ಮತದಾರರು ಕೈಬಿಟ್ರೂ ಪಕ್ಷ ನನ್ನನ್ನು ಕಾಪಾಡಿದೆ

Team Udayavani, Aug 22, 2019, 3:05 AM IST

ಬೆಳಗಾವಿ: ಸಚಿವ ಸ್ಥಾನ ಬಯಸದೇ ಬಂದ ಭಾಗ್ಯ. ಶಾಸಕನಲ್ಲದಿದ್ದರೂ ಪಕ್ಷದ ವರಿಷ್ಠರು ನಂಬಿಕೆ ಇಟ್ಟು ಸಚಿವರನ್ನಾಗಿ ಮಾಡಿದ್ದಾರೆ. ಈ ನಂಬಿಕೆಯನ್ನು ಕೊನೆಯವರೆಗೂ ಉಳಿಸಿಕೊಳ್ಳುತ್ತೇನೆ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹರ ಮುನಿದರೆ ಗುರು ಕಾಯುತ್ತಾನೆ ಎಂಬಂತೆ ಮತದಾರರು ಹರ ಇದ್ದಂತೆ. ಅವರು ಮುನಿದರೂ ಗುರುವಿನ ಸ್ಥಾನದಲ್ಲಿ ಪಕ್ಷವು ನನ್ನನ್ನು ಕಾಪಾಡಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಸಚಿವ ಸ್ಥಾನಕ್ಕೆ ತಮ್ಮ ಪರ ರಮೇಶ ಜಾರಕಿಹೊಳಿ ಲಾಬಿ ಮಾಡಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, “ನನ್ನ ಪರ ಯಾರು ಲಾಬಿ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಪ್ರಮಾಣ ವಚನ ಸ್ವೀಕಾರದ ಹಿಂದಿನ ದಿನ ಮಧ್ಯರಾತ್ರಿ ಎರಡು ಗಂಟೆಗೆ ನನಗೆ ಕರೆ ಬಂತು. ನಿಮ್ಮ ಹೆಸರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರಿಗೆ ಬನ್ನಿ ಎಂದು ಹೇಳಿದರು. ಅದರಂತೆ ನಾನು ಸಚಿವ ಸ್ಥಾನ ವಹಿಸಿಕೊಂಡೆ. ಇದರಲ್ಲಿ ಯಾರ ಲಾಬಿ ಇದೆ ಎಂಬುದು ಗೊತ್ತಿಲ್ಲ. ಪಕ್ಷದ ಮೇಲಿನ ನಿಷ್ಠೆ ನನಗೆ ಈ ಸ್ಥಾನ ನೀಡಿದೆ’ ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ