ದುಬೈನಿಂದ ವಾಟ್ಸ್ಆ್ಯಪ್ನಲ್ಲೇ ಶಿವಮೊಗ್ಗದ ಪತ್ನಿಗೆ ತಲಾಖ್!
Team Udayavani, Sep 19, 2019, 3:00 AM IST
ಶಿವಮೊಗ್ಗ: 21 ವರ್ಷ ಸಂಸಾರ ನಡೆಸಿದ ಪತಿರಾಯ ಪತ್ನಿಗೆ ವಾಟ್ಸ್ಆ್ಯಪ್ನಲ್ಲೇ 3 ಬಾರಿ ತಲಾಕ್ ನೀಡಿದ್ದಾನೆ. ಇದರಿಂದ ನೊಂದ ಪತ್ನಿ ನ್ಯಾಯ ಕೊಡಿಸುವಂತೆ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಗರದ ಟ್ಯಾಂಕ್ ಮೊಹಲ್ಲಾ ನಿವಾಸಿಯಾಗಿರುವ ಆಯಿಶಾ ಸಿದ್ದಿಕಾ ಅದೇ ಬಡಾವಣೆಯ ಮುಸ್ತಫಾ ಬೇಗ್ ಜತೆ ಪ್ರೀತಿಯಾಗಿ 21 ವರ್ಷಗಳ ಹಿಂದೆಯೇ ಮದುವೆಯಾಗಿದ್ದರು.
ದುಬೈನಲ್ಲಿ ಸಿಸಿ ಕ್ಯಾಮೆರಾ, ಲ್ಯಾಪ್ಟಾಪ್ ಟೆಕ್ನಿಶಿಯನ್ ಆಗಿರುವ ಮುಸ್ತಫಾ ವರ್ಷಕ್ಕೆರಡು ಬಾರಿ ಪತ್ನಿ ಹಾಗೂ ದತ್ತು ಮಗಳನ್ನು ನೋಡಲು ಬರುತ್ತಿದ್ದ. ಜತೆಗೆ ಪ್ರತಿ ತಿಂಗಳು ಹಣ ಕಳುಹಿಸುತ್ತಿದ್ದ. ಈ ವರ್ಷ ಜನವರಿಯಲ್ಲಿ ಭಾರತಕ್ಕೆ ಬಂದು ವಾಪಸ್ ಹೋದ ಮೇಲೆ ವಾಟ್ಸ್ಆ್ಯಪ್ನಿಂದ ಪತ್ನಿಗೆ ತಲಾಖ್ ಸಂದೇಶ ಕಳುಹಿಸಿದ್ದಾನೆ. ಇದನ್ನು ಒಪ್ಪದ ಪತ್ನಿ ಮಾತು ಮುಂದುವರಿಸಲು ಪ್ರಯತ್ನಿಸಿದಾಗ ಮತ್ತೆರಡು ಬಾರಿ ತಲಾಖ್ ಸಂದೇಶ ಕಳಿಸಿದ್ದಾನೆ.
ತಲಾಖ್ ನೀಡಬೇಡಿ ಎಂದು ಪತಿಗೆ ಅಂಗಲಾಚಿದರೂ ಕೇಳಿಲ್ಲ ಎಂದು ಪತ್ನಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮೋದಿ ತಲಾಖ್ ನಿಷೇಧ ಕಾನೂನು ಜಾರಿಗೆ ತಂದಿದ್ದು, ನಾನು ಅವರಿಗೆ ಟ್ವೀಟ್ ಮಾಡಿ, ಅವರನ್ನೂ ಭೇಟಿ ಮಾಡಿ, ನ್ಯಾಯಕ್ಕಾಗಿ ಕೇಳುವೆ ಎಂದು ಆಯಿಶಾ ಸಿದ್ದಿಕಾ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Election Commission: ಪ್ರಿಯಾಂಕ್ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು
Congress party: ಮಾಲೀಕಯ್ಯ ಗುತ್ತೇದಾರ್ ಇಂದು ಕಾಂಗ್ರೆಸ್ ಸೇರ್ಪಡೆ
Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು