Udayavni Special

ಮಡಿಕೇರಿಯಲ್ಲಿ ಹುಚ್ಚ ವೆಂಕಟ್‌ನ ಹುಚ್ಚಾಟ

Team Udayavani, Aug 30, 2019, 3:05 AM IST

madikeri

ಮಡಿಕೇರಿ: ನಟ ಹುಚ್ಚ ವೆಂಕಟ್‌ನ ಹುಚ್ಚಾಟದಿಂದ ಬೇಸತ್ತ ಸಾರ್ವಜನಿಕರು ಅವರಿಗೆ ಗೂಸಾ ನೀಡಿದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ, ಮಾರುತಿ ಕಾರೊಂದಕ್ಕೆ ಹಾನಿಗೊಳಿಸಿದ ಕಾರಣಕ್ಕಾಗಿ ಅಸಮಾಧಾನಗೊಂಡ ಕೆಲವು ಯುವಕರು ವೆಂಕಟ್‌ನಿಗೆ ಥಳಿಸಿ, ಅವರನ್ನು ಪೊಲೀಸರಿಗೆ ಒಪ್ಪಿಸಿದರು.

ನಡೆದಿದ್ದೇನು?: ನಗರದ ಕೆಎಸ್‌ಆರ್‌ಟಿಸಿ ಬಸ್‌ ಡಿಪೋ ಬಳಿ ಗುರುವಾರ ಮಧ್ಯಾಹ್ನ ದಿಢೀರ್‌ ಆಗಿ ಪ್ರತ್ಯಕ್ಷರಾದ ಹುಚ್ಚ ವೆಂಕಟ್‌, ದಾರಿ ಬದಿಯಲ್ಲಿ ನಿಂತಿದ್ದರು. ಇವರನ್ನು ಗಮನಿಸಿದ ದಿಲೀಪ್‌ ಎಂಬ ಯುವಕ, “ನೀವು ಹುಚ್ಚ ವೆಂಕಟ್‌ ಅಲ್ವಾ’ ಎಂದು ಕುತೂಹಲದಿಂದ ಕೇಳಿದರು. ಈ ವೇಳೆ, “ಏನೋ ಹೀಗೆ ಗುರಾಯಿಸ್ತೀಯ’ ಎಂದು ದಿಲೀಪ್‌ ಮೇಲೆ ವೆಂಕಟ್‌ ಹಲ್ಲೆ ಮಾಡಿದರು.

ಹಲ್ಲೆಯಿಂದ ತಪ್ಪಿಸಿಕೊಂಡು ಯುವಕ ಓಡುತ್ತಿದ್ದಂತೆ ಕುಪಿತಗೊಂಡ ವೆಂಕಟ್‌, ಯುವಕನ ಮಾರುತಿ-800 ಕಾರಿನ ಗಾಜನ್ನು ಪುಡಿ ಮಾಡಿದರು. ಹುಚ್ಚ ವೆಂಕಟ್‌ನ ಹುಚ್ಚಾಟ ಮಿತಿ ಮೀರುತ್ತಿದ್ದಂತೆ ಎಚ್ಚೆತ್ತುಕೊಂಡ ಸಾರ್ವಜನಿಕರು, ಅವರಿಗೆ ಸರಿಯಾಗಿ ಗೂಸಾ ನೀಡಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ನಗರ ಠಾಣಾ ಪೊಲೀಸರು, ವೆಂಕಟ್‌ನನ್ನು ಠಾಣೆಗೆ ಕರೆದೊಯ್ದು, ಬುದ್ಧಿವಾದ ಹೇಳಿ, ಕಳಿಸಿದರು.

ಪಾಂಡವಪುರದಲ್ಲಿ ಹುಚ್ಚನಂತೆ ಓಡಾಡಿದ: ಇದಕ್ಕೂ ಮೊದಲು ಗುರುವಾರ ಬೆಳಗ್ಗೆ ಮಂಡ್ಯ ಜಿಲ್ಲೆ ಪಾಂಡವಪುರಕ್ಕೆ ಕಾರಿನಲ್ಲಿ ಏಕಾಂಗಿಯಾಗಿ ಬಂದ ಹುಚ್ಚ ವೆಂಕಟ್‌, ಮದ್ಯಪಾನ ಮಾಡಿದ್ದು, ಪಟ್ಟಣದ ಡಾ.ರಾಜ್‌ಕುಮಾರ್‌ ವೃತ್ತದಲ್ಲಿ ಏಕಾಂಗಿಯಾಗಿ ತಿರುಗಾಡುತ್ತಿದ್ದರು. ವಿಷಯ ತಿಳಿದ ಅಭಿಮಾನಿಗಳು ಹಾಗೂ ಯುವಕರು ಮೊಬೈಲ್‌ ಹಿಡಿದು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಒಮ್ಮೊಮ್ಮೆ ನಗುತ್ತಾ ಫೋಸ್‌ ಕೊಟ್ಟರೆ, ಇನ್ನೊಮ್ಮೆ ಸಿಟ್ಟಿಗೆದ್ದು, “ಥೂ ನನ್‌ ಮಕ್ಲಾ, ಏನ್ಲಾ, ಏಯ್‌’ ಎಂದು ಜೋರಾಗಿ ಕಿರುಚಾಡುತ್ತಿದ್ದರು. ಈ ವೇಳೆ, ಕೆಲ ಅಭಿಮಾನಿಗಳು ಅವರಿಗೆ ಟೀ ಕುಡಿಸಿ, ಸತ್ಕರಿಸಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅವರನ್ನು ಅಲ್ಲಿಂದ ಕರೆದೊಯ್ದರು.

ಟಾಪ್ ನ್ಯೂಸ್

ಹಳೆ ದ್ವೇಷದ ಹಿನ್ನೆಲೆ: ಆಸ್ಪತ್ರೆಯ ಐಸಿಯು ಘಟಕದಲ್ಲೇ ಎರಡು ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ: ಆಸ್ಪತ್ರೆಯ ಐಸಿಯು ಘಟಕದಲ್ಲೇ ಎರಡು ಗುಂಪುಗಳ ನಡುವೆ ಮಾರಾಮಾರಿ

sarkaar-school

ಕೊನೆಗೂ ರಾಜ್ಯದಲ್ಲಿ 1 ರಿಂದ 5 ಶಾಲೆ ಆರಂಭಕ್ಕೆ ಸರಕಾರ ಗ್ರೀನ್ ಸಿಗ್ನಲ್

ಭರ್ಜರಿ ಲಾಭ: 62 ಸಾವಿರ ಗಡಿ ಸಮೀಪಿಸಿದ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ದಾಖಲೆ

ಭರ್ಜರಿ ಲಾಭ: 62 ಸಾವಿರ ಗಡಿ ಸಮೀಪಿಸಿದ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ದಾಖಲೆ

ELECRIC CARS

ಶೀಘ್ರದಲ್ಲೇ ಅತ್ಯಾಧುನಿಕ ವಿನ್ಯಾಸದ ಎಲೆಕ್ಟ್ರಿಕ್ ವಾಹನ ಬಿಡುಗಡೆ: ಹೋಂಡಾ

ಎನ್ ಸಿಎ ಮುಖ್ಯಸ್ಥ ಸ್ಥಾನದ ಆಫರ್ ನಿರಾಕರಿಸಿದ ವಿವಿಎಸ್ ಲಕ್ಷ್ಮಣ್

ಎನ್ ಸಿಎ ಮುಖ್ಯಸ್ಥ ಸ್ಥಾನದ ಆಫರ್ ನಿರಾಕರಿಸಿದ ವಿವಿಎಸ್ ಲಕ್ಷ್ಮಣ್

sanjay-raut

ಚೀನಾ ವಿರುದ್ಧವೂ ಸರ್ಜಿಕಲ್ ಸ್ಟ್ರೈಕ್ ನಡೆಸಿ : ರಾವತ್ ಸವಾಲು

ಭಾರೀ ಮಳೆ, ಪ್ರವಾಹಕ್ಕೆ ತತ್ತರಿಸಿಹೋದ ಕೇರಳ;ಸಾವಿನ ಸಂಖ್ಯೆ 27ಕ್ಕೆ ಏರಿಕೆ, CM ತುರ್ತು ಸಭೆ

ಭಾರೀ ಮಳೆ, ಪ್ರವಾಹಕ್ಕೆ ತತ್ತರಿಸಿಹೋದ ಕೇರಳ;ಸಾವಿನ ಸಂಖ್ಯೆ 27ಕ್ಕೆ ಏರಿಕೆ, CM ತುರ್ತು ಸಭೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sarkaar-school

ಕೊನೆಗೂ ರಾಜ್ಯದಲ್ಲಿ 1 ರಿಂದ 5 ಶಾಲೆ ಆರಂಭಕ್ಕೆ ಸರಕಾರ ಗ್ರೀನ್ ಸಿಗ್ನಲ್

t a sharavana

ಅಲ್ಪಸಂಖ್ಯಾತರ ಮೇಲೆ ಪ್ರೀತಿಯಿದ್ದರೆ ಜಮೀರ್ ರನ್ನೇ ಸಿಎಂ ಅಭ್ಯರ್ಥಿಯಾಗಿಸಿ: ಶರವಣ ಸವಾಲು

ಮೈಶುಗರ್ ಕಾರ್ಖಾನೆ ಖಾಸಗೀಕರಣ ನಿರ್ಧಾರದಿಂದ ಹಿಂದೆ ಸರಿದ ರಾಜ್ಯ ಸರ್ಕಾರ

ಮೈಶುಗರ್ ಕಾರ್ಖಾನೆ ಖಾಸಗೀಕರಣ ನಿರ್ಧಾರದಿಂದ ಹಿಂದೆ ಸರಿದ ರಾಜ್ಯ ಸರ್ಕಾರ

ದೇಶವಾಸಿಗಳನ್ನು ಭಿಕ್ಷುಕರನ್ನಾಗಿಸಿದ್ದಾರೆ: ಪಿಎಂ ಮೋದಿ ವಿರುದ್ಧ ಕಾಂಗ್ರೆಸ್ ಟ್ವೀಟಾಸ್ತ್ರ

ದೇಶವಾಸಿಗಳನ್ನು ಭಿಕ್ಷುಕರನ್ನಾಗಿಸಿದ್ದಾರೆ: ಪಿಎಂ ಮೋದಿ ವಿರುದ್ಧ ಕಾಂಗ್ರೆಸ್ ಟ್ವೀಟಾಸ್ತ್ರ

70

ಮಂಡ್ಯ ಮೈಶುಗರ್ ಕಾರ್ಖಾನೆ ಪುನಶ್ಚೇತನ: ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ

MUST WATCH

udayavani youtube

ಒಂದು ದೊಡ್ಡ ಪಾತ್ರೆ ಮದುವೆ ಮಾಡಿಸಿದ ಕತೆ!

udayavani youtube

ರಸ್ತೆ ದುರಸ್ಥಿಗೆ ಆಗ್ರಹಿಸಿ ರಸ್ತೆಯಲ್ಲೇ ಬಾಳೆಗಿಡ ನೆಟ್ಟು ಗ್ರಾಮಸ್ಥರಿಂದ ಪ್ರತಿಭಟನೆ

udayavani youtube

ಗಾಳಿ ಮಳೆಗೆ ಬಾಳೆ ತೋಟ ಸಂಪೂರ್ಣ ನಾಶ : ಕೃಷಿಯನ್ನೇ ನಂಬಿದ ರೈತರಿಗೆ ಸಂಕಷ್ಟ

udayavani youtube

ಅಕಾಲಿಕ ಮಳೆಗೆ ನೆಲಕ್ಕಚ್ಚಿದ ಭತ್ತದ ಪೈರುಗಳು : ಸಂಕಷ್ಟದಲ್ಲಿ ರೈತರು

udayavani youtube

ವಿಶೇಷ ಚೇತನ ಅಭಿಮಾನಿಯೊಬ್ಬನನ್ನು ಕಾಣಲು ಬಂದ ರಿಯಲ್ ಸ್ಟಾರ್ ಉಪೇಂದ್ರ!

ಹೊಸ ಸೇರ್ಪಡೆ

ಹಳೆ ದ್ವೇಷದ ಹಿನ್ನೆಲೆ: ಆಸ್ಪತ್ರೆಯ ಐಸಿಯು ಘಟಕದಲ್ಲೇ ಎರಡು ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ: ಆಸ್ಪತ್ರೆಯ ಐಸಿಯು ಘಟಕದಲ್ಲೇ ಎರಡು ಗುಂಪುಗಳ ನಡುವೆ ಮಾರಾಮಾರಿ

sarkaar-school

ಕೊನೆಗೂ ರಾಜ್ಯದಲ್ಲಿ 1 ರಿಂದ 5 ಶಾಲೆ ಆರಂಭಕ್ಕೆ ಸರಕಾರ ಗ್ರೀನ್ ಸಿಗ್ನಲ್

ವೆಬ್‌ ಸೀರಿಸ್‌ ಆಯ್ತು ‘ನಮ್ಮ ಊರಿನ ರಸಿಕರು’

ವೆಬ್‌ ಸೀರಿಸ್‌ ಆಯ್ತು ‘ನಮ್ಮ ಊರಿನ ರಸಿಕರು’

ಭರ್ಜರಿ ಲಾಭ: 62 ಸಾವಿರ ಗಡಿ ಸಮೀಪಿಸಿದ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ದಾಖಲೆ

ಭರ್ಜರಿ ಲಾಭ: 62 ಸಾವಿರ ಗಡಿ ಸಮೀಪಿಸಿದ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ದಾಖಲೆ

Untitled-1

ಗೋವಾದಲ್ಲಿ ತೃಣಮೂಲ ಕಾಂಗ್ರೆಸ್ ಉಪಸ್ಥಿತಿಯಿಂದ ಬಿಜೆಪಿಗೆ ಭಯ ಶುರುವಾಗಿದೆ:ಡೆರೆಕ್ ಓ ಬ್ರಾಯನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.