ಸಿಎಂಗೆ ಬಿಜೆಪಿ ವಿರುದ್ಧ ಆರೋಪ ಮಾಡುವುದೇ ಚಟ

Team Udayavani, Jun 20, 2019, 3:00 AM IST

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರಿಗೆ ಬಿಜೆಪಿ ಮೇಲೆ ಆರೋಪ ಮಾಡುವುದೇ ಚಟವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಆರೋಪಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿ, ಕುಮಾರಸ್ವಾಮಿಯವರು ಮೊದಲೆಲ್ಲಾ ಬಿಜೆಪಿಯುವರು 30 ಕೋಟಿ ರೂ.ಗೆ ಆಫ‌ರ್‌ ನೀಡಿದ್ದಾರೆ ಎಂದು ಆರೋಪಿಸುತ್ತಿದ್ದರು.

ಈಗ 10 ಕೋಟಿ ರೂ.ಗೆ ಬಂದಿದ್ದಾರೆ. ಈ ಮೈತ್ರಿ ಸರ್ಕಾರವು ನುಗ್ಗೆ ಮರವಿದ್ದಂತೆ. ಸಣ್ಣದಾಗಿ ಗಾಳಿ ಬೀಸಿದರೂ ಮುರಿದು ಬೀಳುತ್ತದೆ. ಹಾಗಾಗಿ, ಸರ್ಕಾರ ಪತನವಾಗುವ ಮೊದಲೇ ಅದರಲ್ಲಿರುವವರು ಸುರಕ್ಷಿತ ಸ್ಥಳ ತಲುಪುವುದು ಸೂಕ್ತ ಎಂದು ಮಾರ್ಮಿಕವಾಗಿ ನುಡಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ