ಸವಾಲಾಗಿದೆ ವಿದ್ಯಾರ್ಥಿಗಳ ಮೌಲ್ಯಮಾಪನ

Team Udayavani, Apr 1, 2021, 6:00 AM IST

ಸವಾಲಾಗಿದೆ ವಿದ್ಯಾರ್ಥಿಗಳ ಮೌಲ್ಯಮಾಪನ

ಬೆಂಗಳೂರು: ರಾಜ್ಯದ ಖಾಸಗಿ ಹಾಗೂ ಬಹುತೇಕ ಅನುದಾನಿತ ಶಾಲೆಯ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕವೇ ಪರೀಕ್ಷೆ ಅಥವಾ ಮೌಲ್ಯಮಾಪನಕ್ಕೆ ಸಿದ್ಧತೆ ನಡೆದಿದೆ.  ಆದರೆ, ಸರಕಾರಿ ಶಾಲೆಯ  ಮಕ್ಕಳ ಮೌಲ್ಯಮಾಪನ ನಡೆಸುವುದು ಸಾರ್ವಜನಿಕ ಶಿಕ್ಷಣ ಇಲಾಖೆಗೆ ದೊಡ್ಡ ಸವಾಲಾಗಿದೆ.

1ರಿಂದ 9ನೇ ತರಗತಿ ವಿದ್ಯಾರ್ಥಿಗಳನ್ನು  ಮೌಲ್ಯಮಾಪನ ಅಥವಾ ಪರೀಕ್ಷೆ ನಡೆಸಿಯೇ ತೇರ್ಗಡೆ ಮಾಡಲಾಗುವುದು ಎಂದು ಸರಕಾರ ಈಗಾಗಲೇ ಸ್ಪಷ್ಪಪಡಿಸಿದೆ. 6ರಿಂದ ಮೇಲ್ಪಟ್ಟ ತರಗತಿಗಳ ವಿದ್ಯಾರ್ಥಿಗಳಿಗೆ ನಿತ್ಯವೂ ಶಾಲೆಯಲ್ಲೇ ತರಗತಿ ನಡೆಯುತ್ತಿರುವುದರಿಂದ ಪರ್ಯಾಯ ಕಲಿಕಾ ವಿಧಾನದ ಆಧಾರದಲ್ಲಿ ಮೌಲ್ಯಮಾಪನ ಹಾಗೂ ತರಗತಿ ಪರೀಕ್ಷೆಗಳು ನಡೆಸಲಾಗುತ್ತದೆ. ಆದರೆ, 1ರಿಂದ 5ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಮಾಪನ  ಹೇಗೆ ಎಂಬ ಬಗ್ಗೆ ಅಧಿಕಾರಿಗಳು ಒಂದು ಸುತ್ತಿನ ಚರ್ಚೆಯನ್ನು ನಡೆಸಿದ್ದಾರೆ. ಆದರೆ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಎಂಬ ಮಾಹಿತಿ “ಉದಯವಾಣಿ’ಗೆ ಲಭ್ಯವಾಗಿದೆ.

ಆನ್‌ಲೈನ್‌ ತರಗತಿ ಆಧಾರಿತ ಮೌಲ್ಯಮಾಪನ :

ಖಾಸಗಿ ಹಾಗೂ ಬಹುತೇಕ ಅನುದಾನಿತ ಶಾಲೆಗಳು 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಹಾಗೂ ಪೂರ್ವ ಮುದ್ರಿತ ವೀಡಿಯೋ ತರಗತಿಗಳನ್ನು ನಡೆಸುತ್ತಿದ್ದು, ಆನ್‌ಲೈನ್‌ ಮೂಲಕವೇ ಪರೀಕ್ಷೆ ನಡೆಸಲಿವೆ ಎಂದು ಖಾಸಗಿ ಶಾಲಾಡಳಿತ ಮಂಡಳಿಯ ಒಕ್ಕೂಟದ ಮೂಲಗಳು ತಿಳಿಸಿವೆ.

ಭೌತಿಕ ತರಗತಿಯೇ ನಡೆದಿಲ್ಲ :

ಸರಕಾರಿ ಶಾಲೆಯಲ್ಲಿ 1ರಿಂದ 5ನೇ ತರಗತಿಗೆ ಆನ್‌ಲೈನ್‌ ತರಗತಿ ಅಥವಾ ಪೂರ್ವ ಮುದ್ರಿತ ವೀಡಿಯೋ ತರಗತಿ  ನಡೆದಿಲ್ಲ. ಕೆಲವು ಶಾಲೆಗಳಲ್ಲಿ ಶಿಕ್ಷಕರು ವಿಶೇಷ ಆಸಕ್ತಿ ವಹಿಸಿ ಪಾಲಕ, ಪೋಷಕರ ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳನ್ನು ರಚಿಸಿಕೊಂಡು, ವಾರಕ್ಕೆ ಒಂದು ಅಥವಾ ಎರಡು ಪಠ್ಯಾಧಾರಿತ ಮಾಹಿತಿಗಳನ್ನು  ಅಪ್‌ಲೋಡ್‌ ಮಾಡುತ್ತಿದ್ದರು. ರೇಡಿಯೋ  ಪಾಠ ಪ್ರಸಾರವಾಗುತ್ತಿದೆ. ಆದರೆ,  ಅದರ ಆಧಾರದಲ್ಲಿ  ಮೌಲ್ಯಮಾಪನ  ಸಾಧ್ಯವಿಲ್ಲ.  ಹೀಗಾಗಿ  ತೇರ್ಗಡೆ ಮಾಡುವುದು ಹೇಗೆ ಎಂಬುದರ ಬಗ್ಗೆ ಗಂಭೀರ ಚರ್ಚೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿ ನಡೆಯುತ್ತಿರುವುದರಿಂದ ಮೌಲ್ಯಮಾಪನ ಮಾಡುವುದು ಸುಲಭ. ಆದರೆ, 1ರಿಂದ 5ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು  ನಡೆಯದೆ ಇರುವುದರಿಂದ ಮೌಲ್ಯಮಾಪನ  ಸವಾಲಾಗಿದೆ. ಈ ಬಗ್ಗೆ ಚರ್ಚೆ ನಡೆಸುತ್ತಿದ್ದು, ಒಂದೆರಡು ದಿನದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ವಿ.ಅನ್ಬುಕುಮಾರ್‌, ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ

ಟಾಪ್ ನ್ಯೂಸ್

ಐ ಫೋನ್‌ ಬುಕ್‌ ಮಾಡಿ 66,000 ರೂ. ಕಳೆದುಕೊಂಡರು!

ಐ ಫೋನ್‌ ಬುಕ್‌ ಮಾಡಿ 66,000 ರೂ. ಕಳೆದುಕೊಂಡರು!

ಭಕ್ತಿ, ಮಾರುಕಟ್ಟೆಯಲ್ಲಿ ಖರೀದಿಸುವ ಸರಕಲ್ಲ: ಪೇಜಾವರ ಶ್ರೀ

ಭಕ್ತಿ, ಮಾರುಕಟ್ಟೆಯಲ್ಲಿ ಖರೀದಿಸುವ ಸರಕಲ್ಲ: ಪೇಜಾವರ ಶ್ರೀ

ಸಚಿವ ಸ್ಥಾನ ಕಿತ್ತುಕೊಂಡ ಶೇ.1 ಕಮಿಷನ್‌ ಆಸೆ!

ಸಚಿವ ಸ್ಥಾನ ಕಿತ್ತುಕೊಂಡ ಶೇ.1 ಕಮಿಷನ್‌ ಆಸೆ!

ಆಪ್‌ ಸಿಎಂ ಅಭ್ಯರ್ಥಿ ಅಜಯ್‌ ಕೊಟಿಯಾಲ್‌ ಬಿಜೆಪಿಗೆ!

ಆಪ್‌ ಸಿಎಂ ಅಭ್ಯರ್ಥಿ ಅಜಯ್‌ ಕೊಟಿಯಾಲ್‌ ಬಿಜೆಪಿಗೆ!

ಭುಗಿಲೆದ್ದ ಹಿಂಸಾಚಾರ: ಆಂಧ್ರಪ್ರದೇಶದಲ್ಲಿ ಸಚಿವ, ಶಾಸಕರ ಮನೆಗೆ ಬೆಂಕಿ!

ಭುಗಿಲೆದ್ದ ಹಿಂಸಾಚಾರ: ಆಂಧ್ರಪ್ರದೇಶದಲ್ಲಿ ಸಚಿವ, ಶಾಸಕರ ಮನೆಗೆ ಬೆಂಕಿ!

ಶ್ರೀನಗರ ಗುಂಡಿನ ದಾಳಿ: ಪೊಲೀಸ್‌ ಪೇದೆಯನ್ನು ಕೊಂದ ಉಗ್ರರು

ಶ್ರೀನಗರ ಗುಂಡಿನ ದಾಳಿ: ಪೊಲೀಸ್‌ ಪೇದೆಯನ್ನು ಕೊಂದ ಉಗ್ರರು

ರಾಹುಲ್‌ ಗಾಂಧಿ-ಜೆರೆಮಿ ಕಾರ್ಬಿನ್‌ ಭೇಟಿ ವಿವಾದ

ರಾಹುಲ್‌ ಗಾಂಧಿ-ಜೆರೆಮಿ ಕಾರ್ಬಿನ್‌ ಭೇಟಿ ವಿವಾದಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಕ್ತಿ, ಮಾರುಕಟ್ಟೆಯಲ್ಲಿ ಖರೀದಿಸುವ ಸರಕಲ್ಲ: ಪೇಜಾವರ ಶ್ರೀ

ಭಕ್ತಿ, ಮಾರುಕಟ್ಟೆಯಲ್ಲಿ ಖರೀದಿಸುವ ಸರಕಲ್ಲ: ಪೇಜಾವರ ಶ್ರೀ

ವಿಜಯಪುರ : ಆಲಮಟ್ಟಿ ಶಾಸ್ತ್ರಿ ಸಾಗರ ಉದ್ಯಾನ ವೀಕ್ಷಿಸಿದ ರಾಜ್ಯಪಾಲ ಗೆಹ್ಲೋಟ್

ವಿಜಯಪುರ : ಆಲಮಟ್ಟಿ ಶಾಸ್ತ್ರಿ ಸಾಗರ ಉದ್ಯಾನ ವೀಕ್ಷಿಸಿದ ರಾಜ್ಯಪಾಲ ಗೆಹ್ಲೋಟ್

ವಿಧಾನ ಪರಿಷತ್‌ ಚುನಾವಣೆ: ಜೆಡಿಎಸ್‌ ಅಭ್ಯರ್ಥಿಯಾಗಿ ಟಿ.ಎ.ಶರವಣ ನಾಮಪತ್ರ

ವಿಧಾನ ಪರಿಷತ್‌ ಚುನಾವಣೆ: ಜೆಡಿಎಸ್‌ ಅಭ್ಯರ್ಥಿಯಾಗಿ ಟಿ.ಎ.ಶರವಣ ನಾಮಪತ್ರ

ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಸಮಿತಿ ರಚನೆ

ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಸಮಿತಿ ರಚನೆ

ಮಡಿಕೇರಿ : ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತೆ ಆತ್ಮಹತ್ಯೆ

ಮಡಿಕೇರಿ : ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತೆ ಆತ್ಮಹತ್ಯೆಗೆ ಶರಣು

MUST WATCH

udayavani youtube

SSLC ಸಾಧಕರಿಗೆ ಉದಯವಾಣಿ ಸನ್ಮಾನ

udayavani youtube

ಉಡುಪಿ : ಹಲವು ಸಂಶಯಗಳನ್ನು ಹುಟ್ಟು ಹಾಕಿದ ಯುವಜೋಡಿ ಸಾವು ಪ್ರಕರಣ

udayavani youtube

ವೈದ್ಯರ ನಿರ್ಲಕ್ಷದಿಂದ ನೆಲದ ಮೇಲೆ ನರಳಾಡಿದ ಗರ್ಭಿಣಿ

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

udayavani youtube

ದಾವೋಸ್ ನಲ್ಲಿ ಸಿಎಂ : ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

ಹೊಸ ಸೇರ್ಪಡೆ

ಐ ಫೋನ್‌ ಬುಕ್‌ ಮಾಡಿ 66,000 ರೂ. ಕಳೆದುಕೊಂಡರು!

ಐ ಫೋನ್‌ ಬುಕ್‌ ಮಾಡಿ 66,000 ರೂ. ಕಳೆದುಕೊಂಡರು!

ಭಕ್ತಿ, ಮಾರುಕಟ್ಟೆಯಲ್ಲಿ ಖರೀದಿಸುವ ಸರಕಲ್ಲ: ಪೇಜಾವರ ಶ್ರೀ

ಭಕ್ತಿ, ಮಾರುಕಟ್ಟೆಯಲ್ಲಿ ಖರೀದಿಸುವ ಸರಕಲ್ಲ: ಪೇಜಾವರ ಶ್ರೀ

ಸಚಿವ ಸ್ಥಾನ ಕಿತ್ತುಕೊಂಡ ಶೇ.1 ಕಮಿಷನ್‌ ಆಸೆ!

ಸಚಿವ ಸ್ಥಾನ ಕಿತ್ತುಕೊಂಡ ಶೇ.1 ಕಮಿಷನ್‌ ಆಸೆ!

ಆಪ್‌ ಸಿಎಂ ಅಭ್ಯರ್ಥಿ ಅಜಯ್‌ ಕೊಟಿಯಾಲ್‌ ಬಿಜೆಪಿಗೆ!

ಆಪ್‌ ಸಿಎಂ ಅಭ್ಯರ್ಥಿ ಅಜಯ್‌ ಕೊಟಿಯಾಲ್‌ ಬಿಜೆಪಿಗೆ!

ಭುಗಿಲೆದ್ದ ಹಿಂಸಾಚಾರ: ಆಂಧ್ರಪ್ರದೇಶದಲ್ಲಿ ಸಚಿವ, ಶಾಸಕರ ಮನೆಗೆ ಬೆಂಕಿ!

ಭುಗಿಲೆದ್ದ ಹಿಂಸಾಚಾರ: ಆಂಧ್ರಪ್ರದೇಶದಲ್ಲಿ ಸಚಿವ, ಶಾಸಕರ ಮನೆಗೆ ಬೆಂಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.