ವಿಷ ಗಾಳಿ ಸೇವಿಸಿ ಯೋಧನ ಮಕ್ಕಳಿಬ್ಬರ ಸಾವು

Team Udayavani, Oct 31, 2019, 3:00 AM IST

ರಾಯಬಾಗ: ಕಾಳುಗಳಿಗೆ ಲೇಪನ ಮಾಡಿದ ರಾಸಾಯನಿಕದ ಗಾಳಿ ಸೇವಿಸಿ ಯೋಧನ ಮಕ್ಕಳಿಬ್ಬರು ಮೃತಪಟ್ಟಿದ್ದು, ಪತ್ನಿ ಅಸ್ವಸ್ಥರಾದ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ನಡೆದಿದೆ. ಯೋಧ ಹನಮಂತ ಕುಂಬಾರ ಮತ್ತು ಕವಿತಾ ದಂಪತಿಯ ಮಕ್ಕಳಾದ ಜಯಶ್ರೀ (6) ಐಶ್ವರ್ಯ(4) ಮೃತಪಟ್ಟವರು. ಯೋಧನ ಸೋದರ ಆಹಾರಧಾನ್ಯ ವ್ಯಾಪಾರ ಮಾಡುತ್ತಿದ್ದರು. ಅದಕ್ಕಾಗಿ ಮನೆಯಲ್ಲೇ ಕಾಳುಕಡ್ಡಿ ಸಂಗ್ರಹಿಸಿಟ್ಟಿದ್ದರು.

ಅವು ಕೆಡದಂತೆ ರಾಸಾಯನಿಕ ಲೇಪನ ಮಾಡಲಾಗಿತ್ತು. ಅದೇ ಕೋಣೆಯಲ್ಲಿ ಮಲಗಿದ್ದ ಯೋಧನ ಪತ್ನಿ ಹಾಗೂ ಮಕ್ಕಳು ರಾತ್ರಿ ತೀವ್ರ ಅಸ್ವಸ್ಥಗೊಂಡರು. ಮಕ್ಕಳು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರೆ, ತಾಯಿ ಮೀರಜ್‌ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಯೋಧ ಹನುಮಂತ ಕಳೆದ ಹತ್ತು ವರ್ಷಗಳಿಂದ ಆಸ್ಸಾಂನ ಗುವಾಹಟಿಯಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ