ತೆಲಂಗಾಣ:ಕಾಲುವೆಗೆ ಟ್ರ್ಯಾಕ್ಟರ್ ಉರುಳಿ 10 ಮಹಿಳೆಯರು ಬಲಿ
Team Udayavani, Apr 6, 2018, 10:08 AM IST
ನಲ್ಗೊಂಡ: ಜಿಲ್ಲೆಯ ಪಡಮಟಿ ತಾಂಡಾ ಬಳಿ ಕೂಲಿ ಕೆಲಸಕ್ಕಾಗಿ ಮಹಿಳೆಯರನ್ನು ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿ 10 ಮಂದಿ ಮಹಿಳೆಯರು ದಾರುಣವಾಗಿ ಸಾವನ್ನಪ್ಪಿದ ಭೀಕರ ಅವಘಡ ಶುಕ್ರವಾರ ನಡೆದಿದೆ.
35 ಕ್ಕೂ ಹೆಚ್ಚು ಕೂಲಿ ಮಾಡುವ ಮಹಿಳೆಯರನ್ನು ಟ್ರ್ಯಾಕ್ಟರ್ನಲ್ಲಿ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಕಾಲುವೆಗೆ ಬಿದ್ದಿದ್ದು, 10 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು , ಕೆಲವರನ್ನು ರಕ್ಷಿಸಲಾಗಿದ್ದು 20 ಕ್ಕೂ ಹೆಚ್ಚು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಚಾಲಕನ ಅತೀವೇಗದ ಚಾಲನೆಯೆ ದುರಂತಕ್ಕೆ ಕಾರಣ ಎನ್ನಲಾಗಿದೆ. ರಕ್ಷಣಾ ಕಾರ್ಯ ಬಿರುಸಿನಿಂದ ನಡೆಸಲಾಗುತ್ತಿದೆ.