Udayavni Special

ಗೆಲ್ಲುವ ಅಭ್ಯರ್ಥಿಗಳಿಗೆ ಕೈ ಹುಡುಕಾಟ 


Team Udayavani, Mar 8, 2019, 12:30 AM IST

congress.jpg

ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಂಡು ಕನಿಷ್ಠ 22 ರಿಂದ 25 ಕ್ಷೇತ್ರಗಳನ್ನು ಗೆಲ್ಲಲು ಪಣ ತೊಟ್ಟು ಚುನಾವಣೆಗೆ ಸಿದ್ಧ ಗೊಳ್ಳುತ್ತಿರುವ ಕಾಂಗ್ರೆಸ್‌ ಪಕ್ಷದಲ್ಲಿ ಹಾಲಿ ಸಂಸದರ ಕ್ಷೇತ್ರಗಳನ್ನು ಬಿಟ್ಟು, ಎಂಟು ಕ್ಷೇತ್ರಗಳಲ್ಲಿ ಸೂಕ್ತ ಹಾಗೂ ಪ್ರಬಲ ಅಭ್ಯರ್ಥಿಗಳು ಸಿಗದಿರುವುದು ಕೈ ನಾಯಕರನ್ನು ಚಿಂತೆಗೀಡು ಮಾಡಿದೆ.

ರಾಜ್ಯದ 28 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಹಾಲಿ ಸಂಸದರಿದ್ದಾರೆ. ಉಳಿದ 18 ಕ್ಷೇತ್ರಗಳಲ್ಲಿ ಮೈತ್ರಿ ಲೆಕ್ಕಾಚಾರದಂತೆ ಜೆಡಿಎಸ್‌ನ 3 ಕ್ಷೇತ್ರಗಳ ಹೊರತಾಗಿ ಕಾಂಗ್ರೆಸ್‌ ಗೆದ್ದೇ ಗೆಲ್ಲುತ್ತದೆ ಎಂದು ಧೈರ್ಯವಾಗಿ ಹೇಳಿಕೊಳ್ಳಲು ಸುಮಾರು 8 ಕ್ಷೇತ್ರಗಳಲ್ಲಿ ಹೇಳಿಕೊಳ್ಳುವಂತಹ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ ಎಂದು ತಿಳಿದು ಬಂದಿದೆ.

ವಿಜಯಪುರ ಮೀಸಲು ಕ್ಷೇತ್ರ, ಕೊಪ್ಪಳ, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ- ಚಿಕ್ಕಮಗಳೂರು, ಉತ್ತರ ಕನ್ನಡ (ಕೆನರಾ) ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನಲ್ಲಿ ಡಜನ್‌ಗಟ್ಟಲೇ ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಿ ಗೆಲ್ಲುವ ಸಮರ್ಥ ಅಭ್ಯರ್ಥಿಗಳು ಸಿಗುತ್ತಿಲ್ಲವೆಂಬ ಮಾತು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿದೆ.

ಈ ಎಂಟೂ ಕ್ಷೇತ್ರಗಳೂ ಬಿಜೆಪಿಯ ಭದ್ರಕೋಟೆಯಾಗಿದ್ದು, ಬಿಜೆಪಿಯ ಅಭ್ಯರ್ಥಿಗಳು ಪ್ರಬಲವಾಗಿಲ್ಲದಿದ್ದರೂ, ಪಕ್ಷದ ನೆಲೆ ಹಾಗೂ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸಿನಿಂದ ಗೆಲುವು ಸಾಧಿಸುತ್ತ ಬಂದಿದ್ದಾರೆ. ವಿಜಯಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ರಮೇಶ್‌ ಜಿಗಜಿಣಗಿ ಅವರ ಬಗ್ಗೆ ಪಕ್ಷದಲ್ಲಿಯೇ ಸಾಕಷ್ಟು ವಿರೋಧವಿದೆ.

ಆದರೆ, ಕಾಂಗ್ರೆಸ್‌ಗೆ ಹೇಳಿಕೊಳ್ಳುವಂತಹ ಮುಖ ಕಾಣುತ್ತಿಲ್ಲ. ಮಾಜಿ ಶಾಸಕರಾದ ರಾಜು ಅಲಗೂರು, ವಿಠಲ ಕಟಕದೊಂಡ್‌, ಕಾಂತಾ ನಾಯಕ್‌ ಹೆಸರು ಕೇಳಿ ಬರುತ್ತಿವೆ. ಲೋಕಸಭೆ ಚುನಾವಣೆಗೆ ಸಮರ್ಥ ಅಭ್ಯರ್ಥಿಗಳಿಲ್ಲ ಎಂಬ ಅಭಿಪ್ರಾಯ ಕಾಂಗ್ರೆಸ್‌ನಲ್ಲಿಯೇ ಕೇಳಿ ಬರುತ್ತಿದೆ. ಅದಕ್ಕಾಗಿಯೇ ಕೊಪ್ಪಳದ ಕನಕಗಿರಿ ಮಾಜಿ ಶಾಸಕ ಶಿವರಾಜ ತಂಗಡಗಿ ಅವರನ್ನು ವಿಜಯಪುರದಲ್ಲಿ ಕಣಕ್ಕಿಳಿಸಬೇಕೆಂಬ ಒತ್ತಡವೂ ಇದೆ. ಇನ್ನೊಂದೆಡೆ ಸೀಟು ಹೊಂದಾಣಿಕೆ ಮಾಡಿ ಕೊಂಡು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಅಭಿಪ್ರಾಯವೂ ಕಾಂಗ್ರೆಸ್‌ನಲ್ಲಿ ಮೂಡಿದೆ.

ಕೊಪ್ಪಳದಲ್ಲಿಯೂ ಬಿಜೆಪಿಯ ಹಾಲಿ ಸಂಸದ ಕರಡಿ ಸಂಗಣ್ಣ ಅವರ ಕಾರ್ಯವೈಖರಿಯ ಬಗ್ಗೆಯೂ ಅಸಮಾಧಾನ ಇದೆ. ಇಲ್ಲಿಯೂ ಕಾಂಗ್ರೆಸ್‌ನಲ್ಲಿ ಪ್ರಭಲ ಅಭ್ಯರ್ಥಿಯ ಕೊರತೆಯಿದೆ ಎಂದು ಹೇಳಲಾಗುತ್ತಿದೆ. ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಹಾಗೂ ಬಸವರಾಜ ಹಿಟ್ನಾಳ್‌ ಹಾಗೂ ಬಸನಗೌಡ ಬಾದರ್ಲಿ ಟಿಕೆಟ್‌ಗೆ ಪೈಪೋಟಿ ನಡೆಸಿದ್ದಾರೆ. ಇವರ ಹೊರತಾಗಿ ಕೈ ನಾಯಕರು ಗೆಲ್ಲುವ ಸಾಮರ್ಥ್ಯದ  ಲೆಕ್ಕಾಚಾರ ಹಾಕುತ್ತಿದ್ದಾರೆಂದು ತಿಳಿದುಬಂದಿದೆ.

ದಾವಣಗೆರೆಯಲ್ಲಿ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಲೋಕಸಭೆ ಚುನಾವಣೆ ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದ್ದು, ಅವರ ಬದಲು ಪರ್ಯಾಯ ಪ್ರಬಲ ಅಭ್ಯರ್ಥಿ ಕಾಂಗ್ರೆಸ್‌ ನಾಯಕರಿಗೆ ಕಾಣಿಸುತ್ತಿಲ್ಲ. ದಕ್ಷಿಣ ಕನ್ನಡದಲ್ಲಿ ಮಾಜಿ ಸಚಿವರಾದ ರಮಾನಾಥ್‌ ರೈ, ವಿನಯ್‌ ಕುಮಾರ್‌ ಸೊರಕೆ ಹೆಸರು ಪ್ರಸ್ತಾಪವಾಗುತ್ತಿದ್ದರೂ, ಬಿಜೆಪಿಯ ಭದ್ರಕೋಟೆಯಾಗಿರುವುದರಿಂದ ಸಮರ್ಥರ ಬಗ್ಗೆಇನ್ನೂ ಹುಡುಕಾಟದಲ್ಲಿದ್ದಾರೆ ಎನ್ನಲಾಗಿದೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲೂ ಆಕಾಂಕ್ಷಿ ಗಳು ಸಾಕಷ್ಟಿದ್ದಾರೆ. ಎರಡೂ ಜಿಲ್ಲೆಯವರು ತಮ್ಮ ಜಿಲ್ಲೆಗೆ ಟಿಕೆಟ್‌ ನೀಡಬೇಕೆಂಬ ಒತ್ತಡವನ್ನೂ ರಾಜ್ಯ ನಾಯಕರ ಮೇಲೆ ಹಾಕುತ್ತಿದ್ದಾರೆ. ಆದರೆ, ಎರಡೂ ಜಿಲ್ಲೆಯ ಮೇಲೆ ಪ್ರಭಾವ ಬೆಳೆಸಿಕೊಂಡಿರುವ ಸಮರ್ಥ ಅಭ್ಯರ್ಥಿ ಕೈ ನಾಯಕರಿಗೆ ಕಾಣಿಸುತ್ತಿಲ್ಲ. ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಉಡುಪಿ ಜಿಲ್ಲೆಗೆ ಹೆಚ್ಚು ಸಮರ್ಥರೆನಿಸಿದರೆ, ಚಿಕ್ಕಮಗಳೂರಿಗೆ ಅವರ ಪ್ರಭಾವ ಅಷ್ಟೇನೂ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು ಎನ್‌ಆರ್‌ಐ ಫೋರಂನ ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷೆ ಆರತಿ ಕೃಷ್ಣ, ಮತ್ತು ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಡಾ.ವಿಜಯ್‌ಕುಮಾರ್‌ ಆಕಾಂಕ್ಷಿಗಳಾಗಿದ್ದಾರೆ. ಆದರೆ, ರಾಜ್ಯ ನಾಯಕರಿಗೆ ಅವರಲ್ಲಿ ಗೆಲ್ಲುವ ವಿಶ್ವಾಸ ಮೂಡಿದಂತೆ ಕಾಣುತ್ತಿಲ್ಲ.

ಉತ್ತರ ಕನ್ನಡದಲ್ಲೂ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಪುತ್ರ ಪ್ರಶಾಂತ್‌ ದೇಶಪಾಂಡೆ, ಮಾರ್ಗರೇಟ್‌ ಆಳ್ವಾ ಪುತ್ರ ನಿವೇದಿತ್‌ ಆಳ್ವಾ ಹೆಸರು ಪ್ರಸ್ತಾಪವಾಗಿದ್ದರೂ, ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅವರನ್ನು ಎದುರಿಸುವ ಪ್ರಬಲ ಅಭ್ಯರ್ಥಿ ಬಗ್ಗೆ ರಾಜ್ಯ ನಾಯಕರಲ್ಲಿ ಇನ್ನೂ ಗೊಂದಲವಿದೆ ಎನ್ನಲಾಗುತ್ತಿದೆ. ಇನ್ನು ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿಯೂ ಅದೇ ಪರಿಸ್ಥಿತಿ ಇದ್ದು, ಬೆಂಗಳೂರು ಉತ್ತರದಲ್ಲಿ ಎಂಟಕ್ಕೂ ಹೆಚ್ಚು ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಆದರೆ, ಗೆಲ್ಲುವ ಮುಖಗಳು ರಾಜ್ಯ ನಾಯಕರಿಗೆ ಕಾಣಿಸುತ್ತಿಲ್ಲ. ಅದೇ ಕಾರಣಕ್ಕೆ ಜೆಡಿಎಸ್‌ಗೆ ಬಿಟ್ಟು ಕೊಡುವ ಆಲೋಚನೆ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸ್ಪರ್ಧೆಗೆ ಹೇಳಿಕೊಳ್ಳುವ ಆಕಾಂಕ್ಷಿಗಳು ಕಾಣಸಿಗದಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಸುವ ಕುರಿತು ರಾಜ್ಯ ನಾಯಕರು ಹುಡುಕಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಅಭ್ಯರ್ಥಿಗಳ
ಕೊರತೆಯ ಕ್ಷೇತ್ರಗಳು
ವಿಜಯಪುರ, ಕೊಪ್ಪಳ , ದಾವಣಗೆರೆ, ದಕ್ಷಿಣ ಕನ್ನಡ ,ಉಡುಪಿ -ಚಿಕ್ಕಮಗಳೂರು, ಉತ್ತರ ಕನ್ನಡ (ಕೆನರಾ), ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ

 ಶಂಕರ ಪಾಗೋಜಿ

ಟಾಪ್ ನ್ಯೂಸ್

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ಕೇರಳ, ತಮಿಳುನಾಡಿನಲ್ಲಿ ಇಂದಿನಿಂದ ಭಾರೀ ಮಳೆ

ಕೇರಳ, ತಮಿಳುನಾಡಿನಲ್ಲಿ ಇಂದಿನಿಂದ ಭಾರೀ ಮಳೆ

ವಲಸಿಗರ ಹತ್ಯೆಗೆ ಕಾರ್ಯಸೂಚಿ; ಕಾಶ್ಮೀರದ ಉಗ್ರರಿಗೆ ಐಎಸ್‌ಐಯಿಂದ 22 ಅಂಶಗಳ ನೀಲನಕ್ಷೆ

ವಲಸಿಗರ ಹತ್ಯೆಗೆ ಕಾರ್ಯಸೂಚಿ; ಕಾಶ್ಮೀರದ ಉಗ್ರರಿಗೆ ಐಎಸ್‌ಐಯಿಂದ 22 ಅಂಶಗಳ ನೀಲನಕ್ಷೆ

ರಾಜಕೀಯದಲ್ಲಿ ನಶೆ ಗಲಾಟೆ!

ರಾಜಕೀಯದಲ್ಲಿ ನಶೆ ಗಲಾಟೆ!

ಬುದ್ಧನ ನಿರ್ವಾಣ ಸ್ಥಳದಲ್ಲಿ ಮೋದಿಯಿಂದ ಅಂ.ರಾ. ವಿಮಾನ ನಿಲ್ದಾಣ ಉದ್ಘಾಟನೆ

ಬುದ್ಧನ ನಿರ್ವಾಣ ಸ್ಥಳದಲ್ಲಿ ಮೋದಿಯಿಂದ ಅಂ.ರಾ. ವಿಮಾನ ನಿಲ್ದಾಣ ಉದ್ಘಾಟನೆ

ಮಧ್ಯಾಂತರ-ನಿಗದಿತ ಚುನಾವಣೆಯ ಲಾಭ ನಷ್ಟದ ಲೆಕ್ಕ

ಮಧ್ಯಾಂತರ-ನಿಗದಿತ ಚುನಾವಣೆಯ ಲಾಭ ನಷ್ಟದ ಲೆಕ್ಕ

ಇಂದು ಕೊನೆಯ ಅಭ್ಯಾಸ ಪಂದ್ಯ: ಭಾರತ-ಆಸ್ಟ್ರೇಲಿಯ ರಣತಂತ್ರ ಕೌತುಕ

ಇಂದು ಕೊನೆಯ ಅಭ್ಯಾಸ ಪಂದ್ಯ: ಭಾರತ-ಆಸ್ಟ್ರೇಲಿಯ ರಣತಂತ್ರ ಕೌತುಕ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡಾ| ವಿವೇಕ ರೈ ಸಹಿತ 7 ಮಂದಿಗೆ “ಮಾಸ್ತಿ ಪ್ರಶಸ್ತಿ’

ಡಾ| ವಿವೇಕ ರೈ ಸಹಿತ 7 ಮಂದಿಗೆ “ಮಾಸ್ತಿ ಪ್ರಶಸ್ತಿ’

ಜೈಲುಗಳಲ್ಲಿ ಇನ್ನು ಸಿಬಂದಿಗೂ ಮೊಬೈಲ್‌ ನಿಷೇಧ!

ಜೈಲುಗಳಲ್ಲಿ ಇನ್ನು ಸಿಬಂದಿಗೂ ಮೊಬೈಲ್‌ ನಿಷೇಧ!

ದೇಶದಲ್ಲಿ ಕೇಸರಿ ನಿಷೇಧ ಆಗಿದೆಯೇ: ಆರಗ ಪ್ರಶ್ನೆ

ದೇಶದಲ್ಲಿ ಕೇಸರಿ ನಿಷೇಧ ಆಗಿದೆಯೇ: ಆರಗ ಪ್ರಶ್ನೆ

ಇಂಧನ ಬೆಲೆ ಏರಿಕೆ ವಿರುದ್ಧ ಸರ್ಕಾರಕ್ಕೆ ಮನವಿ ಸಲ್ಲಿಸಿದ ಕಾಸಿಯಾ

ಇಂಧನ ಬೆಲೆ ಏರಿಕೆ ವಿರುದ್ಧ ಸರ್ಕಾರಕ್ಕೆ ಮನವಿ ಸಲ್ಲಿಸಿದ ಕಾಸಿಯಾ

ಭೂಕಂಪನ‌ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಭೇಟಿ

ಭೂಕಂಪನ‌ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಭೇಟಿ

MUST WATCH

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

ಹೊಸ ಸೇರ್ಪಡೆ

ಕಂಬಳ: ಈ ಋತುವಿನ ಸಂಭಾವ್ಯ ಪಟ್ಟಿ ಸಿದ್ಧ

ಕಂಬಳ: ಈ ಋತುವಿನ ಸಂಭಾವ್ಯ ಪಟ್ಟಿ ಸಿದ್ಧ

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ಡಾ| ವಿವೇಕ ರೈ ಸಹಿತ 7 ಮಂದಿಗೆ “ಮಾಸ್ತಿ ಪ್ರಶಸ್ತಿ’

ಡಾ| ವಿವೇಕ ರೈ ಸಹಿತ 7 ಮಂದಿಗೆ “ಮಾಸ್ತಿ ಪ್ರಶಸ್ತಿ’

ಭಾರತ-ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು: ಬಿಸಿಸಿಐ

ಭಾರತ-ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು: ಬಿಸಿಸಿಐ

ಕೇರಳ, ತಮಿಳುನಾಡಿನಲ್ಲಿ ಇಂದಿನಿಂದ ಭಾರೀ ಮಳೆ

ಕೇರಳ, ತಮಿಳುನಾಡಿನಲ್ಲಿ ಇಂದಿನಿಂದ ಭಾರೀ ಮಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.