ಪದವಿ ಕಾಲೇಜು ಶುಲ್ಕ ನಿಗದಿ ಮಾಡಿದ ಕಾಲೇಜು ಶಿಕ್ಷಣ ಇಲಾಖೆ
Team Udayavani, Jun 24, 2022, 11:55 PM IST
ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯು 2022-23ನೇ ಸಾಲಿನ ಸರಕಾರಿ ಮತ್ತು ಖಾಸಗಿ ಅನುದಾನಿತ ಪದವಿ ಕಾಲೇಜುಗಳ ಪದವಿ ಕೋರ್ಸ್‌ಗಳಿಗೆ ಶುಲ್ಕ ನಿಗದಿ ಮಾಡಿದೆ.
ಈ ಬಾರಿ ಶುಲ್ಕ ಹೆಚ್ಚಳ ಮಾಡಿಲ್ಲ. ಬದಲಾಗಿ 2021-22ನೇ ಸಾಲಿನ ಶುಲ್ಕವನ್ನೇ ಮುಂದುವರಿಸುವಂತೆ ಸೂಚನೆ ನೀಡಿದೆ.
ಅರ್ಜಿ ಶುಲ್ಕ, ಪ್ರವೇಶ ಶುಲ್ಕ ಹಾಗೂ ವಿವಿಧ ಶುಲ್ಕಗಳನ್ನು ಸೇರಿಸಿ ಒಟ್ಟು 800 ರೂ. ಪಾವತಿಸಬೇಕು. ಜತೆಗೆ ನೋಂದಣಿ, ಪರೀಕ್ಷೆ, ಕ್ರೀಡಾ ಅಭಿವೃದ್ಧಿ, ಸಾಂಸ್ಕೃತಿಕ ಶುಲ್ಕವನ್ನು ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಕಾಲೇಜಿನ ಸಮಿತಿಯೇ ನಿರ್ಣಯಿಸತಕ್ಕದ್ದು ಎಂದು ಇಲಾಖೆ ತಿಳಿಸಿದೆ.
ಈ ಶುಲ್ಕವು ಪದವಿ ಕೋರ್ಸ್‌ಗಳಾದ ಬಿ.ಎ., ಬಿ.ಕಾಂ., ಬಿಬಿಎ, ಬಿಬಿಎಂ, ಬಿಸಿಎ, ಕಾನೂನು ಮತ್ತು ಚಿತ್ರಕಲಾ ಕೋರ್ಸ್‌ಗಳಿಗೆ ಅನ್ವಯಿಸಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಾವರ್ಕರ್ ದೇಶಪ್ರೇಮಿ ಎಂದು ಯಾಕೆ ಕರೆಯಬೇಕು?: ಸಿದ್ದರಾಮಯ್ಯ
ಫಿಬಾ U-18 ಮಹಿಳಾ ಏಷ್ಯನ್ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ಗೆ ಸಕಲ ಸಿದ್ಧತೆ
ಯಡಿಯೂರಪ್ಪ ಅವರನ್ನು ಸಿಎಂ ಎಂದು ಘೋಷಿಸಲಿ: ಎಂ.ಬಿ ಪಾಟೀಲ್ ಸವಾಲು
ದಾವಣಗೆರೆ: ಪ್ರಿಯಕರನೊಂದಿಗೆ ಬೆಂಗಳೂರಿನ ವಿವಾಹಿತೆ ಕೆರೆಯಲ್ಲಿ ಆತ್ಮಹತ್ಯೆ
ಸಿದ್ದರಾಮಯ್ಯರಿಗೆ ಮಡಿಕೇರಿಯಲ್ಲೂ ಪ್ರತಿಭಟನೆಯ ಬಿಸಿ: ಕಾಂಗ್ರೆಸ್ ನಿಂದ ಪ್ರತಿರೋಧ