ವಿಜಯೇಂದ್ರಗೆ ಸಿಗದ ಚುನಾವಣೆ ಉಸ್ತುವಾರಿ: ಬಿ.ಎಲ್.ಸಂತೋಷ್ ವಿರುದ್ಧ ಬೆಂಬಲಿಗರ ಆಕ್ರೋಶ


Team Udayavani, Oct 4, 2021, 11:53 AM IST

ವಿಜಯೇಂದ್ರಗೆ ಸಿಗದ ಚುನಾವಣೆ ಉಸ್ತುವಾರಿ: ಬಿಎಲ್ ಸಂತೋಷ್ ವಿರುದ್ಧ ಬೆಂಬಲಿಗರ ಆಕ್ರೋಶ

ಬೆಂಗಳೂರು: ರಾಜ್ಯದ ಹಾನಗಲ್ ಮತ್ತು ಸಿಂದಗಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಬಿಜೆಪಿ ಸಿದ್ದತೆ ನಡೆಸುತ್ತಿದೆ. ರವಿವಾರ ನಡೆದ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ಎರಡೂ ಕ್ಷೇತ್ರಗಳಿಗೆ ಚುನಾವಣಾ ಉಸ್ತುವಾರಿಗಳನ್ನು ಬಿಜೆಪಿ ನೇಮಿಸಿದೆ. ಆದರೆ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹೆಸರು ಉಸ್ತುವಾರಿಗಳ ಪಟ್ಟಿಯಲ್ಲಿರುವುದು ಅವರ ಅಭಿಮಾನಿಗಳ ಕಣ್ಣು ಕೆಂಪಗಾಗಿಸಿದೆ.

ಈ ಬಗ್ಗೆ ‘ನಮ್ಮ ಬಿ.ವೈ.ವಿಜಯೇಂದ್ರ ಯಡಿಯೂರಪ್ಪ’ ಎಂಬ ಫೇಸ್ ಬುಕ್ ನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಕಿಡಿಕಾರಲಾಗಿದೆ.

“ಬಿಎಲ್ ಸಂತೋಷ್ ಎಂಬ ವಿಘ್ನ ಸಂತೋಷಿಯ ಚಿಲ್ಲರೆ ಬುದ್ದಿಗೆ ಏನು ಹೇಳಬೇಕು. ವಿಜಯೇಂದ್ರ ಯಡಿಯೂರಪ್ಪ ರಾಜ್ಯದ ಚುನಾವಣಾ ಅಖಾಡಕ್ಕೆ ತನ್ನ ತಾಕತ್ತನ್ನು ಪರಿಚಯಿಸಿಯಾಗಿದೆ. ಮತ್ತು ರಾಜ್ಯ ರಾಜಕಾರಣದ ಮಾಸ್ ಲೀಡರ್ ಆಗಿ ರೂಪುಗೊಂಡು ಆಗಿದೆ. ಯಾರದ್ದೋ ಶ್ರಮವನ್ನು ತನ್ನದೆಂದು ಬಿಂಬಿಸಿಕೊಂಡು ಮೆರೆಯುವ ಸಂತೋಷ್ ಬಿಎಲ್ ಎಂಬ ಕುತಂತ್ರಿಯ ಆಟ ಬಹುದಿನ ಉಳಿಯದು. ಹಾಗೂ ಸಂತೋಷ್ ಬಿಎಲ್ ಎಂಬ ಶಾರ್ಟ್ ಕಟ್ ಗಳಿಂದ ಜನನಾಯಕನಾಗಿ ರೂಪುಗೊಂಡಿರುವ ವಿಜಯೇಂದ್ರ ಯಡಿಯೂರಪ್ಪನವರ ಶಕ್ತಿಯನ್ನು ಅಡಗಿಸಲಾಗದು” ಎಂದು ಪೋಸ್ಟ್ ಮಾಡಲಾಗಿದೆ.

ಇದನ್ನೂ ಓದಿ:ಚುನಾವಣೆ ಬಂದರೆ ಬಿಜೆಪಿಗೆ ಖುಷಿ, ಕಾಂಗ್ರೆಸ್ ಗೆ ನಡುಕ: ಸಚಿವ ಈಶ್ವರಪ್ಪ

ಮತ್ತೊಂದು ಪೋಸ್ಟ್ ನಲ್ಲಿ ಉಸ್ತುವಾರಿ ಪಟ್ಟಿಗೆ ವಿರೋಧ ಸೂಚಿಸಿ, “ಸರ್ವಶ್ರೇಷ್ಠ ನಾಯಕ ಯಡಿಯೂರಪ್ಪನವರನ್ನು ಸದಾ ನಿಂದಿಸುತ್ತಿದ್ದ ಯತ್ನಾಳರಿಗೆ ಯಾವುದೇ ಶಿಸ್ತುಕ್ರಮ ಕೈಗೊಳ್ಳದೇ ಉಪಚುನಾವಣೆ ಉಸ್ತುವಾರಿ ನೀಡಿರುವ ರಾಜ್ಯಾಧ್ಯಕ್ಷರ ಕ್ರಮ ಎಷ್ಟು ಸರಿ? ಇವರಿಗೆ ಯಡಿಯೂರಪ್ಪನವರ ದುಡಿಮೆ ಮಾತ್ರಬೇಕು, ಅವರ ಗೌರವ ಕಾಪಾಡುವುದು ಯಾರಿಗೂ ಬೇಕಿಲ್ಲ! ನಾಡಿನ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ, ಬಿಜೆಪಿಗರೇ ಎಚ್ಚರ!” ಎಂದು ಬರೆಯಲಾಗಿದೆ.

ಬಿಜೆಪಿ ಉಸ್ತುವಾರಿಗಳ ಪಟ್ಟಿ: ಎರಡು ಕ್ಷೇತ್ರಗಳ ಉಪ ಚುನಾವಣೆಗೆ ಉಸ್ತುವಾರಿಗಳನ್ನು ನೇಮಕ ಮಾಡಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಆದೇಶ ಹೊರಡಿಸಿದ್ದು, ಸಿಂದಗಿ ಕ್ಷೇತ್ರಕ್ಕೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಹಾನಗಲ್‌ ಕ್ಷೇತ್ರಕ್ಕೆ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.

ಸಿಂದಗಿ ಕ್ಷೇತ್ರಕ್ಕೆ ಗೊವಿಂದ ಕಾರಜೋಳ, ವಿ. ಸೋಮಣ್ಣ, ಸಿ.ಸಿ. ಪಾಟೀಲ್‌, ಶಶಿಕಲಾ ಜೊಲ್ಲೆ, ರಮೇಶ್‌ ಜಿಗಜಿಣಗಿ, ಬಸನಗೌಡ ಪಾಟೀಲ್‌ ಯತ್ನಾಳ, ಲಕ್ಷ್ಮಣ ಸವದಿ, ಸೋಮನಗೌಡ ಪಾಟೀಲ್‌, ಎ.ಎಸ್‌. ಪಾಟೀಲ್‌ ನಡಹಳ್ಳಿ, ಪಿ. ರಾಜೀವ, ಶ್ರೀಕಾಂತ ಕುಲಕರ್ಣಿ, ಬಾಬುರಾವ್‌ ಚಿಂಚನಸೂರ್‌ ಅವರನ್ನು ನೇಮಿಸಲಾಗಿದೆ. ಈ ಹಿಂದೆ ಯಡಿಯೂರಪ್ಪ ಅವರ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ ಸವದಿ ಅವರಿಗೆ ಸಿಂದಗಿ ಉಪ ಚುನಾವಣೆಯ ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು. ಈಗ ಅವರು ಸಚಿವ ಸ್ಥಾನ ಕಳೆದುಕೊಂಡಿದ್ದರಿಂದ ಅವರ ಬದಲು ಗೋವಿಂದ ಕಾರಜೋಳ ಅವರಿಗೆ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ.

ಹಾನಗಲ್‌ ಕ್ಷೇತ್ರದಲ್ಲಿ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು, ಜೆ.ಸಿ. ಮಾಧುಸ್ವಾಮಿ, ಬಿ.ಸಿ. ಪಾಟೀಲ್‌, ಶಿವರಾಮ್‌ ಹೆಬ್ಟಾರ, ಶಿವಕುಮಾರ ಉದಾಸಿ, ಎನ್‌. ರವಿಕುಮಾರ, ಮಹೇಶ ಟೆಂಗಿನಕಾಯಿ, ರಾಜುಗೌಡ, ನೆಹರೂ ಓಲೇಕಾರ, ಎಂ. ಚಂದ್ರಪ್ಪ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣ್‌ ಕುಮಾರ್‌ ಗುತ್ತೂರು ಅವರನ್ನು ನೇಮಕ ಮಾಡಲಾಗಿದೆ.

ಟಾಪ್ ನ್ಯೂಸ್

ಸ್ಥೈರ್ಯ ಪರೀಕ್ಷೆಗೆ ಹಿಮಾಗ್ನಿ ಪರ್ವತಾರೋಹಣ!

ಸ್ಥೈರ್ಯ ಪರೀಕ್ಷೆಗೆ ಹಿಮಾಗ್ನಿ ಪರ್ವತಾರೋಹಣ!

369 ಕೋಟಿ ರೂ.ಗಳ ಫ್ಲ್ಯಾಟ್‌ ಖರೀದಿ! ಭಾರತದ ಅತ್ಯಂತ ದುಬಾರಿ ಅಪಾರ್ಟ್‌ಮೆಂಟ್‌

369 ಕೋಟಿ ರೂ.ಗಳ ಫ್ಲ್ಯಾಟ್‌ ಖರೀದಿ! ಭಾರತದ ಅತ್ಯಂತ ದುಬಾರಿ ಅಪಾರ್ಟ್‌ಮೆಂಟ್‌

vote

ಉಡುಪಿ ಜಿಲ್ಲೆಯಲ್ಲಿ 206 ಶತಾಯುಷಿ ಮತದಾರರು

hazelwood

ಏಳು ಪಂದ್ಯಗಳಿಗೆ ಹೇಝಲ್‌ವುಡ್‌ ಇಲ್ಲ

ರೂಪಾಯಿ ಆಗಲಿದೆ ಕಿಂಗ್‌; ವಿದೇಶಿ ವಹಿವಾಟಿಗೆ ದೇಶಿ ಟಚ್‌ ನೀಡಲು ಯತ್ನ

ರೂಪಾಯಿ ಆಗಲಿದೆ ಕಿಂಗ್‌; ವಿದೇಶಿ ವಹಿವಾಟಿಗೆ ದೇಶಿ ಟಚ್‌ ನೀಡಲು ಯತ್ನ

6 ರಾಜ್ಯಗಳಲ್ಲಿ ಹಿಂಸಾಚಾರ; ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: ಹೌರಾದಲ್ಲಿ ಗಲಭೆ

6 ರಾಜ್ಯಗಳಲ್ಲಿ ಹಿಂಸಾಚಾರ; ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: ಹೌರಾದಲ್ಲಿ ಗಲಭೆ

police

ಮದ್ರಸಾ ಅಧ್ಯಾಪಕನಿಗೆ 53 ವರ್ಷ ಕಠಿಣ ಸಜೆ, ದಂಡ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೇ 29ಕ್ಕೆ 2023-24ರ ಶೈಕ್ಷಣಿಕ ವರ್ಷ ಆರಂಭ

ಮೇ 29ಕ್ಕೆ 2023-24ರ ಶೈಕ್ಷಣಿಕ ವರ್ಷ ಆರಂಭ

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್; 26 ಗ್ರೇಸ್‌ ಮಾರ್ಕ್ಸ್!

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್; 26 ಗ್ರೇಸ್‌ ಮಾರ್ಕ್ಸ್!

ಶಾಸಕರನ್ನು ಇನ್ನೂ ಅನರ್ಹಗೊಳಿಸಲಿಲ್ಲವೇ?

ಶಾಸಕರನ್ನು ಇನ್ನೂ ಅನರ್ಹಗೊಳಿಸಲಿಲ್ಲವೇ?

ಮುಸ್ಲಿಮರ ಮೀಸಲು ರದ್ದು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

ಮುಸ್ಲಿಮರ ಮೀಸಲು ರದ್ದು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

ದಿಲ್ಲಿ ಸಭೆಯಲ್ಲೂ ಹಳ್ಳಿ ಅಭಿಪ್ರಾಯಕ್ಕೆ ಮನ್ನಣೆ;  ಜಿಲ್ಲೆಗಳಲ್ಲೂ ನಡೆದ ಕೋರ್‌ ಕಮಿಟಿ ಸಭೆ

ದಿಲ್ಲಿ ಸಭೆಯಲ್ಲೂ ಹಳ್ಳಿ ಅಭಿಪ್ರಾಯಕ್ಕೆ ಮನ್ನಣೆ;  ಜಿಲ್ಲೆಗಳಲ್ಲೂ ನಡೆದ ಕೋರ್‌ ಕಮಿಟಿ ಸಭೆ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

ಸ್ಥೈರ್ಯ ಪರೀಕ್ಷೆಗೆ ಹಿಮಾಗ್ನಿ ಪರ್ವತಾರೋಹಣ!

ಸ್ಥೈರ್ಯ ಪರೀಕ್ಷೆಗೆ ಹಿಮಾಗ್ನಿ ಪರ್ವತಾರೋಹಣ!

369 ಕೋಟಿ ರೂ.ಗಳ ಫ್ಲ್ಯಾಟ್‌ ಖರೀದಿ! ಭಾರತದ ಅತ್ಯಂತ ದುಬಾರಿ ಅಪಾರ್ಟ್‌ಮೆಂಟ್‌

369 ಕೋಟಿ ರೂ.ಗಳ ಫ್ಲ್ಯಾಟ್‌ ಖರೀದಿ! ಭಾರತದ ಅತ್ಯಂತ ದುಬಾರಿ ಅಪಾರ್ಟ್‌ಮೆಂಟ್‌

vote

ಉಡುಪಿ ಜಿಲ್ಲೆಯಲ್ಲಿ 206 ಶತಾಯುಷಿ ಮತದಾರರು

hazelwood

ಏಳು ಪಂದ್ಯಗಳಿಗೆ ಹೇಝಲ್‌ವುಡ್‌ ಇಲ್ಲ

ರೂಪಾಯಿ ಆಗಲಿದೆ ಕಿಂಗ್‌; ವಿದೇಶಿ ವಹಿವಾಟಿಗೆ ದೇಶಿ ಟಚ್‌ ನೀಡಲು ಯತ್ನ

ರೂಪಾಯಿ ಆಗಲಿದೆ ಕಿಂಗ್‌; ವಿದೇಶಿ ವಹಿವಾಟಿಗೆ ದೇಶಿ ಟಚ್‌ ನೀಡಲು ಯತ್ನ