ಪಿಯುಗೆ ಅರ್ಜಿ ಸಲ್ಲಿಸಲು ಜುಲೈ 1ರವರೆಗೂ ಅವಕಾಶ
Team Udayavani, Jun 22, 2019, 3:00 AM IST
ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಪದವಿ ಪೂರ್ವ ತರಗತಿಗೆ ಸೇರಿಕೊಳ್ಳಲು ನೀಡಿದ್ದ ಕೊನೆಯ ದಿನಾಂಕವನ್ನು ಜುಲೈ 1ರವರೆಗೂ ವಿಸ್ತರಿಸಲಾಗಿದೆ. 2019-20ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ವರ್ಷದ ತರಗತಿಗಳಿಗೆ ಯಾವುದೇ ದಂಡ ಶುಲ್ಕ ಇಲ್ಲದೆ ಜುಲೈ 1ರವರೆಗೂ ಅರ್ಜಿ ಸಲ್ಲಿಸಬಹುದಾಗಿದೆ. ವಿಳಂಬ ಶುಲ್ಕ 670ರೂ. ಪಾವತಿಸಿ ಜುಲೈ 8ರೊಳಗೆ ಸೇರಿಕೊಳ್ಳಬಹುದು.
ವಿಶೇಷ ದಂಡ ಶುಲ್ಕ 2,890 ರೂ. ಪಾವತಿಸಿ ಜುಲೈ 15ರೊಳಗೆ ಸೇರಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ. ವಿದ್ಯಾರ್ಥಿಗಳು ದಾಖಲಾತಿ ಶುಲ್ಕ ಪಾವತಿಸಿದ ತಕ್ಷಣವೇ ಅದನ್ನು ಖಜಾನೆಗೆ ಪಾವತಿಸುವುದು ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯ ಜವಾಬ್ದಾರಿಯಾಗಿರುತ್ತದೆ ಎಂದು ಎಚ್ಚರಿಕೆ ನೀಡಿದೆ.