ಸಂವಿಧಾನ ಬದಲಿಸುತ್ತೇವೆಂದು ಹೇಳಿಲ್ಲ

Team Udayavani, May 14, 2019, 3:00 AM IST

ಕಲಬುರಗಿ: “ಕೇಂದ್ರದಲ್ಲಿ ಬಿಜೆಪಿ ಮತ್ತೂಮ್ಮೆ ಅಧಿಕಾರಕ್ಕೆ ಬಂದರೆ ಸಂವಿಧಾನದ ಬದಲಾವಣೆ ಮಾಡುತ್ತೇವೆ ಎಂದು ಎಲ್ಲಿಯೂ ನಾನು ಹೇಳಿಲ್ಲ. ಸಂವಿಧಾನ ಮತ್ತು ಡಾ| ಬಿ.ಆರ್‌. ಅಂಬೇಡ್ಕರ್‌ ಬಗ್ಗೆ ನನಗೆ ಅಪಾರ ಗೌರವವಿದೆ’ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ಪಷ್ಟಪಡಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ 370 ಕಲಂ ರದ್ದುಗೊಳಿಸುವುದು, ಒಂದೇ ಮದುವೆ, ಇಬ್ಬರು ಮಕ್ಕಳೆಂಬ ಸಮಾನ ನಾಗರಿಕ ಕಾಯ್ದೆ ಜಾರಿ ಹಾಗೂ ರಾಮ ಮಂದಿರ ಕಟ್ಟುವುದು ನಮ್ಮ ಅಂಜೆಡಾಗಳಾಗಿವೆ.

ಸಂವಿಧಾನದ ತಿದ್ದುಪಡಿ ಮೂಲಕ ಇವುಗಳನ್ನು ಮಾಡಿಯೇ ತಿರುತ್ತೇವೆ ಎಂದಷ್ಟೇ ಹೇಳಿದ್ದೇನೆ. ಆದರೆ, ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಯತ್ನಾಳ ಸಂವಿಧಾನದ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅವರು ತಮ್ಮ ಬಾಯಿಯಲ್ಲಿ ಹೇಳಿ ನನ್ನ ಬಾಯಿಯಲ್ಲಿ ತುರುಕುವ ಯತ್ನ ಮಾಡುತ್ತಿದ್ದಾರೆ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ