪ್‌, ಸಾಫ್ಟ್ವೇರ್‌, ಇತರೆ ಮಾರ್ಗಗಳ ಮೂಲಕ ಸಾರ್ವಜನಿಕರ ಡೇಟಾ ಸಂಗ್ರಹಿಸುತ್ತವೆ. ಅವುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಿ ಕೋಟ್ಯಂತರ ರೂ. ವ್ಯವಹಾರ ನಡೆಸುತ್ತಿದ್ದಾರೆ.

ಇತ್ತೀಚೆಗೆ ಬೆಂಗಳೂರು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದ ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿಕೂಡ ಸರ್ಕಾರದ ವೆಬ್‌ಸೈಟ್‌, ಆ್ಯಪ್‌ ಹ್ಯಾಕ್‌ ಮಾಡಿದ್ದ. ಅದರಿಂದಲೇ ಕೋಟ್ಯಂತರ ರೂ. ದಂಧೆ ನಡೆಸುತ್ತಿದ್ದ ಎಂಬುದು ಬೆಳಕಿಗೆ ಬಂದಿತ್ತು ಎಂದು ಸೈಬರ್‌ ಪೊಲೀಸರು ಮಾಹಿತಿ ನೀಡಿದರು.

ಮಾಲ್ವೇರ್‌ ಮೂಲಕ ಡೇಟಾ ಕಳವು: ವಿವಿಧ ಆಮಿಷವೊಡ್ಡಿ ಸಾರ್ವಜನಿಕರ ಡೇಟಾ ಹಾಗೂ ಹಣ ಲೂಟಿ ಮಾಡುತ್ತಿದ್ದ ಸೈಬರ್‌ ಖದೀಮರು, ಇದೀಗ, ಮಾಲ್ವೇರ್‌ ಮೂಲಕ ಆ್ಯಂಡ್ರಾಯ್ಡ ಮೊಬೈಲ್‌ ಹ್ಯಾಕ್‌ ಮಾಡಿ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ. ಸೈಬರ್‌ ತಜ್ಞರು, ಪೊಲೀಸರ ಪ್ರಕಾರ ಸುಮಾರು 250 ಬ್ಯಾಂಕಿಗ್‌ ಆ್ಯಪ್‌ ಗುರಿಯಾಗಿಸಿ ವಂಚನೆ ಮಾಡಲಾಗುತ್ತಿದೆ. ಒಮ್ಮೆ ಮಾಲ್ವೇರ್‌ ಮೊಬೈಲ್‌ ಅಥವಾ ಲ್ಯಾಪ್‌ ಟಾಪ್‌, ಕಂಪ್ಯೂಟರ್‌ನಲ್ಲಿ ಇನ್‌ಸ್ಟಾಲ್‌ ಆಗಿಬಿಟ್ಟರೆ ಮೊಬೈಲ್‌ಗೆ ಬರುವ ಓಟಿಪಿ (ಒನ್‌ ಟೈಮ್‌ ಪಾಸ್‌ವರ್ಡ್‌) ಸಂದೇಶಗಳು ಸೇರಿ ಎಲ್ಲಾ ಗೌಪ್ಯ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಸೈಬರ್‌ ವಂಚಕರ ಕೈ ಸೇರಲಿದೆ.

ಇದನ್ನೂ ಓದಿ: ವಾಟ್ಸಾಪ್ ತಂದಿದೆ ಹೊಸ ಫೀಚರ್: ಇನ್ನು ಮುಂದೆ ಚಾಟಿಂಗ್ ಮತ್ತಷ್ಟು ಸುಲಭ !

ಫ್ರೀ ವೈ-ಫೈ ಕಡೆಯೂ ಎಚ್ಚರ

ಇತ್ತೀಚೆಗೆಕೆಲವೊಂದು ಪಾರ್ಟಿ, ಹೋಟೆಲ್‌ ಹಾಗೂ ಪ್ರವಾಸಿ ತಾಣಗಳಲ್ಲಿ ಫ್ರೀ ವೈ-ಫೈ ನೀಡುತ್ತೇವೆ ಎಂದು ಜಾಹೀರಾತು ನೀಡುತ್ತಾರೆ. ಇಂತಹಕಡೆ ಮೊಬೈಲ್‌ ಬಳಸುವಾಗ ಎಚ್ಚರಿಕೆ ಇರಬೇಕು. ವ್ಯಾಟ್ಸ್‌ಆ್ಯಪ್‌ ಸಂದೇಶ, ಫೇಸ್‌ಬುಕ್‌, ಬ್ರೌಸಿಂಗ್‌ (ಜಾಹೀರಾತುಗಳ ಮೇಲೆ ಕ್ಲಿಕ್‌ ಮಾಡಬಾರದು) ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಆದರೆ, ನೆಟ್‌ಬ್ಯಾಕಿಂಗ್‌, ಹಣದ ವ್ಯವಹಾರ ನಡೆಸುವಾಗ ಜಾಗೃತೆ ವಹಿಸಬೇಕು. ವೈ-ಫೈ ಮೂಲಕವೇ ತಮ್ಮ ಬ್ಯಾಕಿಂಗ್‌ ಡೇಟಾಕಳವು ಮಾಡುತ್ತಾರೆ. ಹತ್ತಾರು ದಿನಗಳ ಬಳಿಕಡೇಟಾ ಮೂಲಕವೇ ಖಾತೆಯಿಂದ ಹಣ ಲೂಟಿ ಮಾಡುತ್ತಾರೆ. ಇಲ್ಲವಾದಲ್ಲಿ ನಿಮ್ಮ ವೈಯಕ್ತಿಕ ವಿವರ ಸಂಗ್ರಹಿಸಿಕೊಳ್ಳುತ್ತಾರೆ.

ಹೇಗೆ ಇನ್‌ಸ್ಟಾಲ್‌ ಆಗುತ್ತೆ?

ಮೊದಲಿಗೆ ಇಂಟರ್ನೆಟ್‌ ಬಳಕೆ ಮಾಡುವ ವ್ಯಕ್ತಿಗಳ ಆಸಕ್ತಿದಾಯಕ ವಿಚಾರಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾರೆ. ಬಳಿಕ ಅಂತಹ ಜಾಹೀರಾತುಗಳನ್ನು ಇ-ಮೇಲ್‌, ಬ್ರೌಸರ್‌ ಗಳಲ್ಲಿ ಪ್ರಕಟಿಸುತ್ತಾರೆ. ಸಂದೇಶ, ಫೋಟೋ, ಇ-ಮೇಲ್‌ ಮೂಲಕವು ವಿವಿಧ ಆಮಿಷಗಳನ್ನೊಡ್ಡಿ ಲಿಂಕ್‌ ರೂಪದಲ್ಲಿ ಮಾಲ್ವೇರ್‌ ರವಾನಿಸಲಾಗುತ್ತದೆ. ಅಪರಿಚಿತ ಸಂದೇಶಗಳ ಕುತೂಹಲ ಹೊಂದಿರುವ ವ್ಯಕ್ತಿಗಳು ಅದರ ಲಿಂಕ್‌ ಒತ್ತಿದ ಕೂಡಲೇ ಮಾಲ್ವೇರ್‌ ಇನ್‌ಸ್ಟಾಲ್‌ ಆಗುತ್ತದೆ. ಅದು ಮೊಬೈಲ್‌ ಬಳಕೆದಾರರಿಗೂ ಮಾಹಿತಿ ಇರಲ್ಲ.

ಪ್ರಮುಖವಾಗಿ ಮೊಬೈಲ್‌ ಬ್ಯಾಂಕಿಂಗ್‌ ಆ್ಯಪ್‌ಗ್ಳನ್ನೇ ಗುರಿಯಾಗಿಸಿ ಅಕ್ರಮ ಎಸಗುತ್ತಿದ್ದಾರೆ. ಒಮ್ಮೆ ಮಾಲ್ವೇರ್‌ ಇನ್‌ಸ್ಟಾಲ್‌ ಆಗುತ್ತಿದ್ದಂತೆ ಲೋಕೇಷನ್‌, ಸಂದೇಶ, ಮೊಬೈಲ್‌ನಲ್ಲಿರುವ ಆ್ಯಪ್‌ ವಿವರ, ದೃಢೀಕೃತ ಸಂಖ್ಯೆ (ಪಾಸ್‌ವರ್ಡ್‌ ಬದಲಾಯಿಸಿದಾಗ ಬರುವ ಅಂಥೆಂಟಿಕೇಷನ್‌ ನಂಬರ್‌), ಮೊಬೈಲ್‌ ಲಾಕ್‌, ಅಲ್ಲದೆ, ಕೆಲವೊಂದು ಸಂದರ್ಭದಲ್ಲಿ ಕೀಬೋರ್ಡ್‌ ಅನ್ನು ಅನಾಮಿಕ ವ್ಯಕ್ತಿ ಬಳಸುತ್ತಿರುತ್ತಾನೆ ಎಂದು ಸೈಬರ್‌ ಪೊಲೀಸರು ಮಾಹಿತಿ ನೀಡಿದರು.

ಸೈಬರ್‌ ಪೊಲೀಸರ ತಜ್ಞರ ಸಲಹೆ

1 ಅನಾಮಿಕ ಸಂದೇಶಗಳ ಲಿಂಕ್‌ ಕ್ಲಿಕ್‌ ಮಾಡಬೇಡಿ

2 ಪದೇ ಪದೆಬರುವ ಆ್ಯಂಡ್ರಾಯ್ಡ ಸಾಫ್ಟ್ವೇರ್‌ ಅಪ್‌ಡೇಟ್‌ಲಿಂಕ್‌ ಒತ್ತಬೇಡಿ

3 ಮೊಬೈಲ್‌ನಲ್ಲಿರುವ ಸೆಟ್ಟಿಂಗ್‌ ಆ್ಯಪ್‌ಗೆ ಹೋಗಿ ಅಪ್‌ಡೇಟ್‌ ಕೊಡಬೇಕು.

4 ಗೂಗಲ್‌ ಪ್ಲೇ ಸ್ಟೋರ್‌ ಹೊರತು ಪಡಿಸಿಬೇರೆ ಬೇರೆ ವೆಬ್‌ಸೈಟ್‌ ಮೂಲಕ ಆ್ಯಪ್‌ ಡೌನ್‌ ಲೋಡ್‌ ಮಾಡಬೇಡಿ.

5 ಅಪರಿಚಿತ ನಂಬರ್‌ ಹಾಗೂಇ-ಮೇಲ್‌ ಗಳಲ್ಲಿರುವ ಬರುವ ಸಂದೇಶ, ಫೋಟೋಗಳ ಮೇಲೆ ಕ್ಲಿಕ್‌ ಮಾಡಬೇಡಿ.

6 ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್‌ ಜಾರ್ಜಿಂಗ್‌ ಮಾಡುವಾಗ ಎಚ್ಚರಿಕೆ ವಹಿಸಿ

ಸಾರ್ವಜನಿಕ ಸ್ಥಳಗಳಲ್ಲಿರುವ ಮೊಬೈಲ್‌ ಚಾರ್ಜಿಂಗ್‌ ಪಾಯಿಂಟ್‌, ಯುಎಸ್‌ಬಿ ಕೇಬಲ್‌ ಬಳಸಿ ಮೊಬೈಲ್‌ ಚಾರ್ಜಿಂಗ್‌ ಮಾಡುವಾಗ ಎಚ್ಚರಿಕೆ ವಹಿಸಿ. ತಮ್ಮ ಸ್ವಂತ ಚಾರ್ಜಿಂಗ್‌ ವ್ಯವಸ್ಥೆಯಲ್ಲೇ ಮೊಬೈಲ್‌ ಚಾರ್ಜಿಂಗ್‌ ಮಾಡಿಕೊಳ್ಳಿ. ಫ್ರೀ ವೈ-ಫೈ ನಲ್ಲಿ ಇಂಟರ್ನೆಟ್‌ ಬ್ಯಾಂಕಿಂಗ್‌ ಹಾಗೂ ವೈಯಕ್ತಿಕ ವಿಚಾರ ಚರ್ಚೆ ಮಾಡಬೇಡಿ. ಆಮಿಷವೊಡ್ಡುವ ಜಾಹೀರಾತುಗಳ ಲಿಂಕ್‌ ಒತ್ತಬೇಡಿ.

  • ಬಿ.ಎನ್‌.ಫ‌ಣಿಂಧರ್‌, ವಿಧಿ ವಿಜ್ಞಾನ ತಜ್ಞರು, ಐಟಿ ವಕೀಲರು

ಮೋಹನ್ ಭದ್ರಾವತಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

GST ನೊಂದವಣಿಗಾಗಿ ಲಂಚ ಸ್ವೀಕರಿಸುತ್ತಿದ್ದ ಡಾಟಾ ಎಂಟ್ರಿ ಆಪರೇಟರ್ ಎಸಿಬಿ ಬಲೆಗೆ

GST ನೊಂದವಣಿಗಾಗಿ ಲಂಚ ಸ್ವೀಕರಿಸುತ್ತಿದ್ದ ಡಾಟಾ ಎಂಟ್ರಿ ಆಪರೇಟರ್ ಎಸಿಬಿ ಬಲೆಗೆ

ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಭರ್ಜರಿ 834 ಅಂಕ ಏರಿಕೆ: ನಿಫ್ಟಿ 14,500

ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಭರ್ಜರಿ 834 ಅಂಕ ಏರಿಕೆ: ನಿಫ್ಟಿ 14,500

ಈಗಿರುವ ಎಲ್ಲಾ ಸಚಿವರನ್ನು ಕೈಬಿಟ್ಟು, ಹೊಸ ಸಂಪುಟ ರಚಿಸಿ: ಬಿಜೆಪಿ ಶಾಸಕ ಶಿವನಗೌಡ ನಾಯಕ್

ಈಗಿರುವ ಎಲ್ಲಾ ಸಚಿವರನ್ನು ಕೈಬಿಟ್ಟು, ಹೊಸ ಸಂಪುಟ ರಚಿಸಿ: ಬಿಜೆಪಿ ಶಾಸಕ ಶಿವನಗೌಡ ನಾಯಕ್

ರಾಷ್ಟ್ರ ರಾಜಧಾನಿಯಲ್ಲಿ ಇಂಧನ ಬೆಲೆ ದುಪ್ಪಟ್ಟು, ಮುಂಬೈಯಲ್ಲಿ ಪೆಟ್ರೋಲ್ ಲೀಟರ್ ಗೆ  92ರೂ.

ರಾಷ್ಟ್ರ ರಾಜಧಾನಿಯಲ್ಲಿ ಇಂಧನ ಬೆಲೆ ದುಪ್ಪಟ್ಟು, ಮುಂಬೈಯಲ್ಲಿ ಪೆಟ್ರೋಲ್ ಲೀಟರ್ ಗೆ  92ರೂ.

ಹೊಸ ಫೀಚರ್‌ ಜತೆಗೆ ಟಾಟಾ ಅಲ್ಟೋಸ್‌ ಐ ಟರ್ಬೋ

ಹೊಸ ಫೀಚರ್‌ ಜತೆಗೆ ಟಾಟಾ ಅಲ್ಟೋಸ್‌ ಐ ಟರ್ಬೋ

ವೀರೋಚಿತ ಸರಣಿ ಗೆಲುವಿನ ಹಿಂದಿದೆ ನೋವು ಅವಮಾನ.. ಈ ಸರಣಿಯಲ್ಲಿ ಭಾರತ ಗಳಿಸಿದ್ದೇನು?

ವೀರೋಚಿತ ಸರಣಿ ಗೆಲುವಿನ ಹಿಂದಿದೆ ನೋವು ಅವಮಾನ..! ಈ ಸರಣಿಯಲ್ಲಿ ಭಾರತ ಗಳಿಸಿದ್ದೇನು?

ಕೋವಿಡ್ ಸೋಂಕಿಗೆ ಹೆದರಿ 3 ತಿಂಗಳು ವಿಮಾನ ನಿಲ್ದಾಣದಲ್ಲಿ ಅಡಗಿ ಕುಳಿತ ಭಾರತೀಯ ವ್ಯಕ್ತಿ

ಕೋವಿಡ್ ಸೋಂಕಿಗೆ ಹೆದರಿ 3 ತಿಂಗಳು ವಿಮಾನ ನಿಲ್ದಾಣದಲ್ಲಿ ಅಡಗಿ ಕುಳಿತ ಭಾರತೀಯ ವ್ಯಕ್ತಿ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GST ನೊಂದವಣಿಗಾಗಿ ಲಂಚ ಸ್ವೀಕರಿಸುತ್ತಿದ್ದ ಡಾಟಾ ಎಂಟ್ರಿ ಆಪರೇಟರ್ ಎಸಿಬಿ ಬಲೆಗೆ

GST ನೊಂದವಣಿಗಾಗಿ ಲಂಚ ಸ್ವೀಕರಿಸುತ್ತಿದ್ದ ಡಾಟಾ ಎಂಟ್ರಿ ಆಪರೇಟರ್ ಎಸಿಬಿ ಬಲೆಗೆ

ಬೈಪಾಸ್‌ ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಟೋಲ್‌ಗೇಟ್‌ಗೆ ಮುತ್ತಿಗೆ, ಪೊಲೀಸರ ಜತೆ ಚಕಮಕಿ

ಬೈಪಾಸ್‌ ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಟೋಲ್‌ಗೇಟ್‌ಗೆ ಮುತ್ತಿಗೆ, ಪೊಲೀಸರ ಜತೆ ಚಕಮಕಿ

ಈಗಿರುವ ಎಲ್ಲಾ ಸಚಿವರನ್ನು ಕೈಬಿಟ್ಟು, ಹೊಸ ಸಂಪುಟ ರಚಿಸಿ: ಬಿಜೆಪಿ ಶಾಸಕ ಶಿವನಗೌಡ ನಾಯಕ್

ಈಗಿರುವ ಎಲ್ಲಾ ಸಚಿವರನ್ನು ಕೈಬಿಟ್ಟು, ಹೊಸ ಸಂಪುಟ ರಚಿಸಿ: ಬಿಜೆಪಿ ಶಾಸಕ ಶಿವನಗೌಡ ನಾಯಕ್

ಮೈಸೂರಿಗೆ ಬಂದು ಪಕ್ಷದಿಂದ ಹೊರಗೆ ಹಾಕುತ್ತೇನೆಂದು ಕುಮಾರಸ್ವಾಮಿ ಹೇಳಿದ್ದರು: ಜಿ.ಟಿ.ದೇವೇಗೌಡ

ಮೈಸೂರಿಗೆ ಬಂದು ಪಕ್ಷದಿಂದ ಹೊರಗೆ ಹಾಕುತ್ತೇನೆಂದು ಕುಮಾರಸ್ವಾಮಿ ಹೇಳಿದ್ದರು: ಜಿ.ಟಿ.ದೇವೇಗೌಡ

ತುಮಕೂರು: ಹಣದ ಸಮೇತ ಎಟಿಎಂ ಯಂತ್ರವನ್ನೇ ಹೊತ್ತೊಯ್ದ ಕಳ್ಳರು

ತುಮಕೂರು: ಹಣದ ಸಮೇತ ಎಟಿಎಂ ಯಂತ್ರವನ್ನೇ ಹೊತ್ತೊಯ್ದ ಕಳ್ಳರು ;ಪೊಲೀಸರಿಂದ ಕಾರ್ಯಾಚರಣೆ

MUST WATCH

udayavani youtube

ಮಂಗಳೂರು ಗೋಲಿಬಾರ್ ಗೆ ಪ್ರತೀಕಾರ: ಪೊಲೀಸ್ ಸಿಬ್ಬಂದಿ ಕೊಲೆ ಯತ್ನದ ಹಿಂದೆ ‘ಮಾಯಾ ಗ್ಯಾಂಗ್’

udayavani youtube

ಪಾರ್ಕಿಂಗ್ ಪರದಾಟ ಅಭಿಯಾನ; ಸುದಿನ ಸಂವಾದ

udayavani youtube

ಕಂದಮ್ಮನೆಡೆ ಮನೆಯವರನ್ನು ಕರೆದೊಯ್ದ ಗೋಮಾತೆ….

udayavani youtube

KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ | Udayavani

udayavani youtube

Whatsapp ಅನ್ನು ಓವರ್ ಟೇಕ್ ಮಾಡಿದ ಸಿಗ್ನಲ್!!??

ಹೊಸ ಸೇರ್ಪಡೆ

GST ನೊಂದವಣಿಗಾಗಿ ಲಂಚ ಸ್ವೀಕರಿಸುತ್ತಿದ್ದ ಡಾಟಾ ಎಂಟ್ರಿ ಆಪರೇಟರ್ ಎಸಿಬಿ ಬಲೆಗೆ

GST ನೊಂದವಣಿಗಾಗಿ ಲಂಚ ಸ್ವೀಕರಿಸುತ್ತಿದ್ದ ಡಾಟಾ ಎಂಟ್ರಿ ಆಪರೇಟರ್ ಎಸಿಬಿ ಬಲೆಗೆ

ತಂತ್ರಾಂಶ ಬಳಸಿ ಭವಿಷ್ಯದ ಕನ್ನಡ ಕಟ್ಟಿ: ಟಿ.ಎಸ್‌.ನಾಗಾಭರಣ

ತಂತ್ರಾಂಶ ಬಳಸಿ ಭವಿಷ್ಯದ ಕನ್ನಡ ಕಟ್ಟಿ: ಟಿ.ಎಸ್‌.ನಾಗಾಭರಣ

ಬೈಪಾಸ್‌ ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಟೋಲ್‌ಗೇಟ್‌ಗೆ ಮುತ್ತಿಗೆ, ಪೊಲೀಸರ ಜತೆ ಚಕಮಕಿ

ಬೈಪಾಸ್‌ ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಟೋಲ್‌ಗೇಟ್‌ಗೆ ಮುತ್ತಿಗೆ, ಪೊಲೀಸರ ಜತೆ ಚಕಮಕಿ

ಜನರ ಮಧ್ಯೆ ತೆರಳಿ ಕಾಂಗ್ರೆಸ್‌ ಹೋರಾಟ; ವಿಭಾಗ ಮಟ್ಟದ ಸಂಕಲ್ಪ ಸಮಾವೇಶ

ಜನರ ಮಧ್ಯೆ ತೆರಳಿ ಕಾಂಗ್ರೆಸ್‌ ಹೋರಾಟ; ವಿಭಾಗ ಮಟ್ಟದ ಸಂಕಲ್ಪ ಸಮಾವೇಶ

ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಭರ್ಜರಿ 834 ಅಂಕ ಏರಿಕೆ: ನಿಫ್ಟಿ 14,500

ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಭರ್ಜರಿ 834 ಅಂಕ ಏರಿಕೆ: ನಿಫ್ಟಿ 14,500

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.