ರೈಲುಗಳ ಸಂಚಾರ ವಿಳಂಬ

Team Udayavani, Jul 25, 2019, 3:00 AM IST

ಹುಬ್ಬಳ್ಳಿ: ನೈರುತ್ಯ ರೈಲ್ವೆಯ ಚಳಗೇರಿ-ಬ್ಯಾಡಗಿ ನಿಲ್ದಾಣಗಳ ಮಧ್ಯೆ ಮಾರ್ಗ ನಿರ್ವಹಣೆಗಾಗಿ ಟ್ರ್ಯಾಕ್‌ ಮಶಿನ್‌ ಸಂಚಾರ ಪ್ರಯುಕ್ತ ಜು.25ರಿಂದ ಆಗಸ್ಟ್‌ 15ರವರೆಗೆ ಕೆಲ ರೈಲುಗಳ ಸಂಚಾರ ಪೂರ್ಣ ರದ್ದುಪಡಿಸಿದ್ದರೆ, ಕೆಲ ರೈಲುಗಳ ಸಂಚಾರವನ್ನು ಭಾಗಶ: ರದ್ದುಪಡಿಸಲಾಗುವುದು.

ಜು.25ರಿಂದ ಜು.28ರವರೆಗೆ ಅರಸಿಕೆರೆ-ಹುಬ್ಬಳ್ಳಿ ಪ್ಯಾಸೆಂಜರ್‌ (56273) ಮಾರ್ಗ ಮಧ್ಯದ ನಿಲ್ದಾಣಗಳಲ್ಲಿ 40 ನಿಮಿಷ ನಿಲುಗಡೆಗೊಳ್ಳಲಿದೆ. ಜು.29ರಿಂದ ಆಗಸ್ಟ್‌ 4ರವರೆಗೆ (ಬುಧವಾರ ಹೊರತುಪಡಿಸಿ) ಮಾರ್ಗ ಮಧ್ಯದ ನಿಲ್ದಾಣಗಳಲ್ಲಿ 10 ನಿಮಿಷ, ಆಗಸ್ಟ್‌ 5ರಿಂದ ಆಗಸ್ಟ್‌ 15ರವರೆಗೆ 50 ನಿಮಿಷ, ಆಗಸ್ಟ್‌ 16ರಿಂದ ಆಗಸ್ಟ್‌ 30ರವರೆಗೆ 30 ನಿಮಿಷ ವಿಳಂಬವಾಗಿ ಸಂಚರಿಸುವುದು.

ಜು.25ರಿಂದ ಜು.28ರವರೆಗೆ ಹುಬ್ಬಳ್ಳಿ-ಬೆಂಗಳೂರು ನಗರ ಪ್ಯಾಸೆಂಜರ್‌ (56516) ರೈಲು 20 ನಿಮಿಷ ವಿಳಂಬವಾಗಿ, ಜು.29ರಿಂದ ಆಗಸ್ಟ್‌ 4ರವರೆಗೆ (ಬುಧವಾರ ಹೊರತುಪಡಿಸಿ) 30 ನಿಮಿಷ, ಆಗಸ್ಟ್‌ 5ರಿಂದ ಆ.30ರವರೆಗೆ 40ರಿಂದ 60 ನಿಮಿಷ, ಸೆಪ್ಟೆಂಬರ್‌ 1ರಿಂದ ಸೆಪ್ಟೆಂಬರ್‌ 15ರವರೆಗೆ 20 ನಿಮಿಷ ನಿಲುಗಡೆಗೊಂಡು ಸಾಗುವುದು.

ಜು.31ರಂದು ಚಿಕ್ಕಜಾಜೂರು-ಹುಬ್ಬಳ್ಳಿ ಪ್ಯಾಸೆಂಜರ್‌ (56915) ರೈಲು ಚಿಕ್ಕಜಾಜೂರಿನಿಂದ ರಾಣಿಬೆನ್ನೂರಿನವರೆಗೆ ಭಾಗಶ: ರದ್ದುಪಡಿಸಲಾಗಿದೆ. ಸೆಪ್ಟೆಂಬರ್‌ 1ರಿಂದ ಸೆ.15ರವರೆಗೆ ಬೆಂಗಳೂರು ನಗರ-ಹುಬ್ಬಳ್ಳಿ ಪ್ಯಾಸೆಂಜರ್‌ (56911) ರೈಲು 60 ನಿಮಿಷ ಮಾರ್ಗ ಮಧ್ಯದ ನಿಲ್ದಾಣಗಳಲ್ಲಿ ನಿಲುಗಡೆಗೊಂಡು ತೆರಳುವುದು ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಉಪಚುನಾವಣೆಯಲ್ಲಿ ಎರಡಂಕಿ ಸ್ಥಾನ ಗೆದ್ದು ಸರ್ಕಾರ ಸುಭದ್ರಗೊಳಿಸುವ ವಿಶ್ವಾಸದಲ್ಲಿರುವ ಬಿಜೆಪಿ, ಆಯ್ದ ಪ್ರಮುಖ ಕ್ಷೇತ್ರಗಳಲ್ಲಿ ವ್ಯತಿರಿಕ್ತ...

  • ಬೆಂಗಳೂರು: ನಾಲ್ವರು ಆರೋಪಿಗಳು ಮಹಜರು ಕಾರ್ಯದ ವೇಳೆ ಪೊಲೀಸ್‌ ಸಿಬಂದಿಯ ಮೇಲೆ ತಿರುಗಿಬಿದ್ದು ಕೊಲೆಗೆ ಯತ್ನಿಸಿದರು... ಈ ವೇಳೆ ಅನಿವಾರ್ಯವಾಗಿ ಪ್ರಾಣ ರಕ್ಷಣೆಗಾಗಿ...

  • ಬೆಂಗಳೂರು: ಉಪ ಚುನಾವಣೆ ಫ‌ಲಿತಾಂಶದ ನಂತರ ರಾಜ್ಯ ಕಾಂಗ್ರೆಸ್‌ನಲ್ಲಿ ಸಾಕಷ್ಟು ಬದಲಾವಣೆಗಳಾಗುವ ಸಾಧ್ಯತೆಯಿದ್ದು, ಪ್ರಮುಖವಾಗಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ...

  • ಬೆಂಗಳೂರು: ಮತದಾನೋತ್ತರ ಸಮೀಕ್ಷೆಯಂತೆ ಬಿಜೆಪಿಗೆ ಸುಭದ್ರ ಸರ್ಕಾರದ ಭರವಸೆ ಮೂಡಿಸಿದ್ದು, ಜೆಡಿಎಸ್‌ ನಿರೀಕ್ಷಿತ ಸ್ಥಾನ ಗೆಲ್ಲದಿದ್ದರೆ ಮುಂದಿನ ದಿನಗಳಲ್ಲಿ...

  • ಬೆಂಗಳೂರು: ರಾಜ್ಯಾದ್ಯಂತ ಅನುಷ್ಠಾನದಲ್ಲಿರುವ ಶುದ್ಧ ಕುಡಿಯುವ ನೀರು ಘಟಕಗಳ ಕಾರ್ಯನಿರ್ವಹಣೆ ಸಂಬಂಧ ಸೂಕ್ತ ನಿಯಮಾವಳಿ ರೂಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ....

ಹೊಸ ಸೇರ್ಪಡೆ