ಬಿಜೆಪಿ ಇಂದು ಗೋಡ್ಸೆಯ ವಕ್ತಾರರಂತೆ ವರ್ತಿಸುತ್ತಿದೆ: ದಿನೇಶ್ ಗುಂಡೂರಾವ್
Team Udayavani, Oct 5, 2021, 11:44 AM IST
ಬೆಂಗಳೂರು: ಭಾರತ ಅಹಿಂಸಾ ಹೋರಾಟದ ತಾಯ್ನೆಲ. ದೇಶ ಬ್ರಿಟಿಷ್ ದಾಸ್ಯದಿಂದ ಬಿಡುಗಡೆಯಾಗಿದ್ದು ಅಹಿಂಸಾ ಹೋರಾಟದ ಮೂಲಕವೇ. ನೋಬೆಲ್ ಪುರಸ್ಕೃತ ಮಂಡೇಲಾ ಹೋರಾಟಕ್ಕೂ ಪ್ರೇರಣೆಯಾಗಿದ್ದು ಗಾಂಧಿಜೀಯವರ ಅಹಿಂಸಾ ಹೋರಾಟವೇ ಹೊರತು ಗೋಡ್ಸೆಯ ನೆತ್ತರ ಪರಂಪರೆಯಲ್ಲ. ಆದರೆ ಬಿಜೆಪಿ ಇಂದು ಗೂಡ್ಸೆಯ ವಕ್ತಾರರಂತೆ ವರ್ತಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಉತ್ತರ ಪ್ರದೇಶದಲ್ಲಿನ ಘಟನೆಗಳ ಕುರಿತಾಗಿ ಟ್ವೀಟ್ ಮಾಡಿರುವ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಇದನ್ನೂ ಓದಿ:ಪ್ರಿಯಾಂಕಾ ಗಾಂಧಿ ಅವರ ಹಕ್ಕನ್ನು ಕಸಿದದ್ದು ಇಡೀ ಭಾರತೀಯ ಸಂಸ್ಕೃತಿಗೆ ಮಾಡಿದ ಅಪಮಾನ: ಡಿಕೆಶಿ
ಸತ್ಯಾಗ್ರಹ ಯಾವಾಗಲೂ ಸತ್ಯದ ಮಾರ್ಗದ ಮೂಲಕ ನ್ಯಾಯ ಪಡೆಯುವ ಚಳವಳಿ. ದೇಶದ ರೈತರು ಕಳೆದ ಒಂದು ವರ್ಷದಿಂದ ಸತ್ಯಾಗ್ರಹದ ಮೂಲಕ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ಯುಪಿಯ ರಾಜ್ಯ ಸರ್ಕಾರ ರೈತರನ್ನು ಕೊಲ್ಲುವ ಮೂಲಕ ಚಳವಳಿ ಹತ್ತಿಕ್ಕುವ ಯತ್ನ ಮಾಡುತ್ತಿದೆ. ರೈತರ ನ್ಯಾಯದ ಹೋರಾಟವನ್ನು ದಮನ ಮಾಡುವ ಪ್ರಯತ್ನವಿದು ಎಂದು ದಿನೇಶ್ ಗುಂಡೂರಾವ್ ಟೀಕೆ ಮಾಡಿದ್ದಾರೆ.
1
ಭಾರತ ಅಹಿಂಸಾ ಹೋರಾಟದ ತಾಯ್ನೆಲ.
ದೇಶ ಬ್ರಿಟಿಷ್ ದಾಸ್ಯದಿಂದ ಬಿಡುಗಡೆಯಾಗಿದ್ದು ಅಹಿಂಸಾ ಹೋರಾಟದ ಮೂಲಕವೇ.
ನೋಬೆಲ್ ಪುರಸ್ಕೃತ ಮಂಡೇಲಾ ಹೋರಾಟಕ್ಕೂ ಪ್ರೇರಣೆಯಾಗಿದ್ದು ಗಾಂಧಿಜೀಯವರ ಅಹಿಂಸಾ ಹೋರಾಟವೇ ಹೊರತು ಗೂಡ್ಸೆಯ ನೆತ್ತರ ಪರಂಪರೆಯಲ್ಲ. ಆದರೆ ಬಿಜೆಪಿ ಇಂದು ಗೂಡ್ಸೆಯ ವಕ್ತಾರರಂತೆ ವರ್ತಿಸುತ್ತಿದೆ.— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 5, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂದಾರ್ತಿ ಸಮೀಪ ಕಾರಿನಲ್ಲಿ ಭಸ್ಮವಾಗಿದ್ದು ಬೆಂಗಳೂರಿನ ನವ ಜೋಡಿ!
ಪರಿಷತ್ : ಹಿಂದುಳಿದ ವರ್ಗ,ಮುಸ್ಲಿಂ ಅಥವಾ ಕ್ರೈಸ್ತರಿಗೆ ಅವಕಾಶಕ್ಕೆ ಸಿದ್ದರಾಮಯ್ಯ ಮನವಿ
ಅಲ್ಲಿ ಲವ್- ಇಲ್ಲಿ ಮದುವೆ: ತಾಳಿ ಕಟ್ಟುವ ವೇಳೆ ಮದುವೆಗೆ ‘ನೋ ‘ಎಂದು ವಧುವಿನ ಹೈಡ್ರಾಮಾ
ಹಿಂದೂ ಸಮಾಜವನ್ನು ರಕ್ಷಣೆ ಮಾಡುವ ಉದ್ದೇಶದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ: ಈಶ್ವರಪ್ಪ
ಮಳೆ ಅನಾಹುತ : 8 ವಲಯಗಳ ಕಾರ್ಯಪಡೆಗೆ ಸಚಿವರುಗಳ ನೇತೃತ್ವ