ಬಿಜೆಪಿ ವಿರುದ್ಧ ಅನರ್ಹರ ಅಸಮಾಧಾನ


Team Udayavani, Sep 18, 2019, 3:08 AM IST

bjp-viru

ಬೆಂಗಳೂರು: ಪಕ್ಷದ ವಿರುದ್ಧ ಬಂಡೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅನರ್ಹರಾಗಿರುವ 17 ಶಾಸಕರು, ಈಗ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಳಂಬವಾಗುತ್ತಿರುವುದ ರಿಂದ ಬಿಜೆಪಿ ನಾಯಕರ ವಿರುದ್ಧ ಆಕ್ರೋಶಗೊಂಡಿದ್ದಾರೆ.

ಶಾಸಕರು ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದು, ಬಿಜೆಪಿ ಬೆಂಬಲಿಸಿ, ಬಿಜೆಪಿ ಸರ್ಕಾರ ಬರಲು ಕಾರಣೀಕರ್ತ ರಾಗಿದ್ದರು. ತಮಗೆ ಬೆಂಬಲ ನೀಡಿದರೆ ಸರ್ಕಾರ ಬಂದ ತಕ್ಷಣ ಕೋರ್ಟ್‌ ಪ್ರಕರಣ ಇತ್ಯರ್ಥಗೊಳ್ಳುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದ ಬಿಜೆಪಿ ನಾಯಕರು, ಈಗ ಅನರ್ಹ ಶಾಸಕರ ಬೇಡಿಕೆಗೆ ಸರಿಯಾಗಿ ಸ್ಪಂದಿಸದಿರುವುದು ಬಿಜೆಪಿ ನಾಯಕರ ಮೇಲೆ ಆಕ್ರೋಶಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಮಂಗಳವಾರವೂ ಸುಪ್ರೀಂಕೋರ್ಟ್‌ನಲ್ಲಿ ಅನರ್ಹತೆ ಪ್ರಕರಣದ ವಿಚಾರಣೆಯನ್ನು ಸೆ.23ಕ್ಕೆ ಮುಂದೂಡಿರು ವುದರಿಂದ ರಮೇಶ್‌ ಜಾರಕಿಹೊಳಿ ನೇತೃತ್ವದ ಅನರ್ಹ ಶಾಸಕರು, ತಮ್ಮನ್ನು ಬಿಜೆಪಿಗೆ ಸೇರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ವಿರುದ್ಧ ಗರಂ ಆಗಿದ್ದಾರೆಂದು ತಿಳಿದು ಬಂದಿದೆ.

ದೆಹಲಿಯಲ್ಲಿ ಕೋರ್ಟ್‌ನಲ್ಲಿ ಪ್ರಕರಣ ಮುಂದೂಡುತ್ತಿದ್ದಂತೆ ಅನರ್ಹ ಶಾಸಕರು, ನಿಮ್ಮನ್ನು ನಂಬಿ ನಾವು ಹಾಳಾಗಿದ್ದೇವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿ ಮಾಡಿಸಿ ಎಂದರೂ ಭೇಟಿ ಮಾಡಿಸುತ್ತಿಲ್ಲ. ನಮ್ಮ ರಾಜೀನಾಮೆ ಕೊಡಿಸುವಾಗ ಇದ್ದ ಪರಿಸ್ಥಿತಿ ಈಗಿಲ್ಲ. ಅವರನ್ನು ಏಕೆ ಭೇಟಿ ಮಾಡಿಸುತ್ತಿಲ್ಲ ಎಂದು ಸಿ.ಪಿ.ಯೋಗೇಶ್ವರ್‌ ಮುಂದೆ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ ಎನ್ನಲಾಗಿದೆ. ನಂತರ, ಸಿ.ಪಿ.ಯೋಗೇಶ್ವರ್‌ ಅವರನ್ನು ಸಮಾಧಾನ ಪಡಿಸಿ ಶೀಘ್ರವೇ ಅಮಿತ್‌ ಶಾರನ್ನು ಭೇಟಿ ಮಾಡಿಸುವುದಾಗಿ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.

ಅಶೋಕ್‌ ಮೇಲೂ ಒತ್ತಡ: ಇದಕ್ಕೂ ಮೊದಲು ಸೋಮವಾರ ಕೆಲವು ಅನರ್ಹ ಶಾಸಕರು ಕಂದಾಯ ಸಚಿವ ಆರ್‌.ಅಶೋಕ್‌ ಅವರನ್ನೂ ಭೇಟಿ ಮಾಡಿ, ಬಿಜೆಪಿಯವರು ತಮಗೆ ಸರಿಯಾಗಿ ಸ್ಪಂದಿಸದಿರುವ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆಂದು ತಿಳಿದು ಬಂದಿದೆ. ನಾವು ರಾಜೀನಾಮೆ ನೀಡಿದ್ದರಿಂದ ನೀವು ಸಚಿವರಾಗಿದ್ದೀರಿ. ಆದರೆ, ನಮ್ಮನ್ನು ಕರೆದುಕೊಂಡು ಹೋಗುವಾಗ ನೀವು ನೀಡಿರುವ ಯಾವ ಭರವಸೆಗಳೂ ಈಡೇರುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಅನರ್ಹಗೊಂಡಿರುವ ಶಾಸಕರ ಜತೆ ನಾವಿದ್ದೇವೆ. ಅವರ ಭಾವನೆಗಳಿಗೆ ನಮ್ಮ ಸಹಮತ ಇದೆ. ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ನಾವು ಉಪ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿಲ್ಲ.
-ಆರ್‌. ಅಶೋಕ್‌, ಸಚಿವ

ಕೋರ್ಟ್‌ ವಿಚಾರದಲ್ಲಿ ನಾವೇನೂ ಹೇಳಲು ಆಗುವುದಿಲ್ಲ. ನಾವು ಅಮಿತ್‌ ಶಾ ಭೇಟಿಗೆ ಅವಕಾಶ ಕೇಳಿಲ್ಲ. ಪ್ರಕರಣ ಇತ್ಯರ್ಥವಾಗದಿದ್ದರೂ, ನಾವು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶವಿದೆ. ನಮಗೆ ಯಾವುದೇ ಭಯ ಇಲ್ಲ.
-ಬಿ.ಸಿ.ಪಾಟೀಲ್‌, ಅನರ್ಹ ಶಾಸಕ

ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆಗೆ ಬಂದಿದೆ. ಕೋರ್ಟ್‌ ವಿಚಾರ ಯಾವಾಗ ಮುಗಿಯುತ್ತದೆ ಎಂದು ಹೇಗೆ ಹೇಳುವುದು?. ಇವತ್ತು ವಿಚಾರಣೆಗೆ ಬಂದಿದ್ದು, ಸ್ವಲ್ಪ ಸಮಾಧಾನ ತಂದಿದೆ. ಜಡ್ಜ್ ಹಿಂದೆ ಸರಿದಿರುವುದರಿಂದ ವಿಚಾರಣೆಯನ್ನು ಮುಂದೂಡಲಾಗಿದೆ. ಆದಷ್ಟು ಬೇಗ ಇತ್ಯರ್ಥವಾಗುವ ಆಶಾಭಾವನೆ ಹೊಂದಿದ್ದೇವೆ.
-ಪ್ರತಾಪ್‌ಗೌಡ ಪಾಟೀಲ್‌, ಅನರ್ಹ ಶಾಸಕ

ಟಾಪ್ ನ್ಯೂಸ್

ಕೃಷಿ ಕಾಯ್ದೆ ಪ್ರತಿಭಟನೆ ಸ್ಥಳದಲ್ಲಿ ಮಹಿಳೆಯರ ಮೇಲೆ ಹರಿದ ಟ್ರಕ್: ಮೂವರು ಸಾವು!

ಕೃಷಿ ಕಾಯ್ದೆ ಪ್ರತಿಭಟನೆ ಸ್ಥಳದಲ್ಲಿ ಮಹಿಳೆಯರ ಮೇಲೆ ಹರಿದ ಟ್ರಕ್: ಮೂವರು ಸಾವು!

alcohol

10 ರೂ. ಗೆ ನಡೆಯಿತು ಕೊಲೆ! ಸಾರಾಯಿ ಕುಡಿಯಲು ಹಣ ಕೊಡದ ಸ್ನೇಹಿತನನ್ನೇ ಕೊಂದರು!

ಭಜರಂಗಿಯ ಕಲರ್ ಫುಲ್ ಇವೆಂಟ್ ನಲ್ಲಿ ಸ್ಟಾರ್ಸ್ ಸಂಗಮ

ಭಜರಂಗಿಯ ಕಲರ್ ಫುಲ್ ಇವೆಂಟ್ ನಲ್ಲಿ ಸ್ಟಾರ್ಸ್ ಸಂಗಮ

ವಲಸೆ ಕಾರ್ಮಿಕರ ಹತ್ಯೆಗೆ ನೆರವು ನೀಡುತ್ತಿದ್ದ ಉಗ್ರನನ್ನು ಹತ್ಯೆ ಮಾಡಿದ ಭದ್ರತಾ ಪಡೆ

ವಲಸೆ ಕಾರ್ಮಿಕರ ಹತ್ಯೆಗೆ ನೆರವು ನೀಡುತ್ತಿದ್ದ ಉಗ್ರನನ್ನು ಹತ್ಯೆ ಮಾಡಿದ ಭದ್ರತಾ ಪಡೆ

rwytju11111111111

ರಾಯರ ವಾರದಂದು ನಿಮ್ಮ ರಾಶಿಫಲ ಹೇಗಿದೆ ನೋಡಿ!

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಚಿತ್ರಮಂದಿರಗಳ ಸಮಸ್ಯೆಯಲ್ಲಿ ಬಾಲಿವುಡ್‌

ಚಿತ್ರಮಂದಿರಗಳ ಸಮಸ್ಯೆಯಲ್ಲಿ ಬಾಲಿವುಡ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಗವಂತ ಖೂಬಾ ಹೇಳಿಕೆಗೆ ದಿನೇಶ್‌ ಗುಂಡೂರಾವ್‌ ಆಕ್ರೋಶ

ಭಗವಂತ ಖೂಬಾ ಹೇಳಿಕೆಗೆ ದಿನೇಶ್‌ ಗುಂಡೂರಾವ್‌ ಆಕ್ರೋಶ

ಯಕೃತ್‌ ಕಸಿ ಘಟಕ ಸ್ಥಾಪನೆ ವಿಳಂಬ: ಹೈಕೋರ್ಟ್‌ ತರಾಟೆ

ಯಕೃತ್‌ ಕಸಿ ಘಟಕ ಸ್ಥಾಪನೆ ವಿಳಂಬ: ಹೈಕೋರ್ಟ್‌ ತರಾಟೆ

ಸಂಕಷ್ಟದಲ್ಲಿ ಕನ್ನಡ ಪುಸ್ತಕೋದ್ಯಮ; ಕೋವಿಡ್‌ದಿಂದಾಗಿ ಬಿದ್ದಿದೆ ಪೆಟ್ಟು

ಸಂಕಷ್ಟದಲ್ಲಿ ಕನ್ನಡ ಪುಸ್ತಕೋದ್ಯಮ; ಕೋವಿಡ್‌ದಿಂದಾಗಿ ಬಿದ್ದಿದೆ ಪೆಟ್ಟು

ರಾಜ್ಯೋತ್ಸವ ಪ್ರಶಸ್ತಿಗೆ ಲಾಬಿ ಒಂದೇ ಸಂಸ್ಥೆ  ಪರ ಸಾವಿರ ಶಿಫಾರಸು!

ರಾಜ್ಯೋತ್ಸವ ಪ್ರಶಸ್ತಿಗೆ ಲಾಬಿ ಒಂದೇ ಸಂಸ್ಥೆ  ಪರ ಸಾವಿರ ಶಿಫಾರಸು!

ಸಾರಿಗೆ ನೌಕರರ ಪರ ಅನಿರ್ಧಿಷ್ಟಾವಧಿ ಧರಣಿ

ಸಾರಿಗೆ ನೌಕರರ ಪರ ಅನಿರ್ಧಿಷ್ಟಾವಧಿ ಧರಣಿ

MUST WATCH

udayavani youtube

ಹಿಂದೂಗಳ ನಡುವೆ ನಮಾಜ್ : ಹೇಳಿಕೆಗಾಗಿ ಕ್ಷಮೆಯಾಚಿಸಿದ ವಕಾರ್ ಯೂನಿಸ್

udayavani youtube

ಅಂಗಾಂಗ ದಾನ ಎಂದರೇನು ಏನಿದರ ಮಹತ್ವ ?

udayavani youtube

ಸಾವಯವ ಕೃಷಿಯಲ್ಲಿ ಅನುಸರಿಸಬೇಕಿರುವ ಪ್ರಮುಖ ಅಂಶಗಳ ಬಗ್ಗೆ ನಿಮಗೆ ಗೊತ್ತೇ?

udayavani youtube

ಶಾಲೆಗೆ ಬಂತು ಬಿಸಿಯೂಟ : ದೋಟಿಹಾಳ ಶಾಲಾ ಮಕ್ಕಳ ಒಂದು ಕಿಲೋಮೀಟರ್ ಪಾದಯಾತ್ರೆಗೆ ಬ್ರೇಕ್

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

ಹೊಸ ಸೇರ್ಪಡೆ

ಕೃಷಿ ಕಾಯ್ದೆ ಪ್ರತಿಭಟನೆ ಸ್ಥಳದಲ್ಲಿ ಮಹಿಳೆಯರ ಮೇಲೆ ಹರಿದ ಟ್ರಕ್: ಮೂವರು ಸಾವು!

ಕೃಷಿ ಕಾಯ್ದೆ ಪ್ರತಿಭಟನೆ ಸ್ಥಳದಲ್ಲಿ ಮಹಿಳೆಯರ ಮೇಲೆ ಹರಿದ ಟ್ರಕ್: ಮೂವರು ಸಾವು!

3kannada

ಕನ್ನಡ ಬೆಳವಣಿಗೆ ಮಾಧ್ಯಮದಲ್ಲಿ ಅಡಕ

ನಾಲ್ವರು ವಕೀಲರು ಸೇರಿ ಐವರ ಸೆರೆ

ನಾಲ್ವರು ವಕೀಲರು ಸೇರಿ ಐವರ ಸೆರೆ

2wine

ಮದ್ಯ ಅಂಗಡಿ ತೆರವಿಗೆ ಒತ್ತಾಯ

alcohol

10 ರೂ. ಗೆ ನಡೆಯಿತು ಕೊಲೆ! ಸಾರಾಯಿ ಕುಡಿಯಲು ಹಣ ಕೊಡದ ಸ್ನೇಹಿತನನ್ನೇ ಕೊಂದರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.