ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆ ಶೇ.65.9ರಷ್ಟು ಗುರಿ ಸಾಧನೆ
Team Udayavani, Jan 21, 2022, 11:15 PM IST
ಬೆಂಗಳೂರು: ರಾಜ್ಯದಲ್ಲಿ 15ರಿಂದ 18ವರ್ಷದೊಳಗಿನ ಶೇ. 65.9ರಷ್ಟು ಮಕ್ಕಳಿಗೆ ಕೋವ್ಯಾಕ್ಸಿನ್ ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿದೆ.
ಗದಗದಲ್ಲಿ ಶೇ.99, ಕೊಡಗು ಹಾಗೂ ಉಡುಪಿ ತಲಾ ಶೇ.87, .ಕ. ಶೇ.83, ಬೆಂಗಳೂರು ನಗರ ಹಾಗೂ ದ.ಕ. ತಲಾ ಶೇ.79, ಬಾಗಲಕೋಟೆ ಶೇ.77, ಶಿವಮೊಗ್ಗ ಶೇ.76, ಧಾರವಾಡ ಶೇ.75ರಷ್ಟು ಗುರಿ ಸಾಧನೆ ಮಾಡಿದೆ.
ಕಲಬುರಗಿ, ಬಿಬಿಎಂಪಿ, ರಾಯಚೂರು, ಬೀದರ್, ಬಳ್ಳಾರಿ ಜಿಲ್ಲೆಯಲ್ಲಿ ಶೇ.51ರಿಂದ ಶೇ.59ರಷ್ಟು ಗುರಿ ತಲುಪುವ ಮೂಲಕ ಜಿಲ್ಲಾವಾರು ಪಟ್ಟಿಯಲ್ಲಿ ಅತ್ಯಂತ ಕಡಿಮೆ ಗುರಿ ಸಾಧಿಸಿದ ಜಿಲ್ಲೆಗಳಾಗಿ ಗುರುತಿಸಿಕೊಂಡಿವೆ.