Udayavni Special

ಗಣರಾಜ್ಯೋತ್ಸವಕ್ಕೆ ರಾಜ್ಯದಲ್ಲಿ ಕಟ್ಟೆಚ್ಚರ

Team Udayavani, Jan 19, 2021, 10:34 PM IST

Untitled-1

ಸಾಂದರ್ಭಿಕ ಚಿತ್ರ

ಬೆಂಗಳೂರು: ಉಗ್ರ ಚಟುವಟಿಕೆಗಳ ಶಂಕೆ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವದಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸುವಂತೆ  ಕೇಂದ್ರ ಗುಪ್ತಚರ ದಳ  ರಾಜ್ಯ ಪೊಲೀಸ್‌ ಇಲಾಖೆಗೆ ಸಂದೇಶ ರವಾನಿಸಿದೆ.

ಕಳೆದ ವರ್ಷ ರಾಜಧಾನಿಯಲ್ಲಿ ಐಸಿಸ್‌ ಪರವಾಗಿ ಕೆಲಸ ಮಾಡುತ್ತಿದ್ದ ಹಲವು ಮಂದಿ ಉಗ್ರರ ಬಂಧನವಾಗಿದೆ. ಜತೆಗೆ, ಆರೋಪಿಗಳು ನಗರ ಹಾಗೂ ಹೊರವಲಯ ಭಾಗಗಳಲ್ಲಿ ಐಸಿಸ್‌ ಪರವಾಗಿ ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದರು. ಜತೆಗೆ, ಸಂಘಟನೆ ಸಧೃಡಪಡಿಸಲಾಗುತ್ತಿತ್ತು ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿತ್ತು.

ಈ ನಿಟ್ಟಿನಲ್ಲಿ ಗಣರಾಜ್ಯೋತ್ಸವ ದಿನದಂದು ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಎಚ್ಚರ ವಹಿಸಬೇಕಿದೆ. ಹೀಗಾಗಿ, ರಾಜ್ಯದ ಪ್ರಮುಖ ನಗರಗಳು, ಪ್ರಮುಖ ಐತಿಹಾಸಿಕ ಸ್ಥಳಗಳು, ಕರಾವಳಿ ತೀರ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಹಾಗೂ ನಿಗಾವಹಿಸುವಂತೆ ಗುಪ್ತಚರ ದಳ ಪೊಲೀಸ್‌ ಇಲಾಖೆಗೆ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.

ಗುಪ್ತಚರ ದಳದ ಮಾಹಿತಿ ಮೇರೆಗೆ ಎಚ್ಚೆತ್ತಿರುವ  ಪೊಲೀಸ್‌ ಇಲಾಖೆ, ಆಂತರಿಕ ಭದ್ರತಾ ವಿಭಾಗ ಅಲರ್ಟ್‌ ಆಗಿದ್ದು. ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ. ನಗರದಲ್ಲಿರುವ  ಪ್ರಮುಖ ಐತಿಹಾಸಿಕ ಸ್ಥಳಗಳ ಕಡೆ ನಿಗಾ ಇರಿಸಿವೆ. ಅಷ್ಟೇ ಅಲ್ಲದೆ ನಗರದಲ್ಲಿರುವ ವಿದೇಶಗಳ ರಾಯಭಾರಿ ಕಚೇರಿಗಳಲ್ಲಿ ಭದ್ರತೆಯ ಕುರಿತಾಗಿ ಪರಿಶೀಲನೆ ನಡೆಸಿದ್ದು ಮಾಹಿತಿ ಪಡೆದುಕೊಂಡು ಎಚ್ಚರದಿಂದ ಇರುವಂತೆ ಸಲಹೆ ನೀಡಿದೆ. ಅಷ್ಟೇ ಅಲ್ಲದೆ ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಮಂಗಳೂರು ಸೇರಿದಂತೆ ಎಲ್ಲ ಜಿಲ್ಲೆಗಳ ಪೊಲೀಸ್‌ ವಿಭಾಗಕ್ಕೂ ಗುಪ್ತಚರ ದಳದ ಮಾಹಿತಿ ರವಾನಿಸಿದ್ದು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್‌ ಇಲಾಖೆಯ ಕೇಂದ್ರ ಕಚೇರಿಯಿಂದ ಮಾಹಿತಿ ರವಾನೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಐಎಸ್‌ಡಿ ಫುಲ್‌ ಅಲರ್ಟ್‌! :

ರಾಜ್ಯದಲ್ಲಿ  ಉಗ್ರಚಟುವಟಿಕೆಗಳು, ನಕ್ಸಲ್‌ ಚಟುವಟಿಕೆಗಳನ್ನು ಪತ್ತೆಹಚ್ಚಲೆಂದೇ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಆಂತರಿಕ ಭದ್ರತಾ ದಳ( ಐಎಸ್‌ಡಿ) ಕೂಡ ಅಲರ್ಟ್‌ ಆಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಗುಪ್ತಚರ ಮಾಹಿತಿ ಮೇರೆಗೆ ರಾಜ್ಯದಲ್ಲಿ ಉಗ್ರ ಚಟುವಟಿಕೆಗಳ  ಮೇಲೆ ನಿಗಾ ಇಟ್ಟಿದೆ.

ಅಷ್ಟೇ ಅಲ್ಲದೆ ಕರಾವಣಿ ತೀರ ಪ್ರದೇಶದ ಮೇಲೂ ಹದ್ದಿನ ಕಣ್ಣಿಟ್ಟಿದ್ದು ಇತ್ತೀಚೆಗೆ ಐಎಸ್‌ಡಿಯ ಹಿರಿಯ ಅಧಿಕಾರಿಗಳು ಕಾರವಾರ, ಉತ್ತರ ಕನ್ನಡ, ಮಂಗಳೂರು, ಕುಮಟಾ ಸೇರಿ ಹಲವು ಕಡಲ ತೀರ ಪ್ರದೇಶಗಳಿಗೆ ಭೇಟಿ ನೀಡಿದ್ದು. ಸಾಗರ ರಕ್ಷಣಾ ದಳದ ಸಿಬ್ಬಂದಿ ಜತೆ  ಭದ್ರತಾ ಕ್ರಮಗಳ ಜತೆ  ಚರ್ಚೆ ನಡೆಸಿದ್ದಾರೆ. ಕಾನೂನು ಬಾಹಿರ ಚಟುವಟಿಕೆಗಳ ನಡೆಯದಂತೆ ಯಾವೆಲ್ಲಾ ಕ್ರಮಗಳನ್ನು ಅನುಸರಿಬೇಕು ಎಂಬುದರ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

” ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿದೆ. ಇಲಾಖೆಗೆ ಸಂಬಂಧಪಟ್ಟಂತೆ ಆಗಾಗ್ಗೆ ಸೂಚನೆಗಳನ್ನು ನೀಡಲಾಗುತ್ತಿರುತ್ತದೆ. ಅದೇ ರೀತಿ ಗಣರಾಜ್ಯೋತ್ಸವಕ್ಕೆ ಸಂಬಂಧಪಟ್ಟಂತೆ ಕಟ್ಟುನಿಟ್ಟಿನ ಕಾನೂನು ಸುವ್ಯವಸ್ಥೆ ಪಾಲನೆ ಮಾಡಲಾಗುತ್ತದೆ.”ಸಿ.ಎಚ್‌ ಪ್ರತಾಪ್‌ ರೆಡ್ಡಿ,  ಎಡಿಜಿಪಿ, ಕಾನೂನು ಸುವ್ಯವಸ್ಥೆ ವಿಭಾಗ

ಟಾಪ್ ನ್ಯೂಸ್

IWD2021-womensday

ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ “ಸ್ವಯಂ-ಆರೈಕೆ”ಯ ಉಡುಗೊರೆ

ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಕನಸಿನ ಕನ್ಯೆಯು ಬಾಳ ಸಂಗಾತಿಯು ದೊರಕಲಿದ್ದಾಳೆ

ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಕನಸಿನ ಕನ್ಯೆಯು ಬಾಳ ಸಂಗಾತಿಯಾಗಿ ದೊರಕಲಿದ್ದಾಳೆ

ತೀರಲಿ ಜನರ ಸಂಕಷ್ಟ : ಇಂದು ಬಿಎಸ್‌ವೈ 8ನೇ ಬಜೆಟ್‌

ತೀರಲಿ ಜನರ ಸಂಕಷ್ಟ : ಇಂದು ಬಿಎಸ್‌ವೈ 8ನೇ ಬಜೆಟ್‌

ಗಡಿ ಕಾವಲಿಗೆ ಉಪಗ್ರಹದ ಬಲ : ಮಾ.28ರಂದು ಇಸ್ರೋದಿಂದ ಗೇಮ್‌ಚೇಂಜರ್‌ ಉಪಗ್ರಹ ಉಡಾವಣೆ

ಗಡಿ ಕಾವಲಿಗೆ ಉಪಗ್ರಹದ ಬಲ : ಮಾ.28ರಂದು ಇಸ್ರೋದಿಂದ ಗೇಮ್‌ಚೇಂಜರ್‌ ಉಪಗ್ರಹ ಉಡಾವಣೆ

ಸಿ.ಡಿ. ಲೇಡಿಯ ಮಾಹಿತಿ ಪೊಲೀಸರಿಗೆ ಲಭ್ಯ : ಯುವತಿಯ ಪತ್ತೆಗೆ ಬಲೆ ಬಿಸಿದ ಪೊಲೀಸರು

ಸಿ.ಡಿ. ಲೇಡಿಯ ಮಾಹಿತಿ ಪೊಲೀಸರಿಗೆ ಲಭ್ಯ : ಯುವತಿಯ ಪತ್ತೆಗೆ ಬಲೆ ಬಿಸಿದ ಪೊಲೀಸರು

ಇಂದು ರಾಜ್ಯ ಬಜೆಟ್‌: ಸಿಎಂ ಪಾಲಿಗೆ ಹಗ್ಗದ ಮೇಲಿನ ನಡಿಗೆ

ಇಂದು ರಾಜ್ಯ ಬಜೆಟ್‌: ಸಿಎಂ ಪಾಲಿಗೆ ಹಗ್ಗದ ಮೇಲಿನ ನಡಿಗೆ

ರಾಜ್ಯದಲ್ಲಿ ಕೋವಿಡ್ ಕಾಟಕ್ಕೆ ಒಂದು ವರ್ಷ :ಮಾ. 8ರಂದು ಮೊದಲ ಪ್ರಕರಣ ಬೆಂಗಳೂರಿನಲ್ಲಿ ಪತ್ತೆ

ರಾಜ್ಯದಲ್ಲಿ ಕೋವಿಡ್ ಕಾಟಕ್ಕೆ ಒಂದು ವರ್ಷ :ಮಾ. 8ರಂದು ಮೊದಲ ಪ್ರಕರಣ ಬೆಂಗಳೂರಿನಲ್ಲಿ ಪತ್ತೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತೀರಲಿ ಜನರ ಸಂಕಷ್ಟ : ಇಂದು ಬಿಎಸ್‌ವೈ 8ನೇ ಬಜೆಟ್‌

ತೀರಲಿ ಜನರ ಸಂಕಷ್ಟ : ಇಂದು ಬಿಎಸ್‌ವೈ 8ನೇ ಬಜೆಟ್‌

ಸಿ.ಡಿ. ಲೇಡಿಯ ಮಾಹಿತಿ ಪೊಲೀಸರಿಗೆ ಲಭ್ಯ : ಯುವತಿಯ ಪತ್ತೆಗೆ ಬಲೆ ಬಿಸಿದ ಪೊಲೀಸರು

ಸಿ.ಡಿ. ಲೇಡಿಯ ಮಾಹಿತಿ ಪೊಲೀಸರಿಗೆ ಲಭ್ಯ : ಯುವತಿಯ ಪತ್ತೆಗೆ ಬಲೆ ಬಿಸಿದ ಪೊಲೀಸರು

ರಾಜ್ಯದಲ್ಲಿ ಕೋವಿಡ್ ಕಾಟಕ್ಕೆ ಒಂದು ವರ್ಷ :ಮಾ. 8ರಂದು ಮೊದಲ ಪ್ರಕರಣ ಬೆಂಗಳೂರಿನಲ್ಲಿ ಪತ್ತೆ

ರಾಜ್ಯದಲ್ಲಿ ಕೋವಿಡ್ ಕಾಟಕ್ಕೆ ಒಂದು ವರ್ಷ :ಮಾ. 8ರಂದು ಮೊದಲ ಪ್ರಕರಣ ಬೆಂಗಳೂರಿನಲ್ಲಿ ಪತ್ತೆ

ಬೆಳ್ಳೂಟಿ ಗೇಟ್ ಬಳಿ ನೀಲಗಿರಿ ತೋಪಿನಲ್ಲಿ ಬೆಂಕಿ ಅವಘಡ

ಬೆಳ್ಳೂಟಿ ಗೇಟ್ ಬಳಿ ನೀಲಗಿರಿ ತೋಪಿನಲ್ಲಿ ಬೆಂಕಿ ಅವಘಡ : ಬೆಂಕಿ ನಂದಿಸಲು ಹರಸಾಹಸ

Modi

ಮಂಗಳೂರು ವೈದ್ಯ ಪದ್ಮನಾಭ್ ಕಾಮತ್ ಜನಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ…!   

MUST WATCH

udayavani youtube

ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021

udayavani youtube

ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ

udayavani youtube

ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21

udayavani youtube

ಮುಂಬೈನಲ್ಲೇನೂ ನಡೆದಿಲ್ಲ, ನಮ್ಮ ಕೈ, ಬಾಯಿ ಶುದ್ಧವಿದೆ: ಸಚಿವ ಭೈರತಿ ಬಸವರಾಜ್

udayavani youtube

ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ

ಹೊಸ ಸೇರ್ಪಡೆ

IWD2021-womensday

ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ “ಸ್ವಯಂ-ಆರೈಕೆ”ಯ ಉಡುಗೊರೆ

ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಕನಸಿನ ಕನ್ಯೆಯು ಬಾಳ ಸಂಗಾತಿಯು ದೊರಕಲಿದ್ದಾಳೆ

ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಕನಸಿನ ಕನ್ಯೆಯು ಬಾಳ ಸಂಗಾತಿಯಾಗಿ ದೊರಕಲಿದ್ದಾಳೆ

ತೀರಲಿ ಜನರ ಸಂಕಷ್ಟ : ಇಂದು ಬಿಎಸ್‌ವೈ 8ನೇ ಬಜೆಟ್‌

ತೀರಲಿ ಜನರ ಸಂಕಷ್ಟ : ಇಂದು ಬಿಎಸ್‌ವೈ 8ನೇ ಬಜೆಟ್‌

ಗಡಿ ಕಾವಲಿಗೆ ಉಪಗ್ರಹದ ಬಲ : ಮಾ.28ರಂದು ಇಸ್ರೋದಿಂದ ಗೇಮ್‌ಚೇಂಜರ್‌ ಉಪಗ್ರಹ ಉಡಾವಣೆ

ಗಡಿ ಕಾವಲಿಗೆ ಉಪಗ್ರಹದ ಬಲ : ಮಾ.28ರಂದು ಇಸ್ರೋದಿಂದ ಗೇಮ್‌ಚೇಂಜರ್‌ ಉಪಗ್ರಹ ಉಡಾವಣೆ

ಸಿ.ಡಿ. ಲೇಡಿಯ ಮಾಹಿತಿ ಪೊಲೀಸರಿಗೆ ಲಭ್ಯ : ಯುವತಿಯ ಪತ್ತೆಗೆ ಬಲೆ ಬಿಸಿದ ಪೊಲೀಸರು

ಸಿ.ಡಿ. ಲೇಡಿಯ ಮಾಹಿತಿ ಪೊಲೀಸರಿಗೆ ಲಭ್ಯ : ಯುವತಿಯ ಪತ್ತೆಗೆ ಬಲೆ ಬಿಸಿದ ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.