ಕಲ್ಯಾಣ ಕರ್ನಾಟಕವೆಂಬ ಹೆಸರಿಗೂ ಟೀಕೆ

Team Udayavani, Feb 6, 2020, 3:06 AM IST

kalyana-kmar

ಶ್ರೀ ವಿಜಯ ಪ್ರಧಾನ ವೇದಿಕೆ: ರಾಜ್ಯದಲ್ಲಿ ಎಲ್ಲಿ ನೋಡಿದರೂ ಸಚಿವ ಸಂಪುಟ ವಿಸ್ತರಣೆಯದ್ದೇ ಮಾತು. ಕನ್ನಡ ಸಾಹಿತ್ಯ ಸಮ್ಮೇಳನವೂ ಅದಕ್ಕೆ ಹೊರತಾಗಲಿಲ್ಲ. ಪ್ರಧಾನ ವೇದಿಕೆಯಲ್ಲಿ ನಡೆದ ಮೊದಲ ಗೋಷ್ಠಿಯಲ್ಲೇ ಉತ್ತರ ಕರ್ನಾಟಕಕ್ಕೆ ಕನಿಷ್ಠ 17 ಸಚಿವಸ್ಥಾನ ನೀಡಲೇಬೇಕು ಎಂಬ ಒತ್ತಾಯ ಕೇಳಿಬಂತು. ಅದರ ಜೊತೆಗೆ ಕಲ್ಯಾಣ ಕರ್ನಾಟಕವೆಂದು ಹೆಸರು ಬದಲಾಯಿಸಿರುವುದಕ್ಕೂ ಟೀಕೆ ಕೇಳಿಬಂದವು.

ಹೆಸರು ಬದಲಾವಣೆಯಿಂದ ಏನು ಸಾಧಿಸಿದಂತಾಗುತ್ತದೆ? ಹಳೆಯ ಮದ್ಯವನ್ನು, ಹೊಸ ಬಾಟಲಿಯಲ್ಲಿ ತುಂಬಿದಂತಾಗುತ್ತದೆ ಅಷ್ಟೇ ಎಂದು ಡಾ.ಶ್ರೀನಿವಾಸ ಸಿರನೂರಕರ ಹೇಳಿದರು. ಕೆ.ನೀಲಾ ಅವರು, ಇತ್ತೀಚೆಗೆ ಹೆಸರು ಬದಲಾಯಿಸುವ ಹುಚ್ಚು ಶುರುವಾಗಿದೆ ಎಂದು ವ್ಯಂಗ್ಯವಾಡಿದರು. 371 ಜೆ ಅನುಷ್ಠಾನ ಮತ್ತು ಅಡಚಣೆಗಳು ಎಂಬ ವಿಷಯದ ಬಗ್ಗೆ ವಿಷಯ ಮಂಡಿಸಿದ ಲೇಖಕ ಡಾ.ಶ್ರೀನಿವಾಸ ಸಿರಕೂರಕರ,

ಡಾ. ಡಿ.ಎಂ.ನಂಜುಂಡಪ್ಪ ನೇತೃತ್ವದ ಪ್ರಾದೇಶಿಕ ಅಸಮತೋಲನ ನಿವಾರಣೆ ಸಮಿತಿಯು, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕಕ್ಕೆ ರಾಜ್ಯಸಂಪುಟದ ಶೇ.50ರಷ್ಟು ಸ್ಥಾನ ನೀಡಬೇಕು ಎಂದು ವರದಿ ನೀಡಿದೆ. ಅಂದರೆ ಕನಿಷ್ಠ 17 ಸ್ಥಾನಗಳು ಈ ಭಾಗಕ್ಕೆ ಸಿಗಬೇಕಾಗುತ್ತದೆ. ಆದರೆ ವಿವಿಧ ರಾಜಕೀಯ ಪಕ್ಷಗಳ ಅನಿವಾರ್ಯತೆ ಕಾರಣದಿಂದ ಅದು ಕೈಗೂಡುತ್ತಿಲ್ಲ. ಈಗಂತೂ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳ ಪೈಕಿ ಕೇವಲ ಒಂದು ಜಿಲ್ಲೆಗೆ ಮಾತ್ರ ಪ್ರಾತಿನಿಧ್ಯ ಸಿಕ್ಕಿದೆ ಎಂದು ಹೇಳಿದರು.

ರಾಜಕೀಯ ಇಚ್ಛಾಶಕ್ತಿ ಕೊರತೆಯೇ ಕಲ್ಯಾಣ ಕರ್ನಾಟಕ ಭಾಗ 50 ವರ್ಷಗಳಷ್ಟು ಹಿಂದುಳಿಯಲು ಕಾರಣ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಈ ಭಾಗದ ತಾಲೂಕುಗಳೇ ಕೊನೆ ಸ್ಥಾನದಲ್ಲಿವೆ. ರಾಜ್ಯ ಸಂಪೂರ್ಣ ಏಕ ನಿಟ್ಟಿನಲ್ಲಿ ಅಭಿವೃದ್ಧಿ ಹೊಂದಲು ಪ್ರಾದೇಶಿಕ ಅಭಿವೃದ್ಧಿ ನೀತಿ ರೂಪಿಸುವುದು ಹೆಚ್ಚು ಸಮಂಜಸ ಎಂದು ಸಿರನೂರಕರ ಆಗ್ರಹಿಸಿದರು. ಕೆ.ನೀಲಾ, ಡಾ.ವೀರಣ್ಣ ದಂಡೆ, ಡಾ.ಅಮರೇಶ ಯತಗಲ್‌ ವಿಷಯ ಮಂಡನೆ ಮಾಡಿದರು. ಮಾಜಿ ಸಂಸದ ಡಾ. ಬಸವರಾಜ ಪಾಟೀಲ್‌ ಸೇಡಂ ಅಧ್ಯಕ್ಷತೆ ವಹಿಸಿ ಮಾತನಾಡಿದರು.

* ಹಣಮಂತರಾವ ಭೈರಾಮಡಗಿ

ಟಾಪ್ ನ್ಯೂಸ್

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500ಗ್ರಾಂ ಗಾಂಜಾ ವಶ, ಒಬ್ಬನ ಬಂಧನ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500 ಗ್ರಾಂ. ಗಾಂಜಾ ವಶ, ಓರ್ವನ ಬಂಧನ

1-ewrwe

ವಿದ್ಯಾರ್ಥಿಗಳೊಂದಿಗೆ ಕುಳಿತು ಬಿಸಿಯೂಟ ಸವಿದ ಆಹಾರ ನಿಗಮದ ಅಧ್ಯಕ್ಷ ನಡಹಳ್ಳಿ

ಕನ್ನಡದಲ್ಲೇ ಸಹಿ ಸಂಪೂರ್ಣ ಜಾರಿಗೆ ಬಂದರೆ ಸ್ವಾಗತಾರ್ಹ : ಶ್ರೀನಿವಾಸ ಮೂರ್ತಿ ಕುಲಕರ್ಣಿ

ಕನ್ನಡದಲ್ಲೇ ಸಹಿ ಸಂಪೂರ್ಣ ಜಾರಿಗೆ ಬಂದರೆ ಸ್ವಾಗತಾರ್ಹ : ಶ್ರೀನಿವಾಸ ಮೂರ್ತಿ ಕುಲಕರ್ಣಿ

1-rrr

ಕೈಗಾರಿಕೆಗಳಿಗೆ ಭೂಮಿ ನೀಡಲು ಶೀಘ್ರದಲ್ಲೇ ಹೊಸ ನೀತಿ: ಸಚಿವ ನಿರಾಣಿ

1-trtr

ಟಿಕೆಟ್ ಇಲ್ಲದೇ ಪರದಾಟ: 1300 ಭಕ್ತರಿಗೆ ತಿಮ್ಮಪ್ಪನ ದರ್ಶನ ಮಾಡಿಸಿದ ಎಸ್.ಆರ್.ವಿಶ್ವನಾಥ್

1-www

15 ಕೋಟಿ ಸದಸ್ಯರನ್ನು ಹೊಂದಿದ ಏಕೈಕ ಪಕ್ಷ ಬಿಜೆಪಿ : ಸಚಿವ ಹಾಲಪ್ಪ ಆಚಾರ್

congress

ಗೃಹಸಚಿವರ ತವರಿನಲ್ಲಿ ಪಟ್ಟಣ ಪಂಚಾಯತಿ ಕಾಂಗ್ರೆಸ್ ಪಾಲು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500ಗ್ರಾಂ ಗಾಂಜಾ ವಶ, ಒಬ್ಬನ ಬಂಧನ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500 ಗ್ರಾಂ. ಗಾಂಜಾ ವಶ, ಓರ್ವನ ಬಂಧನ

1-ewrwe

ವಿದ್ಯಾರ್ಥಿಗಳೊಂದಿಗೆ ಕುಳಿತು ಬಿಸಿಯೂಟ ಸವಿದ ಆಹಾರ ನಿಗಮದ ಅಧ್ಯಕ್ಷ ನಡಹಳ್ಳಿ

1-rrr

ಕೈಗಾರಿಕೆಗಳಿಗೆ ಭೂಮಿ ನೀಡಲು ಶೀಘ್ರದಲ್ಲೇ ಹೊಸ ನೀತಿ: ಸಚಿವ ನಿರಾಣಿ

1-trtr

ಟಿಕೆಟ್ ಇಲ್ಲದೇ ಪರದಾಟ: 1300 ಭಕ್ತರಿಗೆ ತಿಮ್ಮಪ್ಪನ ದರ್ಶನ ಮಾಡಿಸಿದ ಎಸ್.ಆರ್.ವಿಶ್ವನಾಥ್

1-www

15 ಕೋಟಿ ಸದಸ್ಯರನ್ನು ಹೊಂದಿದ ಏಕೈಕ ಪಕ್ಷ ಬಿಜೆಪಿ : ಸಚಿವ ಹಾಲಪ್ಪ ಆಚಾರ್

MUST WATCH

udayavani youtube

ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್ ನಲ್ಲಿ ನೆರವೇರಲಿದೆಯಂತೆ ವಿಕ್ಕಿ – ಕತ್ರಿನಾ ಮದುವೆ

udayavani youtube

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ

udayavani youtube

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

udayavani youtube

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಳಗಿದ ಬಾರಿಸು ಕನ್ನಡ ಡಿಂಡಿಮವ

udayavani youtube

ಕಬಿನಿ ಹಿನ್ನೀರಿನಲ್ಲಿ ಈಜಿದ ಹುಲಿ

ಹೊಸ ಸೇರ್ಪಡೆ

davanagere news

30 ರಿಂದ ರಾಜ್ಯ ಮಟ್ಟದ ವಿವಿಧ ಪ್ರಶಸ್ತಿ ವಿತರಣೆ: ಶೆಣೈ

kottigehara news

ಗ್ರಾಪಂ ಸಂಕೀರ್ಣಕ್ಕೆ ಜಿಪಂ ಸಿಇಒ ಭೇಟಿ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500ಗ್ರಾಂ ಗಾಂಜಾ ವಶ, ಒಬ್ಬನ ಬಂಧನ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500 ಗ್ರಾಂ. ಗಾಂಜಾ ವಶ, ಓರ್ವನ ಬಂಧನ

Vehicle parking

ವಾಹನ ನಿಲುಗಡೆಗೆ ಶುಲ್ಕ

shivamogga news

ಸರ್ಕಾರದಿಂದ ಕುಡಿಯುವ ನೀರೂ ಮಾರಾಟ: ಆರೋಪ-ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.