ಮೈತ್ರಿ ಸರ್ಕಾರದ ಆಡಳಿತ ಸಹಿಸಲಸಾಧ್ಯವಾಗಿತ್ತು: ಎಸ್ಸೆಂಕೆ

Team Udayavani, Dec 4, 2019, 5:33 AM IST

ಬೆಂಗಳೂರು: ಮೈತ್ರಿ ಸರ್ಕಾರವನ್ನು ಬೀಳಿಸುವಲ್ಲಿ ನನ್ನದೂ ಸಣ್ಣ ಪಾತ್ರವಿದೆ ಎಂದು ಹೇಳಿಕೆಗೆ ಈಗಲೂ
ನಾನು ಬದ್ಧ. ನನ್ನ ಹಳೆಯ ಅಭಿಮಾನಿಗಳು, ಪರಿಚಿತರು ಬಹಳ ಮಂದಿ ಇದ್ದಾರೆ. ಅವರೆಲ್ಲಾ ಬಂದು ಹೋದಾಗ ಹೇಳಿ ಕಳುಹಿಸುತ್ತಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹೇಳಿದರು.

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನನ್ನ ಯೋಗಕ್ಷೇಮ ವಿಚಾರಿಸಲು
ಬಂದ ಅಭಿಮಾನಿಗಳು, ಪರಿಚಿತರೊಂದಿಗೆ ರಾಜ್ಯದ ಯೋಗಕ್ಷೇಮದ ಬಗ್ಗೆ ಚರ್ಚಿಸಿ ಹೇಳಿ ಕಳುಹಿಸುತ್ತಿದ್ದೆ.
ಹಿಂದಿನ ಮೈತ್ರಿ ಸರ್ಕಾರ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಚರ್ಚಿಸುತ್ತಿದ್ದೆವು. 1ನೇ ತಾರೀಖು ಬಂದರೆ ಸಂಬಳ ನಿರೀಕ್ಷಿಸುವಂತೆ ಒಂದು ತಿಂಗಳು ಮುಗಿಯಿತು, 2 ತಿಂಗಳು ಮುಗಿಯಿತು ಎಂಬ ಲೆಕ್ಕಾಚಾರದಲ್ಲಿ ಮೈತ್ರಿ ಸರ್ಕಾರದ ಆಡಳಿತ ನಡೆದಿತ್ತು. ಸಹಿಸಲು ಅಸಾಧ್ಯವಾದ ಬೆಳವಣಿಗೆಯಾಗಿತ್ತು ಎಂದರು.

ಮೈತ್ರಿ ಸರ್ಕಾರದ ನಾಯಕರ ಬಗ್ಗೆ ವೈಯಕ್ತಿಕ ಅಸಮಾಧಾನವೇನೂ ಇರಲಿಲ್ಲ. ರಾಜ್ಯದ ಒಟ್ಟಾರೆ ಹಿತ
ದೃಷ್ಟಿಯಿಂದ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌
ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರಲಿಲ್ಲ. ಹಾಗಿದ್ದರೂ ಫ‌ಲಿತಾಂಶ ಬರುವ ಮೊದಲೇ ಮುಖ್ಯ
ಮಂತ್ರಿ ಸ್ಥಾನ ಹಂಚಿಕೆ ಮಾಡಿದ್ದು ಅವಸರದ ತೀರ್ಮಾನ. ಆ ಅವಸರದ ನಿರ್ಣಯ ಕಾಲಾತೀತವಾಗುವುದಿಲ್ಲ. ಬೇರೆ ರಾಜ್ಯಗಳಲ್ಲೂ ಬಿಜೆಪಿ ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸಬೇಕು ಎಂಬ ನಿಲುವು ತೆಗೆದುಕೊಂಡಿದ್ದು, ಅದಕ್ಕೆ ಪೂರಕವಾಗಿ ಹೆಜ್ಜೆ ಹಾಕಲಾಗುತ್ತಿದೆ ಎಂದು ಹೇಳಿದರು. ಮಲ್ಲಿಕಾರ್ಜುನ ಖರ್ಗೆಯವರು ಡಿ.9ರಂದು ಸಿಹಿ ಸುದ್ದಿ ನೀಡಲಿದ್ದೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಎಸ್‌.ಎಂ.ಕೃಷ್ಣ, ಡಿ.9ರಂದು ಹಲವರು ಹಲವು ಹಗಲುಗನಸು ಕಾಣುತ್ತಿದ್ದಾರೆ ಎಂದರು.

ಮಹನೀಯರಿಂದ ದೊಡ್ಡ ಉಪಕಾರ: ಯಾರ ರಾಜೀನಾಮೆ ಕಾರಣಕ್ಕೆ ಬಿಜೆಪಿ ಅಧಿಕಾರಕ್ಕೆ ಬಂದಿದೆಯೋ ಆ ಮಹನೀಯರು ರಾಜ್ಯಕ್ಕೆ ದೊಡ್ಡ ಉಪಕಾರ ಮಾಡಿದ್ದಾರೆ. ಅವರು ಇಂತಹ ಪರಿಸ್ಥಿತಿ
ನಿರ್ಮಿಸದಿದ್ದರೆ ಹಿಂದಿನ ಮೈತ್ರಿ ಸರ್ಕಾರದ 14 ತಿಂಗಳ ಗೊತ್ತುಗುರಿ ಇಲ್ಲದ ಆಡಳಿತವನ್ನು ಇನ್ನೂ ನಾಲ್ಕಾರು ತಿಂಗಳು ನೋಡಬೇಕಿತ್ತು. ಮೈತ್ರಿ ಸರ್ಕಾರದಿಂದ ಜನರ ನಿರೀಕ್ಷೆಗಳು ಈಡೇರುವುದಿಲ್ಲ ಎಂಬುದು ಖಾತರಿಯಾದ ನಂತರ 17 ಮಂದಿ ಮಿತ್ರರು ರಾಜೀನಾಮೆ ನೀಡಿದರು. ಬಿಜೆಪಿ ಸರ್ಕಾರ ರಚನೆಗೆ ಕಾರಣವಾಯಿತು ಎಂದರು.

ಸಿಎಂ ಯಡಿಯೂರಪ್ಪ, ಸಚಿವ ಜೆ.ಸಿ.ಮಾಧುಸ್ವಾಮಿ ಜಾತಿ ಆಧಾರದ ಮೇಲೆ ಮತಯಾಚಿಸಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ. ನಾವೆಲ್ಲಾ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದೇವೆ. ದೇವೇ ಗೌಡರು ಬಿಜೆಪಿ ಸರ್ಕಾರವನ್ನು ಬೀಳಿಸುವುದಿಲ್ಲ ಎಂಬ ಹೇಳಿಕೆ ನೀಡಿದ್ದರೆ ಅದನ್ನು ಸ್ವಾಗತಿಸುತ್ತೇನೆ ಎಂದು ತಿಳಿಸಿದರು. ಸಚಿವ ಆರ್‌.ಅಶೋಕ್‌, ವಿಧಾನ ಪರಿಷತ್‌ ಸದಸ್ಯ ಲೆಹರ್‌ ಸಿಂಗ್‌, ರಾಜ್ಯ ಬಿಜೆಪಿ ಮಾಧ್ಯಮ ವಿಭಾಗದ ಸಂಚಾಲಕ ಎ.ಎಚ್‌.ಆನಂದ್‌, ಸಹ ವಕ್ತಾರ ಎಸ್‌. ಪ್ರಕಾಶ್‌ ಉಪಸ್ಥಿತರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ