ಉಪೇಂದ್ರ ಸೋತರೆ ಮತ್ತೆ ಚಿತ್ರರಂಗಕ್ಕೆ ಹೋಗ್ತಾರೆ…


Team Udayavani, Aug 16, 2017, 10:45 AM IST

16-PTI-15.jpg

ಉಪೇಂದ್ರ ಸಮಾಜ ಶುದ್ಧಿ ಮಾಡಲು “ಓಂ’ಕಾರ ಹಾಡಿದ್ದಾರೆ. ಈ ತೀರ್ಮಾನದ ಬೇರುಗಳನ್ನು ಹುಡುಕುತ್ತಾ ಹೋದರೆ ಈ ಅಹೋರಾತ್ರ
ಎದುರಾಗುತ್ತಾರೆ. ಇವರ ಮೂಲ ಹೆಸರು ನಟೇಶ್‌ ಪೋಲೇಪಲ್ಲಿ. ಬರಹಗಾರರು, ವಾಸ್ತು ತಜ್ಞರು, ಅಧ್ಯಾತ್ಮಿಕ ಚಿಂತಕರು. ಉಪೇಂದ್ರರ
ಥಿಂಕ್‌ಟ್ಯಾಂಕರ್‌ ಕೂಡ. ಉಪ್ಪಿ ರಾಜಕೀಯ ರಂಗಕ್ಕೆ ಹೆಜ್ಜೆ ಊರಲು ಇವರ ಪಾಲೂ ಇದೆ. ಪರದೆ ಹಿಂದಿನ ಅನೇಕ “ಬುದ್ಧಿವಂತನ’ ಸತ್ಯಗಳನ್ನು
“ಉದಯವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.  

ಉಪೇಂದ್ರ ಅವರು ರಾಜಕೀಯಕ್ಕೆ ಬರುವ ನಿರ್ಧಾರ ಸರೀನಾ? 
ಖಂಡಿತ ಸರಿ. ಇದರಲ್ಲಿ ತಪ್ಪೇನಿದೆ ಹೇಳಿ? ಕೆಟ್ಟಿರೋ ವ್ಯವಸ್ಥೆಗೆ ಚಿಕಿತ್ಸೆ ಕೊಡೋಕೆ ಬಂದಿದ್ದಾರೆ. 29 ವರ್ಷದ ಸ್ನೇಹದ ಆಧಾರದಲ್ಲಿ ಹೇಳುವುದಾದರೆ ಉಪ್ಪಿ ತಪ್ಪು ನಿರ್ಧಾರ ತಗೊಳ್ಳಲೇ ಇಲ್ಲ. ಸ್ನೇಹಿತರು, ಹಿತೈಷಿಗಳ ಕೇಳದೆ ತೀರ್ಮಾನ ತಗೊಂಡಿದ್ದಿಲ್ಲ. ನಿಮಗೆ ಗೊತ್ತಾ? ಹೀ ಈಸ್‌ ಗುಡ್‌ ಡಿಸಿಷನ್‌ ಮೇಕರ್‌, ಹೀ ಈಸ್‌ ಬೆಸ್ಟ್‌ ಸಜೆಶನ್‌ ಕಲೆಕ್ಟರ್‌, ಹೀ ಈಸ್‌ ದ ಅಲ್ಟಿಮೇಟ್‌ ಲಿಸನರ್‌. ಗಂಟೆಗಟ್ಟಲೆ ನೀವು ಹೇಳ್ಳೋದನ್ನು ಕೇಳ್ತಾರೆ. ಈ ಗುಣ ನರೇಂದ್ರ ಮೋದಿಯಲ್ಲೂ ಇದೆ. ಕೇಳ್ಳೋ ತಾಳ್ಮೆ ಇರೋರಿಗೆ ಮಾಡೋದು ಬಹಳ ಸುಲಭ.

ಪ್ರಶ್ನೆ ಇರೋದು ರಾಜಕೀಯ ಅವ್ಯವಸ್ಥೆ ಬಗ್ಗೆ?
ಉಪೇಂದ್ರರ ಬಗ್ಗೆ ಅಲ್ಲ.  ವ್ಯವಸ್ಥೆ ಸರಿ ಇದ್ದಿದ್ದರೆ ಉಪ್ಪಿ ಪಾಲಿಟಿಕ್ಸ್‌ಗೆ ಬರ್ತಾನೇ ಇರಲಿಲ್ಲ. ಏನಾದರೂ ಸಮಸ್ಯೆ ಅಂದರೆ ಅದು ಮನುಷ್ಯನ  ಕೈವಾಡವಾ, ನೇಚರ್‌ ಕೈವಾಡವ ನೋಡ್ತಾರೆ. ಅದನ್ನೂ ಮೀರಿದ್ದು ಏನಾದರೂ ಆಗಿದ್ದರೆ ಸರಿಪಡಿಸೋಕೆ ಚಡಪಡಿಸುತ್ತಾರೆ. ಈಗ ಮಾಡುತ್ತಿರುವುದೂ ಅದನ್ನೇ. ನಮ್ಮ ಜನ, ನಾಯಕರೂ ಇಬ್ಬರೂ ಭ್ರಷ್ಟವ್ಯವಸ್ಥೆಯಲ್ಲಿ ಸಿಲುಕಿದ್ದಾರೆ. ಅದರಿಂದ ಹೊರ ತರುವುದಕ್ಕೆ ಉಪ್ಪಿ ರಾಜಕೀಯಕ್ಕೆ ಧುಮುಕಿದ್ದಾರೆ.

ಈ ರಾಜಕೀಯ ನಿರ್ಧಾರ ನಿನ್ನೆ, ಮೊನ್ನೆಯದಾ?
ಇಲ್ಲ, ಇಲ್ಲ. ಅವರಿಗೆ ಅದು ಇನ್‌ಬಿಲ್ಟ್ ನೇಚರ್‌. ಸ್ಪಂದಿಸುವ ಗುಣ ಮೊದಲಿಂದಲೂ ಇದೆ. ದೇಶದ ಬಗ್ಗೆ ಚಿಂತನೆ ಮಾಡೋದು, ಸಮಾಜದ ಸಮಸ್ಯೆಗಳನ್ನು ಬಿಡಿಸೋಕೆ ಹೊಸದೇನಾದರೂ ಮಾಡಬೇಕು ಅನ್ನೋ ಪ್ರಾಮಾಣಿಕ ತುಡಿತ ಎಷ್ಟೋ ವರ್ಷಗಳಿಂದ ನೋಡ್ತಾನೇ ಇದ್ದೀನಿ.

ಉಪೇಂದ್ರ ಬೇರೆ ಪಕ್ಷ, ಅದರ ನಾಯಕರನ್ನು ಹೇಗೆ ನೋಡ್ತಾರೆ?
ಯಾವುದೇ ಪಕ್ಷವನ್ನಾಗಲೀ, ಯಾವುದೇ ವ್ಯಕ್ತಿಯನ್ನಾಗಲಿ ಬೈಯ್ಯೋದನ್ನು ನಾನು ನೋಡಿಯೇ ಇಲ್ಲ. ಅವರಿಗೆ ಮನಮೋಹನ್‌ ಸಿಂಗ್‌, ಮೋದಿ, ದೇವೇಗೌಡರು ಹೀಗೆ ಎಲ್ಲರ ಬಗ್ಗೆನೂ ಸಮಾನ ಗೌರವವಿದೆ. ಸಾರ್‌, ಸಿಬಿಐ ರೈಡ್‌ ಆಗ್ತಿದೆ ಅಂದರೆ. ಅದು ಸಮಸ್ಯೆನೇ ಅಲ್ಲ. ವ್ಯವಸ್ಥೆಯಲ್ಲಿ
ಲೋಪ ಇದೆ. ಅದನ್ನು ಮೊದಲು ಸರಿಪಡಿಸಬೇಕು. ಕಳ್ಳ ಮನೆಯಲ್ಲಿದ್ದರೂ, ಕಳ್ಳತನ ಆಗಬಾರದು ಮನೆಯ ಸಿಸ್ಟಮ್‌ ಆ ರೀತಿ ಇರಬೇಕು ಅಂತಾರೆ.

ರಾಜಕೀಯ ಅನ್ನೋದು ಕೆಸರಾಗಿದೆ. ಅದರಲ್ಲಿ ಇಳಿದರೆ ನಿಮ್ಮ ಸ್ನೇಹಿತರಿಗೂ ಅದು ಮೆತ್ತಿಕೊಳ್ಳಲ್ವೇ?
ಆಗೊಲ್ಲ. ಸಿನಿಮಾದಲ್ಲಿ ದುಡೀತಾರೆ, ಸಂಬಳ ತಗೋತಾರೆ. ಪಾಲಿಟಿಕ್ಸ್‌ನಲ್ಲೂ ದುಡೀತಾರೆ, ಸಂಬಳ ತಗೋತಾರೆ ಅಷ್ಟೇ. ಉಪ್ಪಿಗೂ ಕಡುಬಡತನ ಇತ್ತು. ಚಿಕ್ಕ ಮನೆ. ಇಂಥ ಸಂದರ್ಭದಲ್ಲಿ ಅವರು ಕರಪ್ಟ್ ಆಗಬಹುದಿತ್ತು ಅಲ್ವಾ? ಆಗಲಿಲ್ಲ. ಎಪಿಎಸ್‌ ಕಾಲೇಜಲ್ಲಿ ಯಮಧರ್ಮರಾಯಣ ಅನ್ನೋ ನಾಟಕಮಾಡುತ್ತಿದ್ದರು. ಆಗ ಒಂದಷ್ಟು ಹಣ ಸಿಗುತ್ತಿತ್ತು. ಅದರಲ್ಲಿ ಖರ್ಚುಗಳನ್ನೆಲ್ಲ ತೆಗೆದು ಬರಿಗೈಯಲ್ಲಿ ಮನೆಗೆ ಹೋಗುತ್ತಿದ್ದರು. ಅಂದಿನ ಆ ಅಕೌಂಟೆಬಲಿಟಿ ಇಂದಿಗೂ ಕಾಪಾಡಿಕೊಂಡಿದ್ದಾರೆ. ಅಂದರೆ, ಹಸಿವು, ಬಡತನ ಇದ್ದಾಗ ಹುಟ್ಟುವ ಆಸೆ ಇದೆಯಲ್ಲ, ಅದಕ್ಕೆ ಯಾರನ್ನ ಬೇಕಾದರೂ ಕರಪ್ಟ್ ಮಾಡುವ ಶಕ್ತಿ ಇರುತ್ತದೆ. ಉಪ್ಪಿಗೆ ಇವ್ಯಾವುದೂ ನಾಟಲಿಲ್ಲ. ಇನ್ನು ಕೆಸರು ಮೆತ್ತಿಕೊಳ್ಳೋದು ಹೇಗೆ ಹೇಳಿ?

ಉಪ್ಪಿ ಚಿತ್ರರಂಗಕ್ಕೆ ಬಂದಿದ್ದು ರಾಜಕೀಯ ಸೇರಕ್ಕಾ?
ಹಾಗಂತಲ್ಲ, ಅವರು ಚಿತ್ರರಂಗದಲ್ಲಿ ತೃಪ್ತಿ ಪಡೋಕೆ ಶುರು ಮಾಡಿದರು. ತೃಪ್ತಿ ಅಂದರೇನು? ಸಿನಿಮಾ ಮೂಲಕ ಸಮಾಜದ ಅಂಕುಡೊಂಕುಗಳ ಕರೆಕ್ಷನ್‌ ಹಾಕ್ತಾ ಹೋದರು.  ಜನರನ್ನು ಸರಿ ಮಾಡೋದು ಹೇಗೆ? ಚಿತ್ರದ ಮೂಲಕ ಜನಕ್ಕೆ ಮೆಸೇಜ್‌ಗಳನ್ನು ಕೊಡಬಹುದಾ? ಅನ್ನೋ ಪ್ರಯೋಗ ಶುರು ಮಾಡಿದರು.

ಈಗ ಹೇಳಿ ಉಪ್ಪಿ ಸೋತರೆ ಮುಂದೇನು?
ಉಪ್ಪಿಗೂ ನನಗೂ ಸೋಲೂ ಗೆಲುವೆ. ಸೋತಾಗ ಹತಾಶರಾ ಗೋದು, ಗೆದ್ದಾಗ ಅಹಂಕಾರ ಪಡೋದು ಇಲ್ಲವೇ ಇಲ್ಲ. ಉಪ್ಪಿ ಗೆಲುವಿನಂತೆ ಸೋಲನ್ನು ಬಹಳ ಎಂಜಾಯ್‌ ಮಾಡ್ತಾರೆ. ರಾಜ ಕಾರಣದಲ್ಲಿ ಸೋತರೆ ಚಿತ್ರರಂಗ ಇದೆಯಲ್ಲಾ? ಉಪ್ಪಿ ಒಬ್ಬರೇ ಗೆದ್ದರೆ ಅವರ ಏರಿಯಾವನ್ನು ಜನ ತಿರುಗಿ ನೋಡುವ ಹಾಗೇ ಮಾಡ್ತಾರೆ. 10 ಜನ ಗೆದ್ದರು ಅಂತಿಟ್ಟುಕೊಳ್ಳಿ ದೇಶವೇ ಇವರ ಕಡೆ ತಿರುಗುವ ಹಾಗೇ ಮಾಡ್ತಾರೆ. 200 ಸೀಟು ಬಂದರೆ ಇಡೀ ಜಗತ್ತೇ ಇವರ ಕಡೆ ನೋಡುವ ಹಾಗೇ ಮಾಡ್ತಾರೆ.

ಸಂದರ್ಶನ: ಕಟ್ಟೆ ಗುರುರಾಜ್‌

ಟಾಪ್ ನ್ಯೂಸ್

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 145 ಅಂಕ ಜಿಗಿತ, 18 ಸಾವಿರದ ಗಡಿ ದಾಟಿದ ನಿಫ್ಟಿ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 145 ಅಂಕ ಜಿಗಿತ, 18 ಸಾವಿರದ ಗಡಿ ದಾಟಿದ ನಿಫ್ಟಿ

randeep surjewala

ಬಿಜೆಪಿಯವರು ಕಪಟ, ಹಣ, ತೋಳ್ಬಲದಿಂದ ಗೆಲ್ಲಲು ಹೊರಟಿದ್ದಾರೆ: ಸುರ್ಜೇವಾಲಾ

IT companies

ದಿಗ್ಗಜ ಐಟಿ ಕಂಪನಿಗಳ “ವರ್ಕ್‌ ಫ್ರಮ್‌ ಹೋಮ್”‌ ಅಂತ್ಯ?

ಸಕಲೇಶಪುರ: ಪಾಕಿಸ್ತಾನದ ವಿರುದ್ಧ ಸೋತ ಭಾರತ; ಅಭಿಮಾನಿಯಿಂದ ಟಿವಿ ಒಡೆದು ಹಾಕಿ ಆಕ್ರೋಶ

ಸಕಲೇಶಪುರ: ಪಾಕಿಸ್ತಾನದ ವಿರುದ್ಧ ಸೋತ ಭಾರತ; ಅಭಿಮಾನಿಯಿಂದ ಟಿವಿ ಒಡೆದು ಹಾಕಿ ಆಕ್ರೋಶ

1-bbm

ಹಾನಗಲ್ ಜನರ ಪುರುಷಾರ್ಥಕ್ಕೆ ಪ್ರಣಾಳಿಕೆ ಮಾಡಿದ್ದೇವೆ : ಸಿಎಂ ತಿರುಗೇಟು

ಹೊಸ ಐಪಿಎಲ್ ತಂಡಕ್ಕಾಗಿ ಪೈಪೋಟಿ: ಅಂತಿಮ ಬಿಡ್ ನಲ್ಲಿ 10 ಕಂಪನಿಗಳು

ಹೊಸ ಐಪಿಎಲ್ ತಂಡಕ್ಕಾಗಿ ಪೈಪೋಟಿ: ಅಂತಿಮ ಬಿಡ್ ನಲ್ಲಿ 10 ಕಂಪನಿಗಳು

ನವರಾತ್ರಿ ಸಂಭ್ರಮ ಕಳೆದ ಬೆನ್ನಲ್ಲೇ ಪಶ್ಚಿಮಬಂಗಾಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ

ನವರಾತ್ರಿ ಸಂಭ್ರಮ ಕಳೆದ ಬೆನ್ನಲ್ಲೇ ಪಶ್ಚಿಮಬಂಗಾಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

randeep surjewala

ಬಿಜೆಪಿಯವರು ಕಪಟ, ಹಣ, ತೋಳ್ಬಲದಿಂದ ಗೆಲ್ಲಲು ಹೊರಟಿದ್ದಾರೆ: ಸುರ್ಜೇವಾಲಾ

1-bbm

ಹಾನಗಲ್ ಜನರ ಪುರುಷಾರ್ಥಕ್ಕೆ ಪ್ರಣಾಳಿಕೆ ಮಾಡಿದ್ದೇವೆ : ಸಿಎಂ ತಿರುಗೇಟು

1-rrr

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

ಜಮೀರ್ ತಮ್ಮ ಹಿಂದಿನ ನೆನಪನ್ನು ಮೆಲುಕು ಹಾಕಿದ್ದಾರೆ : ಸವದಿ

ಜಮೀರ್ ತಮ್ಮ ಹಿಂದಿನ ನೆನಪನ್ನು ಮೆಲುಕು ಹಾಕಿದ್ದಾರೆ : ಸವದಿ

siddaramaiah vs h d kumaraswamy

ಕರ್ನಾಟಕದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೆ ಸಿದ್ದರಾಮಯ್ಯ: ಕುಮಾರಸ್ವಾಮಿ ಆರೋಪ

MUST WATCH

udayavani youtube

ಭೂಕುಸಿತ ಪತ್ತೆಗೆ ಹೊಸ ಸ್ವದೇಶಿ ತಂತ್ರಜ್ಞಾನ ಸಿದ್

udayavani youtube

ನೂಜಿಬಾಳ್ತಿಲ ಶಾಲೆಯಲ್ಲಿ ಅಡುಗೆ ಮಾಡುವ ವೇಳೆ ಗ್ಯಾಸ್ ಸೋರಿಕೆ; ತಪ್ಪಿದ ಭಾರೀ ದುರಂತ

udayavani youtube

ಪ್ರಾಥಮಿಕ ಶಾಲೆಗೆ ವಿದ್ಯಾರ್ಥಿಗಳು ಬಂದರೂ ಶಿಕ್ಷಕರು ಬರಲೇ ಇಲ್ಲ : ಪೋಷಕರಿಂದ ಪ್ರತಿಭಟನೆ

udayavani youtube

ಶಾಲಾ ಪ್ರಾರಂಭೋತ್ಸವ : ಕಾಜಾರಗುತ್ತು ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಕಲರವ

udayavani youtube

ಕಾಪು ಮತ್ತು ಕರಂದಾಡಿ ಶಾಲೆಯಲ್ಲಿ ಅದ್ದೂರಿಯ ಶಾಲಾ ಪ್ರಾರಂಭೋತ್ಸವ

ಹೊಸ ಸೇರ್ಪಡೆ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 145 ಅಂಕ ಜಿಗಿತ, 18 ಸಾವಿರದ ಗಡಿ ದಾಟಿದ ನಿಫ್ಟಿ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 145 ಅಂಕ ಜಿಗಿತ, 18 ಸಾವಿರದ ಗಡಿ ದಾಟಿದ ನಿಫ್ಟಿ

24koppala

ಕುಷ್ಟಗಿ: ರಕ್ತದಾನ ಮಾಡಿ ಮಾದರಿಯಾದ ತಹಶಿಲ್ದಾರ್

randeep surjewala

ಬಿಜೆಪಿಯವರು ಕಪಟ, ಹಣ, ತೋಳ್ಬಲದಿಂದ ಗೆಲ್ಲಲು ಹೊರಟಿದ್ದಾರೆ: ಸುರ್ಜೇವಾಲಾ

IT companies

ದಿಗ್ಗಜ ಐಟಿ ಕಂಪನಿಗಳ “ವರ್ಕ್‌ ಫ್ರಮ್‌ ಹೋಮ್”‌ ಅಂತ್ಯ?

ತೋಟ ವಿಸ್ತರಣೆ ಮಾಡದೇ ಅಡಕೆ ಮಾನ ಕಾಪಾಡಿಕೊಳ್ಳಿ

ತೋಟ ವಿಸ್ತರಣೆ ಮಾಡದೇ ಅಡಕೆ ಮಾನ ಕಾಪಾಡಿಕೊಳ್ಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.