Udayavni Special

ಪಾಳೇಗಾರನ ಮಣಿಸಿದ ಬಿಜೆಪಿ


Team Udayavani, May 16, 2018, 6:00 AM IST

d-2.jpg

ಧಾರವಾಡ: ಇಬ್ಬರೂ ಪಾಳೇಗಾರರ ಮಧ್ಯೆ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಕೊನೆಗೂ ಸಚಿವ ವಿನಯ್‌ ಕುಲಕರ್ಣಿ ಸೋಲು ಅನುಭವಿಸಿದ್ದಾರೆ.

ಜಿಲ್ಲೆಯ ಹಂಗರಕಿ ದೇಸಾಯಿ ಮನೆತನದ ಅಮೃತ ದೇಸಾಯಿ ಮತ್ತು ನಾಯಕನೂರು ಪಾಳೇಗಾರಿಕೆ ಮನೆತನದ ವಿನಯ್‌ ಕುಲಕರ್ಣಿ ಮಧ್ಯೆ ತೀವ್ರ ಹಣಾಹಣಿ ಏರ್ಪಟ್ಟು ಮತದಾರರು ಈ ಬಾರಿ ಬಿಜೆಪಿ ಅಭ್ಯರ್ಥಿ ದೇಸಾಯಿ ಅವರಿಗೆ ಮಣೆ ಹಾಕಿದ್ದಾರೆ. ಎದೆಗಾರಿಕೆ ರಾಜಕೀಯ ಮತ್ತು ನಡೆನುಡಿಗೆ ಹೆಸರಾಗಿರುವ ವಿನಯ್‌ ಅವರ ರಾಜಕೀಯ ಗತ್ತು ಬಿಜೆಪಿ ಕಣ್ಣು ಕುಕ್ಕಿದ್ದು ಸತ್ಯ. ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ, ಯೋಗೀಶಗೌಡ ಕೊಲೆ ಪ್ರಕರಣದಿಂದ ರಾಜ್ಯಾದ್ಯಂತ ಸುದ್ದಿಯಾಗಿದ್ದ ವಿನಯ್‌, ಧಾರವಾಡ ಜಿಲ್ಲೆಯಲ್ಲಿ ಬಿಜೆಪಿ ಬೆಳವಣಿಗೆಗೆ ಗೋಡೆಯಂತೆ ಅಡ್ಡವಾಗಿ ನಿಂತು ಕೈ ಬಲಪಡಿಸಿದ್ದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ 2004 ಮತ್ತು 2013ರಲ್ಲಿ ಗೆಲುವು ಸಾಧಿಸಿ, ಸಿದ್ದರಾಮಯ್ಯ ಅವರ  ಸರ್ಕಾರದಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿ ಕೆಲಸ ಮಾಡಿದ ಅವರು, ಈ ಬಾರಿ ಗ್ರಾಮೀಣ ಕ್ಷೇತ್ರದಲ್ಲಿ ಬೀಸಿದ ಬಿಜೆಪಿ ಮತ್ತು ಮೋದಿ ಅವರ ಸುನಾಮಿ ಅಲೆಯಲ್ಲಿ ಕೊಚ್ಚಿ ಹೋಗಿದ್ದಾರೆ.

ಲಿಂಗಾಯತ ಸಮುದಾಯದ ಕೆಲಸಗಳನ್ನು ಮುಗಿಬಿದ್ದು ಮಾಡಿ ಸೈ ಎನಿಸಿಕೊಂಡಿದ್ದ ವಿನಯ್‌ ಅವರು, ಬಿಜೆಪಿಯಲ್ಲಿ ಟಿಕೆಟ್‌ ಸಿಕ್ಕದೇ ಬಂಡಾಯದ ಬಾವುಟ ಹಾರಿಸಿದ್ದ ಸೀಮಾ ಮಸೂತಿ ಅವರ ನಡೆಯಿಂದ ಪುಳಕಿತರಾಗಿದ್ದರು. ಆದರೆ ಬಿ.ಎಸ್‌. ಯಡಿಯೂರಪ್ಪ ಅವರು ಬಂಡಾಯಕ್ಕೆ ಮುಲಾಮು ಹಚ್ಚಿ ಇಲ್ಲಿ ಬಿಜೆಪಿಗೆ ಶಕ್ತಿ ತುಂಬಿದರು.

ಮೋದಿ-ಶಾ ಕೆಂಗಣ್ಣು: ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಯಡಿಯೂರಪ್ಪ ಮತ್ತು ಅಮಿತ್‌ ಶಾ ಆದಿಯಾಗಿ ಎಲ್ಲರೂ ಪರೇಡ್‌ ಮಾಡಿದ್ದರಲ್ಲದೇ, ಹುಬ್ಬಳ್ಳಿಯಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಅವರೇ ಸಚಿವ ವಿನಯ್‌ ಅವರನ್ನು ಟಾರ್ಗೆಟ್‌ ಮಾಡಿ ಮಾತನಾಡುವಷ್ಟರ ಮಟ್ಟಿಗೆ ವಿನಯ್‌ ಬಿಜೆಪಿಗೆ ಜಿಲ್ಲೆಯಲ್ಲಿ ಅಡ್ಡಗಾಲಾಗಿದ್ದರು. ವಿನಯ್‌ 1998ರಲ್ಲಿ ಧಾರವಾಡ ಜಿಲ್ಲಾ ಪಂಚಾಯಿತಿಯ ನಿಗದಿ ಕ್ಷೇತ್ರದಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ಅದೇ ಅವಧಿಯಲ್ಲಿ ಜಿ.ಪಂ. ಉಪಾಧ್ಯಕ್ಷರಾಗಿ ಕೂಡ ಕೆಲಸ ಮಾಡಿ, 2004ರಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಪಕ್ಷೇತರರಾಗಿ  ನಿಂತು ಆಯ್ಕೆಯಾಗಿ ಮತ್ತೆ ಕಾಂಗ್ರೆಸ್‌ ಸೇರಿದರು. 2008ರಲ್ಲಿ ಸೀಮಾ ಮಸೂತಿ ವಿರುದಟಛಿ ಸೋಲುಂಡಿದ್ದ ಅವರು 2013ರಲ್ಲಿ ಮತ್ತೆ ಆಯ್ಕೆಯಾಗಿದ್ದರು. ಇದೀಗ ಸಚಿವ ವಿನಯ್‌ ಮತ್ತೆ ಸೋತಿದ್ದಾರೆ. 

ಬಸವರಾಜ ಹೊಂಗಲ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಡ್ವಾಣಿ ಎದುರು ಸ್ಪರ್ಧೆ,15 ವರ್ಷದ ನಟಿ ಜತೆ ಸೂಪರ್ ಸ್ಟಾರ್ ಖನ್ನಾ ವಿವಾಹ

ಅಡ್ವಾಣಿ ಎದುರು ಸ್ಪರ್ಧೆ, 15 ವರ್ಷದ ನಟಿ ಜತೆ ಸೂಪರ್ ಸ್ಟಾರ್ ವಿವಾಹ! ಪ್ರಿಯತಮೆ ಮುನಿಸು

ಕೋವಿಡ್ ಪ್ಯಾಕೇಜ್ ಎಷ್ಟು ಜನರಿಗೆ ತಲುಪಿದೆ? ದಾಖಲೆ ನೀಡಲು ಮುಖ್ಯಮಂತ್ರಿಗೆ ಡಿಕೆಶಿ ಒತ್ತಾಯ

ಕೋವಿಡ್ ಪ್ಯಾಕೇಜ್ ಎಷ್ಟು ಜನರಿಗೆ ತಲುಪಿದೆ? ಸೂಕ್ತ ದಾಖಲೆ ನೀಡಲು ಸರಕಾರಕ್ಕೆ ಡಿಕೆಶಿ ಒತ್ತಾಯ

aouraV

ಮುಂಬೈ-ಚೆನ್ನೈ ಮೊದಲ ಕಾದಾಟ: ಯಾರು ಗೆಲ್ಲುತ್ತಾರೆ ? ಸೌರವ್ ಗಂಗೂಲಿ ಹೇಳಿದ್ದೇನು ?

ಸ್ಯಾಂಡಲ್ ವುಡ್ ಡ್ರಗ್ ಕೇಸ್: ರಾಗಿಣಿ, ಸಂಜನಾ ಜಾಮೀನು ಅರ್ಜಿ ಮುಂದೂಡಿಕೆ

ಸ್ಯಾಂಡಲ್ ವುಡ್ ಡ್ರಗ್ ಕೇಸ್: ರಾಗಿಣಿ, ಸಂಜನಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಆತ್ಮನಿರ್ಭರ ಯೋಜನೆಯಡಿ ಸಾವಯವ ಬೆಲ್ಲ ಉತ್ಪಾದನೆಗೆ ಉತ್ತೇಜನ: ಸೋಮಶೇಖರ್

ಆತ್ಮನಿರ್ಭರ ಯೋಜನೆಯಡಿ ಸಾವಯವ ಬೆಲ್ಲ ಉತ್ಪಾದನೆಗೆ ಉತ್ತೇಜನ: ಸೋಮಶೇಖರ್

ವೈದ್ಯರು, ನರ್ಸ್ ಮೇಲೆ ಹಲ್ಲೆ ನಡೆಸಿದ್ರೆ ಜೈಲು: ರಾಜ್ಯಸಭೆಯಲ್ಲಿ ತಿದ್ದುಪಡಿ ಮಸೂದೆ ಪಾಸ್

ವೈದ್ಯರು, ನರ್ಸ್ ಮೇಲೆ ಹಲ್ಲೆ ನಡೆಸಿದ್ರೆ ಜೈಲು: ರಾಜ್ಯಸಭೆಯಲ್ಲಿ ತಿದ್ದುಪಡಿ ಮಸೂದೆ ಪಾಸ್

ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣಗೆ ಕೋವಿಡ್ ಸೋಂಕು ದೃಢ

ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣಗೆ ಕೋವಿಡ್ ಸೋಂಕು ದೃಢ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಜೊತೆಗೆ ಹೈಬ್ರೀಡ್ ತಳಿಗಳನ್ನು ಬಳಸಲು ಕೃಷಿ ವಿ.ವಿ ಸಲಹೆ

ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಜೊತೆಗೆ ಹೈಬ್ರೀಡ್ ತಳಿಗಳನ್ನು ಬಳಸಲು ಕೃಷಿ ವಿ.ವಿ ಸಲಹೆ

ಕೋವಿಡ್ ಪ್ಯಾಕೇಜ್ ಎಷ್ಟು ಜನರಿಗೆ ತಲುಪಿದೆ? ದಾಖಲೆ ನೀಡಲು ಮುಖ್ಯಮಂತ್ರಿಗೆ ಡಿಕೆಶಿ ಒತ್ತಾಯ

ಕೋವಿಡ್ ಪ್ಯಾಕೇಜ್ ಎಷ್ಟು ಜನರಿಗೆ ತಲುಪಿದೆ? ಸೂಕ್ತ ದಾಖಲೆ ನೀಡಲು ಸರಕಾರಕ್ಕೆ ಡಿಕೆಶಿ ಒತ್ತಾಯ

ಕೋವಿಡ್ ಸೋಂಕಿಗೆ ಹಾವೇರಿ ಪಂಚಾಯತ್ ಅಧ್ಯಕ್ಷ ಬಸನಗೌಡ ದೇಸಾಯಿ ಸಾವು

ಕೋವಿಡ್ ಸೋಂಕಿಗೆ ಹಾವೇರಿ ಪಂಚಾಯತ್ ಅಧ್ಯಕ್ಷ ಬಸನಗೌಡ ದೇಸಾಯಿ ಸಾವು

ಯಲಬುರ್ಗಾ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಗಾಂಜಾ ಘಾಟು! ಪೊಲೀಸ್ ಇಲಾಖೆಯ ನಿರ್ಲಕ್ಷ್ಯ

ಯಲಬುರ್ಗಾ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಗಾಂಜಾ ಘಾಟು! ಪೊಲೀಸ್ ಇಲಾಖೆಯ ನಿರ್ಲಕ್ಷ್ಯ

ಸ್ಯಾಂಡಲ್ ವುಡ್ ಡ್ರಗ್ ಕೇಸ್: ರಾಗಿಣಿ, ಸಂಜನಾ ಜಾಮೀನು ಅರ್ಜಿ ಮುಂದೂಡಿಕೆ

ಸ್ಯಾಂಡಲ್ ವುಡ್ ಡ್ರಗ್ ಕೇಸ್: ರಾಗಿಣಿ, ಸಂಜನಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!



ಹೊಸ ಸೇರ್ಪಡೆ

ಜನರ ಕಷ್ಟಕ್ಕಿಂತ ವರ್ಗಾವಣೆ ಮುಖ್ಯವೇ?

ಜನರ ಕಷ್ಟಕ್ಕಿಂತ ವರ್ಗಾವಣೆ ಮುಖ್ಯವೇ?

ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಜೊತೆಗೆ ಹೈಬ್ರೀಡ್ ತಳಿಗಳನ್ನು ಬಳಸಲು ಕೃಷಿ ವಿ.ವಿ ಸಲಹೆ

ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಜೊತೆಗೆ ಹೈಬ್ರೀಡ್ ತಳಿಗಳನ್ನು ಬಳಸಲು ಕೃಷಿ ವಿ.ವಿ ಸಲಹೆ

ಅಡ್ವಾಣಿ ಎದುರು ಸ್ಪರ್ಧೆ,15 ವರ್ಷದ ನಟಿ ಜತೆ ಸೂಪರ್ ಸ್ಟಾರ್ ಖನ್ನಾ ವಿವಾಹ

ಅಡ್ವಾಣಿ ಎದುರು ಸ್ಪರ್ಧೆ, 15 ವರ್ಷದ ನಟಿ ಜತೆ ಸೂಪರ್ ಸ್ಟಾರ್ ವಿವಾಹ! ಪ್ರಿಯತಮೆ ಮುನಿಸು

ಬೆಂಬಲ ಬೆಲೆ ನೀಡಿ, ಮೆಕ್ಕೆ ಜೋಳ ಖರೀದಿಸಿ

ಬೆಂಬಲ ಬೆಲೆ ನೀಡಿ, ಮೆಕ್ಕೆ ಜೋಳ ಖರೀದಿಸಿ

ಕೋವಿಡ್ ಪ್ಯಾಕೇಜ್ ಎಷ್ಟು ಜನರಿಗೆ ತಲುಪಿದೆ? ದಾಖಲೆ ನೀಡಲು ಮುಖ್ಯಮಂತ್ರಿಗೆ ಡಿಕೆಶಿ ಒತ್ತಾಯ

ಕೋವಿಡ್ ಪ್ಯಾಕೇಜ್ ಎಷ್ಟು ಜನರಿಗೆ ತಲುಪಿದೆ? ಸೂಕ್ತ ದಾಖಲೆ ನೀಡಲು ಸರಕಾರಕ್ಕೆ ಡಿಕೆಶಿ ಒತ್ತಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.