
ವೀಸಾ ಪ್ರಕ್ರಿಯೆ ಸರಳೀಕರಣ: ಕೇಂದ್ರ ಸಚಿವ
Team Udayavani, Feb 27, 2020, 3:05 AM IST

ಬೆಂಗಳೂರು: ದೇಶದಲ್ಲಿ ಪಾಸ್‌ಪೋರ್ಟ್ ಹಾಗೂ ವೀಸಾ ಸೇವೆಗಳನ್ನು ಜನಸ್ನೇಹಿಗೊಳಿಸಲಾಗಿದೆ ಎಂದು ವಿದೇಶಾಂಗ ಇಲಾಖೆ ರಾಜ್ಯ ಸಚಿವ ವಿ. ಮುರಳಿಧರನ್ ಹೇಳಿದ್ದಾರೆ. ವಿಕಾಸಸೌಧದಲ್ಲಿ ನಡೆದ ವಿದೇಶ್ ಸಂಪರ್ಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ವಿದೇಶಗಳಲ್ಲಿ ಮೂರು ಕೋಟಿ ಅನಿವಾಸಿ ಭಾರತೀಯರು ವಾಸಿಸುತ್ತಿದ್ದಾರೆ.
ವಿಶ್ವದ 117 ದೇಶಗಳಲ್ಲಿ ಇ -ವೀಸಾ ಹಾಗೂ ಇ-ಪಾಸ್ ಪೋರ್ಟ್ ಸೇವೆ ಆರಂಭಿಸಲಾಗಿದೆ. ವಿದೇಶ ಪ್ರವಾಸ ಈಗ ಮೊದಲಿಗಿಂತಲೂ ಹೆಚ್ಚು ಸುರಕ್ಷಿತವಾಗಿದೆ ಎಂದರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಪಾಸ್ ಪೋರ್ಟ್ ನೀಡುವ ಪ್ರಕ್ರಿಯೆಯನ್ನು ಇನ್ನಷ್ಟು ಸರಳೀಕರಣಗೊಳಿಸಬೇಕು.
ವೀಸಾ ಪಡೆಯಲು ಚೆನೈನಲ್ಲಿ ಉದ್ದದ ಸರದಿ ಸಾಲಿನಲ್ಲಿ ನಿಲ್ಲುವ ಅನಿವಾರ್ಯತೆ ಇದೆ. ರಾಜ್ಯದಲ್ಲಿಯೂ ಅಮೇರಿಕಾ ವೀಸಾ ನೀಡುವ ಕೇಂದ್ರ ತೆರೆಯಬೇಕು ಎಂದು ಮನವಿ ಮಾಡಿದರು. ವಿದೇಶಗಳಲ್ಲಿ ಅನಿವಾಸಿ ಭಾರತೀಯರು ನಿಧನ ಹೊಂದಿದಾಗ ಅವರ ಮೃತ ದೇಹವನ್ನು ಮಾತೃ ದೇಶಕ್ಕೆ ತರುವ ಪ್ರಕ್ರಿಯೆ ಸರಳೀಕರಿಸಬೇಕು ಎಂದು ಆಗ್ರಹಿಸಿದರು..
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ಹುಣಸೂರು: ಬಿರುಗಾಳಿಗೆ ಧರೆಗುರುಳಿದ ವಿದ್ಯುತ್ ಕಂಬಗಳು… ಸಿಡಿಲಿಗೆ 3 ಜಾನುವಾರು ಬಲಿ

ರಾಮನಗರದಲ್ಲಿ ವರುಣನ ಅಬ್ಬರ… ಸಿಡಿಲು ಬಡಿದು 4ಮೇಕೆ ಸಾವು, ಮೂರು ಕುರಿಗಾಹಿಗಳಿಗೆ ಗಾಯ

ಕೆಜಿಎಫ್ ನಲ್ಲಿ ಕೈಗಾರಿಕಾ ಕಾರಿಡಾರ್: ಉನ್ನತ ಪ್ರಾಧಿಕಾರಕ್ಕೆ ಸಚಿವ ಎಂ.ಬಿ ಪಾಟೀಲ್ ಕೋರಿಕೆ

ವಿಜಯಪುರ: ಪೋಕ್ಸೋ ಪ್ರಕರಣದ ಆರೋಪಿಗೆ 20 ವರ್ಷ ಜೀವಾವಧಿ ಶಿಕ್ಷೆ: 26 ಸಾವಿರ ರೂ. ದಂಡ