ಮರದ ಪಾದುಕೆ ಸವರಿಕೊಳ್ಳುತ್ತಿರುವ ಶಿಕ್ಷಣ ಸಚಿವರ ವಿಡಿಯೋ ವೈರಲ್‌

Team Udayavani, Jun 20, 2018, 6:00 AM IST

ಚಾಮರಾಜನಗರ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್‌.ಮಹೇಶ್‌ ಅವರು ಮರದ ಪಾದುಕೆಗಳನ್ನು ಕೈಗಳಿಂದ ಹಿಡಿದು ಅಡಿಯಿಂದ ಮುಡಿಯವರೆಗೆ ಸವರಿಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಚುನಾವಣೆಗೂ ಮುಂಚೆ ಮಂದಿರವೊಂದರಲ್ಲಿ ಒಂದು ಜೊತೆ ಮರದ ಪಾದುಕೆಯನ್ನು ಮಹೇಶ್‌ ಅವರು ತಮ್ಮ ಮೈಗೆ ಸ್ಪರ್ಶಿಸಿಕೊಳ್ಳುವ ದೃಶ್ಯ ಇದಾಗಿದೆ. ದೃಶ್ಯದ ಹಿನ್ನೆಲೆಯಲ್ಲಿ ಹಿಂದಿ ಧ್ವನಿ ಕೇಳಿ ಬರುತ್ತದೆ. ಈ ವಿಡಿಯೋದ ತುಣುಕು ಮಂಗಳವಾರ ಬೆಳಿಗ್ಗೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿ ದಾಡುತ್ತಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮ ಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಚುನಾವಣೆ ವೇಳೆ 
ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆ ಬರಬಾರದೆಂದು ಹೀಗೆ ಮಾಡಿದೆ. ಒಬ್ಬ ಕಾರ್ಯಕರ್ತ ಸಿದ್ದಪ್ಪಾಜಿ ಗದ್ದುಗೆಗೆ ಹೋಗಿ ಮುಡಿ ಕೊಡಿಸಿ ಎನ್ನುತ್ತಾನೆ. ಅವರ ಭಾವನೆಗಳಿಗೆ ಬೆಲೆ ಕೊಡಬೇಕಾಗುತ್ತದೆ. ನಾನು ಯಾವ ಧರ್ಮಕ್ಕೂ ಸೇರಿದವನಲ್ಲ. ಈ ಆಚರಣೆಗಳೆಲ್ಲ ಶರ್ಟ್‌ ಇದ್ದ ಹಾಗೆ. ಇದನ್ನು ಬದಲಿಸುತ್ತಿರುತ್ತೇವೆ. ನನ್ನ ಚರ್ಮವೇ ಬೇರೆ. ಅದರಲ್ಲಿ ನನ್ನ ನಿಜವಾದ ಅಸ್ತಿತ್ವ ಇದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ