ಹ್ಯಾರಿಸ್ ಮಗನ ರಂಪಾಟ:ಎಲ್ಲರ ಬಣ್ಣ ಬಯಲು ಮಾಡಿದ ಮಹಿಳೆ! ವಿಡಿಯೋ ವೈರಲ್
Team Udayavani, Feb 20, 2018, 12:47 PM IST
ಬೆಂಗಳೂರು: ಉದ್ಯಮಿ ಪುತ್ರ ವಿದ್ಯತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಕೊನೆಗೂ ಪೊಲೀಸರಿಗೆ ಶರಣಾಗಿದ್ದರೆ, ಮತ್ತೊಂದೆಡೆ 3ವರ್ಷಗಳ ಹಿಂದೆ ಹ್ಯಾರಿಸ್ ಪುತ್ರನ ವಿರುದ್ಧ ದೂರು ಕೊಡಲು ಹೋದಾಗ ಏನಾಯ್ತು, ಯಾರೆಲ್ಲ ಹೇಗೆ ನಡೆದುಕೊಂಡಿದ್ದಾರೆ ಎಂಬ ಬಗ್ಗೆ ಮಹಿಳೆಯೊಬ್ಬರು ಫೇಸ್ ಬುಕ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತನ್ನ ಮೇಲೆ ನಲಪಾಡ್ ನಡೆಸಿದ ಹಲ್ಲೆಯ ಬಗ್ಗೆ ವರ್ಷಿತಾ ದಾಸ್ ಪೂರ್ಣಿಮಾ ಹೆಸರಿನ ಮಹಿಳೆ ಪ್ರಸ್ತಾಪ ಮಾಡಿದ್ದು, ಅದೀಗ ವೈರಲ್ ಆಗಿದೆ.
ಪೊಲೀಸರು, ಶಾಸಕ ಹ್ಯಾರಿಸ್ ಹಾಗೂ ಸಂಘಟನೆಗಳು, ಮುಸ್ಲಿಮ್ ಸಮುದಾಯ ಹೇಗೆ ನಡೆದುಕೊಂಡವು ಎಂಬುದನ್ನು ಎಳೆ,ಎಳೆಯಾಗಿ ಬಿಚ್ಚಿಟ್ಟಿದ್ದಾರೆ!