ಬ್ರಿಟಿಷರು ಬಿಟ್ಟು ಹೋದ ಸಂಸ್ಕೃತಿ ಸರಕಾರಿ ಅಧಿಕಾರಿಗಳು ಮುಂದುವರಿಸುತ್ತಿದ್ದಾರೆ!
ಅಧಿಕಾರಿಗಳ ವಿಳಂಬ ನೀತಿಯ ವಿರುದ್ಧ ಸ್ಪೀಕರ್ ಕಾಗೇರಿ ಆಕ್ರೋಶ
Team Udayavani, Sep 15, 2022, 4:45 PM IST
ವಿಧಾನಸಭೆ : ಬ್ರಿಟಿಷರು ಬಿಟ್ಟು ಹೋದ ಸಂಸ್ಕೃತಿಯನ್ನು ಯಾರಾದರೂ ಮುಂದುವರಿಸುತ್ತಿದ್ದರೆ ಅದು ಕಾರ್ಯಾಂಗ ಎಂದು ಅಧಿಕಾರಿಗಳ ವಿಳಂಬ ನೀತಿಯ ವಿರುದ್ಧ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಶ್ನೋತ್ತರ ಕಲಾಪ ಸಂದರ್ಭದಲ್ಲಿ ದಾವಣಗೆರೆಯ ಜಿಲ್ಲಾ ರಂಗಮಂದಿರವನ್ನು 2012 ರಿಂದಲೂ ಪೂರ್ಣಗೊಳಿಸದೇ ಇರುವ ವಿಚಾರ ಪ್ರಸ್ತಾಪವಾದಾಗ,ಬೇಸರಗೊಂಡ ವಿಶ್ವೇಶ್ವರ ಹೆಗಡೆ ಕಾಗೇರಿ, ಎಲ್ಲ ಹೊಣೆಗಾರಿಕೆಯನ್ನು ಶಾಸಕಾಂಗದ ಮೇಲೆ ಹಾಕುತ್ತಾರೆ. ಕಾರ್ಯಾಂಗದವರಿಗೆ ಯಾವ ಜವಾಬ್ದಾರಿಯೂ ಅನ್ವಯವಾಗುತ್ತಿಲ್ಲ. ನಿವೃತ್ತಿಯಾಗುವ ತನಕ ಅತ್ಯಂತ ನೆಮ್ಮದಿಯಿಂದ ಕೆಲಸ ಮಾಡಿ ಹೋಗುತ್ತಾರೆ. ಕಾರ್ಯಾಂಗ ತನ್ನ ಸಂವಿಧಾನ ಬದ್ಧ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ. ಬ್ರಿಟಿಷರು ಬಿಟ್ಟುಹೋದದ್ದನ್ನು ಯಾರಾದರೂ ಪಾಲನೆ ಮಾಡುತ್ತಿದ್ದರೆ ಅದು ಸರಕಾರಿ ಅಧಿಕಾರಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವರುಗಳು ಪ್ರಶ್ನೋತ್ತರ ಕಲಾಪಕ್ಕೆ ಆಗಮಿಸದೇ ಇರುವ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ ಅವರು, ಪ್ರಶ್ನೋತ್ತರ ಪ್ರತಿಯೊಬ್ಬ ಸಚಿವರ ಟಾಪ್ ಮೋಸ್ಟ್ ಆದ್ಯತೆ ಆಗಿರಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಾರ್ವಜನಿಕ ಶಿಕ್ಷಣ ಇಲಾಖೆ ಪದನಾಮ ಬದಲಾವಣೆ
ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ
ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ
ಬೆಳಗಾವಿ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 9 ಲಕ್ಷ ರೂ. ನಗದು ವಶ
ಕಪ್ಪತ್ತಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರು ಎಚ್ಚರವಹಿಸಲು ಅರಣ್ಯ ಅಧಿಕಾರಿಗಳ ಸೂಚನೆ