ಮೀನು ಹಿಡಿಯಲು ಹೋದ ಮೂವರು ನೀರುಪಾಲು

Team Udayavani, Jul 22, 2019, 3:00 AM IST

ಸೊರಬ/ಚಂದ್ರಗುತ್ತಿ: ಮೀನು ಹಿಡಿಯಲು ಹೋಗಿದ್ದ ಮೂವರು ಯುವಕರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಚಂದ್ರಗುತ್ತಿ ಸಮೀಪದ ಜೋಳದಗುಡ್ಡೆ ಎಂಬಲ್ಲಿ ಭಾನುವಾರ ನಡೆದಿದೆ. ಜೋಳದಗುಡ್ಡೆ ಗ್ರಾಮದ ಸೊರಬ ಪಪೂ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಗಳಾದ ಕಾರ್ತಿಕ್‌ (16), ಶರತ್‌ (17) ಹಾಗೂ ಗಾರೆ ಕೆಲಸ ಮಾಡುವ ಪ್ರದೀಪ್‌ (19) ಮೃತಪಟ್ಟವರು.

ಈ ಮೂವರು ಭಾನುವಾರ ಬೆಳಗ್ಗೆ ಸ್ನೇಹಿತರೊಂದಿಗೆ ಜೋಳದಗುಡ್ಡೆಯ ಹೊಸಮಠ ಕೆರೆಗೆ ಮೀನು ಹಿಡಿಯಲು ತೆರಳಿದ್ದರು. ಮೀನುಗಳನ್ನು ಹಿಡಿಯಲು ಕೆರೆಗಿಳಿದ ಮೂವರು ನೀರಿನ ಸುಳಿಗೆ ಸಿಲುಕಿದ್ದಾರೆ. ಈಜು ಬಾರದ್ದರಿಂದ ದಡಕ್ಕೆ ಬರಲಾಗದೆ ಮುಳುಗಿ ಮೃತಪಟ್ಟಿದ್ದಾರೆ.

ಇವರ ಜತೆಯಲ್ಲಿ ಹೋಗಿದ್ದ ಅಭಿಷೇಕ್‌ ಎಂಬಾತ ಕೆರೆಗಿಳಿಯದೆ ದಡದಲ್ಲಿಯೇ ನಿಂತಿದ್ದ. ಮೂವರು ಮುಳುಗುತ್ತಿರುವುದನ್ನು ಕಂಡು ಈತ ಕೂಗಿದ್ದಾನೆ. ಬೊಬ್ಬೆ ಕೇಳಿದ ಅಲ್ಲೇ ಸಮೀಪದಲ್ಲಿರುವ ಜನರು ಕೆರೆಗೆ ಧುಮುಕಿ ಯುವಕರನ್ನು ರಕ್ಷಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ