ಅಧಿಕಾರಿಗಳ ಅವೈಜ್ಞಾನಿಕ ನಡೆ


Team Udayavani, Sep 15, 2021, 6:10 AM IST

ಅಧಿಕಾರಿಗಳ ಅವೈಜ್ಞಾನಿಕ ನಡೆ

ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿನ ದೇಗುಲ ನೆಲಸಮದ ಅನಂತರ ರಾಜ್ಯಾದ್ಯಂತ ಅನಧಿಕೃತ ಧಾರ್ಮಿಕ ಕಟ್ಟಡಗಳ ಕಾರ್ಯಾಚರಣೆ ವಿವಾದ ಭುಗಿಲೆದ್ದಿದೆ. ಸದ್ಯ ಇದು  ರಾಜಕೀಯಕ್ಕೂ ಕಾರಣವಾಗಿದ್ದು, ಆಡಳಿತ ಮತ್ತು ವಿಪಕ್ಷಗಳ ನಡುವಿನ ಗುದ್ದಾಟಕ್ಕೂ ಕಾರಣವಾಗಿದೆ. ಹಾಗಾದರೆ ಈ ದೇಗುಲ ನೆಲಸಮ ವಿವಾದವೆಂದರೆ ಏನು?  ಎತ್ತ? ಎಂಬುದರ ಒಂದು ನೋಟ ಇಲ್ಲಿದೆ.

ಸುಪ್ರೀಂ ತೀರ್ಪು ಏನು?:

2006ರಲ್ಲಿ ಎಸ್‌ಎಲ್‌ಪಿ ಪ್ರಕರಣ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, 2009ರ ಸೆ.30ರಂದು ಧಾರ್ಮಿಕ ಕಟ್ಟಡಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಬಾರದು. ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಧಾರ್ಮಿಕ ಕಟ್ಟಡಗಳು ನಿರ್ಮಾಣವಾಗಿದ್ದರೆ ಪ್ರತಿಯೊಂದು ಪ್ರಕರಣವನ್ನು ಪ್ರತ್ಯೇಕವಾಗಿ ಅಧ್ಯಯನ ನಡೆಸಿ, ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿತ್ತು.

ಅಧಿಕಾರಿಗಳ ಎಡವಟ್ಟು:

ಈ ತೀರ್ಪಿನ ಬಳಿಕ ಅಂದಿನ ರಾಜ್ಯ ಸರಕಾರ‌ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಾಣವಾಗಿರುವ ಧಾರ್ಮಿಕ ಕಟ್ಟಡಗಳನ್ನು ಪಟ್ಟಿ ಮಾಡಿ, ಬಳಿಕ ತೆರವು ಮಾಡುವಂತೆ ಆದೇಶಿಸಿತ್ತು. ಇದೇ ಅವಧಿಯಲ್ಲಿದ್ದ ಅಧಿಕಾರಿಗಳು ರಸ್ತೆ ಬದಿ, ಸಾರ್ವಜನಿಕ ಸ್ಥಳ, ಉದ್ಯಾನ, ಕೆರೆ ಬಳಿ ನಿರ್ಮಾಣವಾಗಿರುವ ಧಾರ್ಮಿಕ ಕಟ್ಟಡಗಳ ಪಟ್ಟಿಯನ್ನು ತಯಾರಿಸಿ ರಾಜ್ಯ ಸರಕಾರ‌ಕ್ಕೆ ಸಲ್ಲಿಸಿದ್ದರು. ಇದಾದ ಅನಂತರ 2011ರಲ್ಲಿ ಡಿಸಿಯಾಗಿದ್ದ ಹರ್ಷಗುಪ್ತಾ ಸರಕಾರ‌ದ ಆದೇಶದಂತೆ ಸಾರ್ವಜನಿಕ ಸ್ಥಳಗಳಲ್ಲಿದ್ದ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡಲು ಮುಂದಾದಾಗ ವಿರೋಧ ವ್ಯಕ್ತವಾಗಿತ್ತು. ಅನಂತರ ಕಟ್ಟಡಗಳ ತೆರವು ಕಾರ್ಯಚರಣೆ ಸ್ಥಗಿತವಾಗಿತ್ತು.

ಈಗ ಏಕೆ ವಿವಾದ? :

ಇತ್ತೀಚೆಗೆ ಸಾರ್ವಜನಿಕ ಸ್ಥಳದಲ್ಲಿದ್ದ ದೇಗುಲ ತೆರವು ಮಾಡುವ ವಿಚಾರವಾಗಿ ವ್ಯಕ್ತಿಯೊಬ್ಬರು ಸುಪ್ರೀಂ  ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರಿಂದ ತನ್ನ 2009ರ ಆದೇಶದ ಅನುಷ್ಠಾನದ ಬಗ್ಗೆ ಹೈಕೋರ್ಟ್‌ಗಳಿಗೆ ವರದಿ ಕೇಳಿತ್ತು. ಈ ಹಿನ್ನೆಲೆ ಮೈಸೂರಿನಲ್ಲಿ ಮತ್ತೆ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭವಾಗಿದೆ.

ಮರು ಪರಿಶೀಲನೆಗೆ ಆಗ್ರಹ:

ಮೈಸೂರು ಜಿಲ್ಲಾಡಳಿತ 2009ರ ಸುಪ್ರೀಂ ಕೋರ್ಟ್‌ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡಿದೆ ಎಂಬ ವಾದವಿದೆ. ನಗರ ಸೇರಿದಂತೆ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಿಂದ 12 ಧಾರ್ಮಿಕ ಕಟ್ಟಡಗಳನ್ನು ಜೆಸಿಬಿಯಿಂದ ನೆಲಸಮಗೊಳಿಸಿದೆ. ಅಲ್ಲದೇ ಸೆ.8ರಂದು ನಂಜನಗೂಡು ತಾಲೂಕು ಆಡಳಿತ ಸ್ಥಳೀಯ ಶಾಸಕರ ಗಮನಕ್ಕಷ್ಟೇ ತಂದು ಉಚ್ಚಗಣಿ ಗ್ರಾಮದ ಆದಿಶಕ್ತಿ ಮಹಾದೇವಮ್ಮ ದೇಗುಲವನ್ನು ಅವೈಜ್ಞಾನಿಕವಾಗಿ ನೆಲಸಮಗೊಳಿಸಿತು.ಇದರಿಂದ ಉದ್ರಿಕ್ತರಾದ ಸ್ಥಳೀಯರು ಮತ್ತು ಜನಪ್ರತಿನಿಧಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಈ ಹಿಂದೆ ಸಿದ್ಧಪಡಿಸಿರುವ 93 ಧಾರ್ಮಿಕ ಕಟ್ಟಡಗಳ ಪಟ್ಟಿಯನ್ನು ಮರುಪರಿಶೀಲನೆಗೆ ಒಳಪಡಿಸುವಂತೆ ಆಗ್ರಹಿಸಿದ್ದಾರೆ.

ಒಟ್ಟು 157 ದೇಗುಲಗಳ ಪಟ್ಟಿ:

2009ರ ಸೆ.30ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಆದೇಶದಂತೆ ರಾಜ್ಯ ಸರಕಾರ‌ದ ಸೂಚನೆ ಮೇರೆಗೆ ಜಿಲ್ಲೆಯ 315 ದೇವಾಲಯಗಳನ್ನು ತೆರವುಗೊಳಿಸಲು ಪಟ್ಟಿಯನ್ನು ತಯಾರಿಸಲಾಗಿತ್ತು. ಈ ಸಂಬಂಧ 2012ರ ಹೊತ್ತಿಗೆ ಅಂದಿನ ಜಿಲ್ಲಾಡಳಿತ 158 ದೇವಾಲಯಗಳ ಪ್ರಕರಣವನ್ನು ಇತ್ಯರ್ಥಗೊಳಿಸಿ, 157 ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡಲು ಬಾಕಿ ಉಳಿಸಿತ್ತು.

ಅನಂತರ ಉಳಿದ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡಲು ಮುಂದಾಗಿದ್ದ ಜಿಲ್ಲಾಡಳಿತ ಈಗಿರುವ 157 ಧಾರ್ಮಿಕ ಕಟ್ಟಡಗಳ ಪಟ್ಟಿಯಲ್ಲಿ 9 ಕಟ್ಟಡಗಳನ್ನು ಹಾಗೆಯೇ ಉಳಿಸಿಕೊಳ್ಳಲು ತೀರ್ಮಾನಿಸಿದ್ದರೆ, 27 ದೇಗುಲಗಳನ್ನು ಉಳಿಸಿಕೊಳ್ಳಲು ಹೆಚ್ಚುವರಿ ದಾಖಲಾತಿ ಯನ್ನು ದೇಗುಲ ಸಮಿತಿಗಳಿಂದ ಕೇಳಿತ್ತು.

ಇದರಿಂದ 121 ಕಟ್ಟಡಗಳು ಸದ್ಯಕ್ಕೆ ತೆರವಿಗೆ ಗುರಿಯಾಗಿದ್ದವು. ಆದರೆ ಇದರಲ್ಲಿ 9 ಕಟ್ಟಡಗಳು ನ್ಯಾಯಾ ಲಯದಲ್ಲಿದ್ದರೆ, 3 ಕಟ್ಟಡಗಳ ಹೆಸರು ಪುನರಾವರ್ತನೆ ಯಾಗಿರುವುದರಿಂದ ಪಟ್ಟಿಯಲ್ಲಿ 109 ಕಟ್ಟಡಗಳು ಮಾತ್ರ ಉಳಿದುಕೊಂಡಿದ್ದವು. ಇತ್ತೀಚೆಗೆ ಜಿಲ್ಲಾಡಳಿತ ಉಚ್ಚಗಣಿ ಗ್ರಾಮದ ಆದಿಶಕ್ತಿ ಮಹಾದೇವಮ್ಮ ದೇಗುಲ ಸೇರಿದಂತೆ 12 ದೇಗುಲಗಳನ್ನು ತೆರವು ಮಾಡಿರುವುದರಿಂದ ಸದ್ಯಕ್ಕೆ ಧಾರ್ಮಿಕ ಕಟ್ಟಡಗಳ ತೆರವು ಪಟ್ಟಿಯಲ್ಲಿ 97 ಕಟ್ಟಡಗಳು ತೆರವಿಗೆ ಬಾಕಿ ಉಳಿದಿವೆ. ಇದರಲ್ಲಿ 93 ಹಿಂದೂ ದೇವಾಲ ಯಗಳಿದ್ದರೆ, 5 ಗೋರಿಗಳು, 1 ಚರ್ಚ್‌ ಕೂಡ ಇದೆ.

ಸತೀಶ್‌ ದೇಪುರ

ಟಾಪ್ ನ್ಯೂಸ್

1-nn

ಯುಪಿಯ ಪೂರ್ವಾಂಚಲಕ್ಕೆ ಭರ್ಜರಿ ದೀಪಾವಳಿ ಗಿಫ್ಟ್ ನೀಡಿದ ಪ್ರಧಾನಿ ಮೋದಿ

ಜಮೀರ್ ತಮ್ಮ ಹಿಂದಿನ ನೆನಪನ್ನು ಮೆಲುಕು ಹಾಕಿದ್ದಾರೆ : ಸವದಿ

ಜಮೀರ್ ತಮ್ಮ ಹಿಂದಿನ ನೆನಪನ್ನು ಮೆಲುಕು ಹಾಕಿದ್ದಾರೆ : ಸವದಿ

ಬಸವರಾಜ ಬೊಮ್ಮಾಯಿ

ನಮಗೆ ಜೆಡಿಎಸ್ ಮುಗಿಸುವ ಅಗತ್ಯವಿಲ್ಲ, ದೇವೇಗೌಡರ ಹೇಳಿಕೆ ಸರಿಯಲ್ಲ: ಸಿಎಂ ಬೊಮ್ಮಾಯಿ

ಸಿಲೆಬಸ್ ಕಡಿತದ ಯೋಚನೆಯಿಲ್ಲ, ರಜೆದಿನ ಬಳಸಿ ಪಾಠ ಮಾಡುತ್ತೇವೆ: ಸಚಿವ ಬಿ.ಸಿ.ನಾಗೇಶ್

ಸಿಲೆಬಸ್ ಕಡಿತದ ಯೋಚನೆಯಿಲ್ಲ, ರಜೆದಿನ ಬಳಸಿ ಪಾಠ ಮಾಡುತ್ತೇವೆ: ಸಚಿವ ಬಿ.ಸಿ.ನಾಗೇಶ್

51

ಪಾಕ್ ವಿರುದ್ಧ ಸೋಲಿನ ನಡುವೆಯೂ ಕ್ರೀಡಾ ಸ್ಫೂರ್ತಿ ಮೆರೆದ ಕೊಹ್ಲಿ, ಧೋನಿ

ತೆಲಂಗಾಣ ಗಡಿಯಲ್ಲಿ ಎನ್ ಕೌಂಟರ್: ಮೂವರು ನಕ್ಸಲರ್ ಹತ್ಯೆಗೈದ ಪೊಲೀಸರು

ತೆಲಂಗಾಣ ಗಡಿಯಲ್ಲಿ ಎನ್ ಕೌಂಟರ್: ಮೂವರು ನಕ್ಸಲರನ್ನು ಹತ್ಯೆಗೈದ ಪೊಲೀಸರು

ಬೆಳ್ಳಂಬೆಳ್ಳಗ್ಗೆ ದುರಂತ: ಬೈಕ್ ಗೆ ಟಿಪ್ಪರ್ ಢಿಕ್ಕಿಯಾಗಿ ತಾಯಿ – ಮಗು ಸಾವು

ಬೆಳ್ಳಂಬೆಳ್ಳಗ್ಗೆ ದುರಂತ: ಬೈಕ್ ಗೆ ಟಿಪ್ಪರ್ ಢಿಕ್ಕಿಯಾಗಿ ತಾಯಿ – ಮಗು ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಮೀರ್ ತಮ್ಮ ಹಿಂದಿನ ನೆನಪನ್ನು ಮೆಲುಕು ಹಾಕಿದ್ದಾರೆ : ಸವದಿ

ಜಮೀರ್ ತಮ್ಮ ಹಿಂದಿನ ನೆನಪನ್ನು ಮೆಲುಕು ಹಾಕಿದ್ದಾರೆ : ಸವದಿ

siddaramaiah vs h d kumaraswamy

ಕರ್ನಾಟಕದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೆ ಸಿದ್ದರಾಮಯ್ಯ: ಕುಮಾರಸ್ವಾಮಿ ಆರೋಪ

hgfjhgfds

ಪುಟಾಣಿಗಳು ಶಾಲೆಯತ್ತ : ಇಂದಿನಿಂದ 1ರಿಂದ 5ನೇ ತರಗತಿ ಆರಂಭ

1-5ನೇ ತರಗತಿ ಇಂದು ಆರಂಭ

1-5ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು ಇಂದು ಆರಂಭ

ಹಾನಗಲ್‌ನಲ್ಲಿ ಮತ್ತೆ 3 ದಿನ ಸಿಎಂ ಮೊಕ್ಕಾಂ

ಹಾನಗಲ್‌ನಲ್ಲಿ ಮತ್ತೆ 3 ದಿನ ಸಿಎಂ ಮೊಕ್ಕಾಂ

MUST WATCH

udayavani youtube

ಕಾಪು ಮತ್ತು ಕರಂದಾಡಿ ಶಾಲೆಯಲ್ಲಿ ಅದ್ದೂರಿಯ ಶಾಲಾ ಪ್ರಾರಂಭೋತ್ಸವ

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

ಹೊಸ ಸೇರ್ಪಡೆ

tech show

ಹೂಡಿಕೆ ಉತ್ತೇಜಿಸಲು ದಿ ಬಿಗ್‌ ಟೆಕ್‌ ಷೋ ಮೈಸೂರು

ಭಟ್ಕಳ: ವಾಟ್ಸ್ಯಾಪ್ ಗ್ರೂಪ್‌ ನಲ್ಲಿ ಸಂದೇಶ ಹಾಕಿದ್ದಕ್ಕೆ ಹಲ್ಲೆ ಆರೋಪಿಸಿ ದೂರು ದಾಖಲು

ಭಟ್ಕಳ: ವಾಟ್ಸ್ಯಾಪ್ ಗ್ರೂಪ್‌ ನಲ್ಲಿ ಸಂದೇಶ ಹಾಕಿದ್ದಕ್ಕೆ ಹಲ್ಲೆ ಆರೋಪಿಸಿ ದೂರು ದಾಖಲು

1-nn

ಯುಪಿಯ ಪೂರ್ವಾಂಚಲಕ್ಕೆ ಭರ್ಜರಿ ದೀಪಾವಳಿ ಗಿಫ್ಟ್ ನೀಡಿದ ಪ್ರಧಾನಿ ಮೋದಿ

ಜಮೀರ್ ತಮ್ಮ ಹಿಂದಿನ ನೆನಪನ್ನು ಮೆಲುಕು ಹಾಕಿದ್ದಾರೆ : ಸವದಿ

ಜಮೀರ್ ತಮ್ಮ ಹಿಂದಿನ ನೆನಪನ್ನು ಮೆಲುಕು ಹಾಕಿದ್ದಾರೆ : ಸವದಿ

Untitled-3

ದೌರ್ಜನ್ಯ ತಡೆಗೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.