ಬಿಟಿ ಕ್ಷೇತ್ರದಲ್ಲಿ ಸ್ಥಳಾವಕಾಶದ ಕೊರತೆಯಿಲ್ಲ

ಯಾರೇ ಬಂದರೂ ಮುಕ್ತ ಅವಕಾಶ, ಲಕ್ಷಾಂತರ ಉದ್ಯೋಗವೂ ಸೃಷ್ಟಿ: ಡಾ.ಸಿ.ಎನ್‌.ಅಶ್ವತ್ಥನಾರಾಯಣ

Team Udayavani, Nov 23, 2020, 1:43 PM IST

bng-tdy-05

ಕೋವಿಡ್ ಸಂಕಷ್ಟದಲ್ಲೂ ಯಾವುದೇ ತಾಂತ್ರಿಕ ದೋಷವಿಲ್ಲದೇ ಅಚ್ಚುಕಟ್ಟಾಗಿ ಬೆಂಗಳೂರುಟೆಕ್‌ ಸಮಿಟ್‌-2020 ಪೂರ್ಣ ಗೊಂಡಿದೆ.ಟೆಕ್‌ ಸಮಿಟ್‌ನಲ್ಲಾದ ಚರ್ಚೆ,ವಿಚಾರ ಮಿನಿಮಯ, ಸಂಶೋಧನೆ ಹಾಗೂ ಅಭಿವೃದ್ಧಿ ಕುರಿತಾದ ಒಪ್ಪಂದಗಳ ಅನುಷ್ಠಾನ ಹೇಗೆ ಮತ್ತು ರಾಜ್ಯ ಸರ್ಕಾರ ಯಾವ ರೀತಿಯಲ್ಲಿ ಇದಕ್ಕೆಲ್ಲ ಸಿದ್ಧತೆ ಮಾಡಿಕೊಂಡಿದೆ ಎಂಬುದರ ಬಗ್ಗೆ ಬೆಂಗಳೂರು ಟೆಕ್‌ ಸಮಿಟ್‌ – 2020 ಪ್ರಮುಖ ರೂವಾರಿ ಐಟಿ-ಬಿಟಿ ಸಚಿವರು ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರೊಂದಿಗೆ “ಉದಯವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ.

ಟೆಕ್‌ ಸಮಿಟ್‌ಯಶ ಕಂಡಿದ್ದು ಹೇಗೆ? :

ಪ್ರಸಕ್ತ ಕೋವಿಡ್‌ ಸಂಕಷ್ಟದ ನಡುವೆಯೂ ತಂತ್ರ ಜ್ಞಾನ ಬಳಸಿಕೊಂಡು ವರ್ಚುವಲ್‌ ವ್ಯವಸ್ಥೆಯಲ್ಲಿ ವಿಶ್ವಕ್ಕೆ ಮಾದರಿಯಾಗುವಂತೆ ಟೆಕ್‌ ಸಮಿಟ್‌ ನಡೆದಿದೆ. ದೇಶ, ಭಾಷೆ, ಪ್ರಾಂತ್ಯದ ಗಡಿ ಮೀರಿ ವಿಶ್ವದ ಗಮನ ಸೆಳೆದಿದೆ. ಆವಿಷ್ಕಾರ, ಸಂಶೋಧನೆ ಹಾಗೂ ಅಭಿವೃದ್ಧಿ, ಕೌಶಲತೆ ಸೇರಿ ಅನೇಕ ವಿಷಯ ಗಳ ಚರ್ಚೆ ಇಲ್ಲಾಗಿದೆ. ಕರ್ನಾಟಕದ ಐಟಿ-ಬಿಟಿ ಸಾಧನೆಯೂ ಇಲ್ಲಿ ಅನಾವರಣಗೊಂಡಿದೆ.

 ಟೆಕ್‌ ಸಮಿಟ್‌ನಿಂದ ಮುಂದೆ ಆಗಬಹುದಾದ ಲಾಭವೇನು? :

ಟೆಕ್‌ ಸಮಿಟ್‌ ಹೂಡಿಕೆಗೆ ಆದ್ಯತೆ ನೀಡುವುದಿಲ್ಲ. ವಿಶ್ವಮಟ್ಟದ ತಾಂತ್ರಿಕ ಕೌಶಲತೆ, ಮಾಹಿತಿ ತಂತ್ರ ಜ್ಞಾನದ ಜ್ಞಾನ ಹಾಗೂ ಹೊಸ ಆವಿಷ್ಕಾರಗಳು ಮತ್ತು ಯೋಜನೆಯ ವಿನಿಮಯ ಇಲ್ಲಾಗಿದೆ. ವಿಶ್ವಮಟ್ಟದ ಹೊಸ ಆಲೋಚನೆ, ಅನುಷ್ಠಾನ ಕ್ರಮದ ಚರ್ಚೆಯೂ ನಡೆದಿದೆ. ತಂತ್ರಜ್ಞಾನ, ಆವಿಷ್ಕಾರ,ಸಂಶೋಧನೆ, ಅಭಿವೃದ್ಧಿ ಇತ್ಯಾದಿಗಳಲ್ಲಿ ಆಗಬೇಕಿರುವ ಬಲವರ್ಧನೆ, ಸುಧಾರಣಾ ಕ್ರಮ ಬಗ್ಗೆ ವಿಚಾರ ವಿನಿಯಮ ನಡೆದಿದೆ.

ಉದ್ಯೋಗಾವಕಾಶ ಸೃಷ್ಟಿಗೆ ಉತ್ತೇಜನ ಹೇಗೆ? :

ಐಟಿ ಮತ್ತು ತಂತ್ರಜ್ಞಾನದ ಉತ್ಪಾದನೆ, ನವೋದ್ಯಮ ವಿವಿಧ ವಲಯದಲ್ಲಿ ಬೆಳೆಯುತ್ತಲೇ ಇದೆ. ಈ ಕ್ಷೇತ್ರಕ್ಕೆ ಎಷ್ಟೇ ಜನ ಬಂದರೂ ಸ್ಥಳಾವಕಾಶದ ಕೊರತೆ ಆಗದು, ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ. ಸೈಬರ್‌ ಭದ್ರತೆ, ಏರೋಸ್ಪೇಸ್‌, ಸ್ಪೇಸ್‌, ವಿಜ್ಞಾನ ತಂತ್ರಜ್ಞಾನ , ಇ-ಕಾಮರ್ಸ್‌, ಲಾಜೆಸ್ಟಿಕ್‌ ಹೀಗೆ ಹಲವು ವಲಯಗಳಲ್ಲಿ ತಂತ್ರಜ್ಞಾನದ ಪ್ರಭಾವ ಹೆಚ್ಚಾಗುತ್ತಿದೆ. ಇದರ ಪರಿಣಾಮ ಉದ್ಯೋಗಾವಕಾ ಶವೂ ಹೆಚ್ಚಾಗುತ್ತದೆ.

ಬಯೋ ಎಕಾನಮಿ ಗುರಿ ಸಾಧನೆಗೆ ಇರುವ ಕಾರ್ಯಕ್ರಮವೇನು? :

ಬಿಟಿ ಮೂಲಕವೇ ರಾಜ್ಯ ಮತ್ತು ದೇಶದಲ್ಲಿ ಅನೇಕ ಪರಿಹಾರಗಳು ಬಂದಿವೆ. ಆಗ್ರೋ ಎಕಾನಮಿಯಲ್ಲಿ ಶೇ.35 ಷೇರು ಹೊಂದಿದ್ದೇವೆ. ಅದನ್ನು ಶೇ.50ಕ್ಕೆ ಏರಿಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಬಯೋ ಎಕಾನಮಿ ಉತ್ತೇಜನಕ್ಕೆ ಸಂಬಂಧಿಸಿದಂತೆ ಪ್ರಮುಖ ಆರು ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದೇವೆ. ಬಯೋ ಉತ್ಪಾದನೆ. ವ್ಯಾಕ್ಸಿನ್‌, ಇಮಿನೋಲಜಿ, ಬಯೋ ರಿಫೈನರಿ, ಬಯೋ ತೈಲ ಇವುಗಳನ್ನೇ ಪ್ರಮುಖವಾಗಿಟ್ಟುಕೊಂಡು ಆಗ್ರೋ ಎಕಾನಮಿ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದ್ದೇವೆ.

ಟೆಕ್‌ ಸಮಿಟ್‌ನಲ್ಲಾದ ಒಪ್ಪಂದ ಅನುಷ್ಠಾನ ಹೇಗೆ? :

ಟೆಕ್‌ ಸಮಿಟ್‌ನಲ್ಲಿ ಪ್ರಮುಖ 8 ಒಪ್ಪಂದಗಳು ಆಗಿವೆ. ನವೋದ್ಯಮಕ್ಕೆ ಇನ್ನಷ್ಟು ಉತ್ತೇಜನ, ಕೃಷಿ, ಕೃತಕ ಬುದ್ಧಿಮತ್ತೆ, ಇಂಟರ್‌ನೆಟ್‌ ಆಫ್ ಥಿಂಗ್ಸ್‌, ಸೈಬರ್‌ ಭದ್ರತೆ ಹೀಗೆ ಹಲವು ಕ್ಷೇತ್ರವನ್ನು ಸಂಶೋಧನಾತ್ಮಕವಾಗಿ ಹಾಗೂ ಕೌಶಲ್ಯಾಧಾರಿತವಾಗಿ ಬಲ ಪಡಿಸುವ ನಿಟ್ಟಿನಲ್ಲಿ ಈ ಒಪ್ಪಂದಗಳಾಗಿದ್ದು, ಒಪ್ಪಂದವನ್ನು ನೇರವಾಗಿ ಸರ್ಕಾರ ಮಾಡಿಲ್ಲ. ಅನುಷ್ಠಾನಕ್ಕೆ ಯಾವುದೇ ಸಮಸ್ಯೆ ಆಗಬಾರದೆಂಬ ಸದುದ್ದೇಶದಿಂದ ನಮ್ಮಲ್ಲಿರುವ ಸೆಂಟರ್‌ ಫಾರ್‌ ಎಕ್ಸೆಲೆನ್ಸಿಗಳನ್ನು ಬಳಸಿಕೊಂಡು, ಬೇರೆ ಬೇರೆ ದೇಶದ ಇಂತಹ ಸಂಸ್ಥೆಗಳೊಂದಿಗೆ ಒಪ್ಪಂದ ನಡೆದಿದೆ. ಅನುಷ್ಠಾನದ ಪೂರ್ಣ ನಿರ್ವಹಣೆಯನ್ನು ಆ್ಯಂಕರಿಂಗ್‌ ಸಂಸ್ಥೆಗಳೇ ನೋಡಿಕೊಳ್ಳಲಿವೆ.

ಇದನ್ನೂ ಓದಿ : ರೋಶನ್ ಬೇಗ್ ನಮ್ಮ ಪಕ್ಷದಲ್ಲಿಲ್ಲ, ನಮಗೂ ಅವರಿಗೂ ಸಂಬಂಧವಿಲ್ಲ: ಸಿದ್ದರಾಮಯ್ಯ

 ಟೆಕ್‌ ಸಮಿಟ್‌ ಬಿಯಾಂಡ್‌ ಬೆಂಗಳೂರುಕಲ್ಪನೆಗೆ ಹೇಗೆ ಸಹಕಾರಿಯಾಗಿದೆ? :

 ಬಿಯಾಂಡ್‌ ಬೆಂಗಳೂರು ಪರಿಕಲ್ಪನೆಯಡಿ ಐಟಿ-ಬಿಟಿ, ನವೋದ್ಯಮ ಎಲ್ಲೆಡೆ ವಿಸ್ತರಿಸಲು ಟೆಕ್‌ ಸಮಿಟ್‌ ಸಾಕಷ್ಟು ಸಹಕಾರಿಯಾಗಿದೆ. ಸಂಪರ್ಕ ಜಾಲ, ಮಾರುಕಟ್ಟೆ ವ್ಯವಸ್ಥೆ, ಸ್ಥಳಾವಕಾಶ, ಸೌಲಭ್ಯ ಕಲ್ಪಿಸುವ ಜತೆಗೆ ಸ್ಥಳೀಯವಾಗಿರುವ ಸಮಸ್ಯೆಗಳನ್ನು ಬಗೆಹರಿಸಬೇಕು. ವರ್ಕ್‌ ಫ್ರಂ ಹೋಂ ಪರಿಕಲ್ಪನೆ ಯಡಿಎಲ್ಲಿಂದಬೇಕಾದರೂಸೇವೆ ಸಲ್ಲಿಸಬಹುದಾದ ವ್ಯವಸ್ಥೆಗೆ ನಾವು ಒಗ್ಗಿಕೊಂಡಿದ್ದೇವೆ.

ಕೇಂದ್ರ ಸರ್ಕಾರದಿಂದಯಾವ ರೀತಿಯಲ್ಲಿ ಸಹಕಾರ ಬಯಸುತ್ತಿದ್ದೀರಿ? :

ಕೇಂದ್ರ ಸರ್ಕಾರದಿಂದ ಯಾವುದೇ ಸಂಸ್ಥೆ ಅಥವಾ ಕೇಂದ್ರ ತೆರೆಯಲು ಅನುಮತಿ ನೀಡಿದರೂ ಅದನ್ನು ಅನುಷ್ಠಾನಕ್ಕೆ ತರಲಿದ್ದೇವೆ. ಇದರಿಂದ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗಲಿದೆ.

 ಗ್ರಾಮೀಣ ಭಾಗದಲ್ಲಿ ಇಂಟರ್‌ನೆಟ್‌ ಸಮಸ್ಯೆಗೆ ಪರಿಹಾರ ಹೇಗೆ? :

ಸಮಸ್ಯೆ ಬಗೆಹರಿಸಿ, ಸೌಲಭ್ಯದ ಉನ್ನತೀಕರಣಕ್ಕೆಕ್ರಮ ಆಗುತ್ತಿದೆ. ಟೆಲಿಕಾಂ ನೀತಿಯಲ್ಲಿ ಏಕಗವಾಕ್ಷಿ ವ್ಯವಸ್ಥೆ ಮೂಲಕ ಸೌಲಭ್ಯ ಕಲ್ಪಿಸಲಿದ್ದೇವೆ.ಕೇಬಲ್‌ ಸಂಪರ್ಕದ ವಿಸ್ತರಣೆ ಸೇರಿದಂತೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ.

ರಾಜುಖಾರ್ವಿ ಕೊಡೇರಿ

ಟಾಪ್ ನ್ಯೂಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.