
ಡಿಸೆಂಬರ್ ವೇಳೆಗೆ ನೈತಿಕ ಶಿಕ್ಷಣ ಬೋಧನೆ: ಸಚಿವ ನಾಗೇಶ್
Team Udayavani, Sep 19, 2022, 8:45 PM IST

ಬೆಂಗಳೂರು: ಪ್ರಸಕ್ತ ಸಾಲಿನಲ್ಲೇ ನೈತಿಕ ಶಿಕ್ಷಣ ಜಾರಿಗೊಳಿಸಲು ಸರಕಾರ ಉದ್ದೇಶಿಸಿದ್ದು, ಇದರಲ್ಲಿ ಭಗವದ್ಗೀತೆಯ ಅಂಶಗಳೂ ಇರಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಸೋಮವಾರ ಪ್ರಶ್ನೋತ್ತರ ವೇಳೆ ಬಿಜೆಪಿಯ ಎಂ.ಕೆ. ಪ್ರಾಣೇಶ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನೈತಿಕ ಶಿಕ್ಷಣದಲ್ಲಿ ಏನೇನು ಇರಬೇಕು ಎಂಬುದರ ಬಗ್ಗೆ ತಜ್ಞರ ಸಮಿತಿ ಶಿಫಾರಸು ಮಾಡಲಿದೆ ಎಂದು ಹೇಳಿದರು.
ಲಿಖೀತ ಉತ್ತರದಲ್ಲಿ, ಪ್ರಸ್ತುತ ಶಾಲಾ ಪಠ್ಯ ಪುಸ್ತಕಗಳಲ್ಲಿ ಭಗವದ್ಗೀತೆಯನ್ನು ಪ್ರತ್ಯೇಕವಾಗಿ ಬೋಧಿಸುವ ವಿಚಾರ ಸರಕಾರದ ಮುಂದಿಲ್ಲ ಎಂದು ಹೇಳಲಾಗಿದೆ. ಹಾಗಿದ್ದರೆ ಭಗವದ್ಗೀತೆ ಕಲಿಸುವುದಾಗಿ ಹೇಳಲು ಮುಜುಗರವೇ ಎಂದು ಪ್ರಾಣೇಶ್ ಖಾರವಾಗಿ ಕೇಳಿದರು. ಇದಕ್ಕೆ ಉತ್ತರಿಸಿದ ಸಚಿವರು, ಪ್ರಸಕ್ತ ಸಾಲಿನಲ್ಲಿ ಪ್ರತ್ಯೇಕವಾಗಿ ಬೋಧಿಸುತ್ತಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇವೆ. ಇದರಲ್ಲಿ ಮುಜುಗರದ ಪ್ರಶ್ನೆಯೇ ಇಲ್ಲ ಎಂದರು.
ಪಠ್ಯದಲ್ಲಿ ಆಯಾ ಜಿಲ್ಲೆಗಳ ಇತಿಹಾಸ
ಇನ್ನು ಮುಂದಿನ ಪಠ್ಯಪುಸ್ತಕ ಪುನರ್‌ರಚನೆಯ ಸಂದರ್ಭದಲ್ಲಿ ಜಿಲ್ಲೆಗಳ ಸ್ಥಳೀಯ ಇತಿಹಾಸವನ್ನು ಆಯಾ ಜಿಲ್ಲಾ ಮಕ್ಕಳಿಗೆ ತಿಳಿಸುವ ಕುರಿತು ತಜ್ಞರ ಸಲಹೆ ಮೇರೆಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಪ್ರಸ್ತುತ ಜಾರಿಯಲ್ಲಿರುವ 7ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದ “ಮೈಸೂರು ಮತ್ತು ಇತರ ಸಂಸ್ಥಾನಗಳು’ ಅಧ್ಯಾಯದಲ್ಲಿ ತುಳುನಾಡು ಎಂಬ ಪ್ರತ್ಯೇಕ ಉಪ ಘಟಕವಿದ್ದು, ತುಳುನಾಡಿನಲ್ಲಿ ಆಳಿದ ಅರಸು ಮನೆತನಗಳ ಬಾಕೂìರು ರಾಜಧಾನಿಯ ಆಳುಪ ಮನೆತನದ ವಿವರವು ಉಪಘಟಕದಲ್ಲಿದೆ ಎಂದು ತಿಳಿಸಿದರು.
6ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದ “ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ’ ಎಂಬ ಪಾಠದಲ್ಲಿ ಕರ್ನಾಟಕ ಕರಾವಳಿ ಪ್ರದೇಶ ಆಳುಪ ಮನೆತನದ ಅರಸರ ಬಗ್ಗೆಯೂ ಉಲ್ಲೇಖವಿದೆ.
ಜತೆಗೆ 6-10ನೇ ತರಗತಿಗೆ ತೃತೀಯ ಭಾಷೆಯಾಗಿ ಅಳವಡಿಸಲಾದ ತುಳು ಪಠ್ಯಪುಸ್ತಕಗಳಲ್ಲಿ ತುಳುನಾಡಿನ ಆಡಳಿತ, ಕಲೆ, ಸಂಸ್ಕೃತಿ, ಭಾಷೆ ಮುಂತಾದವುಗಳ ಬಗ್ಗೆ ಅನೇಕ ಪಾಠ/ ಪದ್ಯಗಳನ್ನು ಅಳವಡಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಾನಪದ ಪ್ರಪಂಚ ಪ್ರಶಸ್ತಿ ಪ್ರದಾನ; ಅಧಿಕಾರಕ್ಕೆ ಬಂದ ಕೂಡಲೇ ವಿಶೇಷ ಅನುದಾನ: ಸಿದ್ದರಾಮಯ್ಯ

360 ಡಿಗ್ರಿ ಬ್ರ್ಯಾಂಡಿಂಗ್ ಪ್ರಚಾರ ನಡೆಸಲು ಕಾಂಗ್ರೆಸ್ ಮುಖಂಡರಿಗೆ ಟಾಸ್ಕ್

ಪ್ರತಿಪಕ್ಷದ ನಾಯಕರನ್ನು ಹೀಗಳೆದಾಗ ಭಾರತದ ಗೌರವಕ್ಕೆ ಧಕ್ಕೆ ಉಂಟಾಗುವುದಿಲ್ಲವೇ : ಸಿದ್ದರಾಮಯ್ಯ

ಬೆಂಗಳೂರು ಏರೋ ಇಂಡಿಯಾ ಶೋ ; ಮಾಂಸ ಮಾರಾಟ ಬಂದ್

ದಾಖಲೆ ಸಮೇತ ದೂರು ನೀಡಿದರೆ ದೂರುದಾರಿಗೂ ರಕ್ಷಣೆ : ಲೋಕಾಯುಕ್ತ ಪಾಟೀಲ್
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
