“ಸುರೇಶ್ ಕೊಲೆ ಯತ್ನ: ಹೇಳಿದವರಿಗಷ್ಟೇ ಗೊತ್ತು ಸತ್ಯ’
Team Udayavani, Oct 22, 2019, 3:00 AM IST
ಬೆಂಗಳೂರು: ಶಾಸಕ ಬೈರತಿ ಸುರೇಶ್ ಅವರ ಮೇಲೆ ನಡೆದ ಕೊಲೆ ಯತ್ನ ಪ್ರಕರಣ ರಾಜಕೀಯ ಪ್ರೇರಿತವಲ್ಲ ಎಂದು ಸ್ವತಃ ಅವರೇ ಹೇಳಿದ್ದಾರೆ. ಆದರೆ ಘಟನೆ ಎಷ್ಟು ಸತ್ಯ ಎಂಬುದು ನೋಡಿದವರು, ಹೇಳಿದವರಿಗೇ ಗೊತ್ತು ಎಂದು ಅನರ್ಹಗೊಂಡ ಶಾಸಕ ಎಂ.ಟಿ.ಬಿ.ನಾಗರಾಜ್ ಹೇಳಿದರು. ಗೃಹ ಕಚೇರಿ “ಕೃಷ್ಣಾ’ದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಸೋಮವಾರ ಭೇಟಿಯಾದ ಬಳಿಕ ಪ್ರತಿಕ್ರಿಯಿಸಿ, ಕೊಲೆಗೆ ಯತ್ನ ನಡೆಸಿದ್ದಾರೆ ಎನ್ನಲಾದ ವ್ಯಕ್ತಿಯ ತಂದೆ ನಾಟಕದ ಮೇಷ್ಟ್ರಾಗಿದ್ದು, ಬಡ ಕುಟುಂಬದವರು.
ಸುರೇಶ್ ಅವರ ಅನುಕೂಲಕ್ಕಾಗಿಯೇ ಹೀಗೆ ಮಾಡಿದ್ದಾರೆ ಎಂಬ ಮಾತುಗಳೂ ಇವೆ ಎಂದು ಮಾರ್ಮಿಕವಾಗಿ ನುಡಿದರು. ಹೊಸಕೋಟೆ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಸೃಷ್ಟಿಯಾಗಿರುವ ಕೆಲ ಸಮಸ್ಯೆಗಳು ಈ ಕ್ಷಣದವರೆಗೆ ಬಗೆಹರಿದಿಲ್ಲ. ನಾವು ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್‌ನವರು ಕೆಲಸ ಮಾಡುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿಯೂ ಕೆಲಸ ಮಾಡುತ್ತಿದ್ದಾರೆ ಎಂದು ಶರತ್ ಬಚ್ಚೇಗೌಡ ಹೆಸರು ಹೇಳದೆ ಅಸಮಾಧಾನ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೈದ್ದಾಂತಿಕ ಬದ್ಧತೆಯ ಬಗ್ಗೆ ರಾಹುಲ್ ಗಾಂಧಿ ಬಿಡಿಸಿ ಹೇಳಬೇಕು: ಕುಮಾರಸ್ವಾಮಿ
ಕೋಕಂ ಜ್ಯೂಸ್ ಮಾರಾಟ ನೆಪದಲ್ಲಿ ಗಾಂಜಾ ಸಾಗಾಟ; ಬೆಳ್ತಂಗಡಿಯ ಓರ್ವ ಸಹಿತ ಮೂವರ ಬಂಧನ
ಭಾರತ್ ಜೋಡೋ ಅಲ್ಲ, ಕಾಂಗ್ರೆಸ್ ನವರೇ ಭಾರತ್ ಛೋಡೋ..; ಬಿಜೆಪಿ ಟೀಕೆ
ಪೊನ್ನಂಪೇಟೆಯಲ್ಲಿ ತ್ರಿಶೂಲ ದೀಕ್ಷೆ,ಏರ್ ಗನ್ ತರಬೇತಿ; ಸಂಘ ಪರಿವಾರದ ನಡೆಗೆ ತೀವ್ರ ಆಕ್ಷೇಪ
ಬಿಜೆಪಿ ನಾಯಕರು ಗತಿಯಿಲ್ಲದೆ, ಮತಿಯಿಲ್ಲದ ನಿರ್ಮಲಾರನ್ನು ರಾಜ್ಯಸಭೆಗೆ ಕಳಿಸಲು ಹೊರಟಿದ್ದಾರೆ