ರಜೆಗೆ ಬಂದಿದ್ದ ಯೋಧರಿಗೆ ಬುಲಾವ್‌:ಮದುವೆಯಾಗಿ 4 ದಿನಕ್ಕೆ ಸೇವೆಗೆ‌

Team Udayavani, Mar 1, 2019, 12:30 AM IST

ಬಾಗಲಕೋಟೆ/ಯಾದಗಿರಿ/ಮಂಡ್ಯ/ ಚಿಕ್ಕೋಡಿ: ದೇಶದ ಗಡಿಯಲ್ಲಿ ತೀವ್ರ ಕಟ್ಟೆಚ್ಚರ ಇರುವು ದರಿಂದ ರಜೆಗೆ ಬಂದಿದ್ದ ಯೋಧರಿಗೆ ಸೇನೆಯಿಂದ ಕರೆ ಬಂದಿದ್ದು, ಯಾವುದೇ ಸಂದರ್ಭ ವಿಷಯ ತಿಳಿಸಿದರೂ ಸೇವೆಗೆ ಹಾಜರಾಗಲು ಸಿದ್ಧರಿರುವಂತೆ ಸೂಚಿಸಿದೆ. ಬೀಳಗಿ ತಾಲೂಕು ಕೊಪ್ಪ ಎಸ್‌.ಕೆ. ಗ್ರಾಮದ ಭಾರತೀಯ ಸೇನೆಯ ಯೋಧ ರಮೇಶ ಕೃಷ್ಣಪ್ಪ ಮಲಘಾಣ ಅವರಿಗೆ ಸೇನಾಧಿಕಾರಿ ಸೂಚಿಸಿದ್ದಾರೆ.

11ನೇ ಮದ್ರಾಸ್‌ ರೆಜಿಮೆಂಟ್‌ನ ಯೋಧ ರಮೇಶ, ಸದ್ಯ ಅಸ್ಸಾಂನ ಗುವಾಹಟಿಯಲ್ಲಿ ಕರ್ತವ್ಯದಲ್ಲಿದ್ದಾರೆ. ಫೆ.10ರಿಂದ 25 ದಿನಗಳ ಕಾಲ ರಜೆಗೆಂದು ಗ್ರಾಮಕ್ಕೆ ಬಂದಿದ್ದರು. ಗುವಾಹಟಿಯಲ್ಲಿ ವರದಿ ಮಾಡಿಕೊಂಡು ಬಳಿಕ ಜಮ್ಮು-ಕಾಶ್ಮೀರದ ಅವಾಂತಿಪುರದಲ್ಲಿ ಸೇವೆಗೆ ತೆರಳಲು ಸಿದಟಛಿರಾಗುವಂತೆ ಸೂಚಿಸಲಾಗಿದೆ ಎಂದು ಯೋಧ ರಮೇಶ ಮಲಘಾಣ ತಿಳಿಸಿದ್ದಾರೆ.

ಬೀಳಗಿಯ ಹನಮಂತ ಗೌಡರ, ಕಾತರಕಿ ಗ್ರಾಮದ ಬಿಎಸ್‌ಎಫ್‌ ಯೋಧ ಅನಿಲ ವಜ್ಜರಮಟ್ಟಿ, ಲಿಂಗಾಪುರದ ಪರಸಪ್ಪ ತಳವಾರ, ಕಾತರಕಿಯ ಶ್ರೀಶೈಲ ಕೆರಕಲಮಟ್ಟಿ , ಅಸ್ಸಾಂ ರೈಫಲ್‌ಯೋಧ ಲಿಂಗಾಪುರದ ಭರಮಪ್ಪ ನಾಯ್ಕರ ಅವರೆಲ್ಲರೂ ರಜೆಗೆ ಬಂದಿದ್ದು,ಹೊರಡುವ ಸಿದಟಛಿತೆಯಲ್ಲಿದ್ದಾರೆ. ಯಾದಗಿರಿ ಜಿಲ್ಲೆ ಸುರಪುರದ ಸಿಆರ್‌ಪಿಎಫ್‌ ಯೋಧರಾದ ರಾಜಮಣಿ ಮತ್ತು ರಾಜೇಶ ಎಂಬುವರು ಕೆಲ ದಿನಗಳ ಹಿಂದೆಯಷ್ಟೇ ರಜೆ ಪಡೆದಿದ್ದರು.

ಆಶೀರ್ವದಿಸಿ ಬೀಳ್ಕೊಟ್ಟ ತಾಯಿ: ರಜೆಯ ಮೇಲೆ ಮನೆಗೆ ಬಂದಿದ್ದ ಸೈನಿಕನೊಬ್ಬ ತುರ್ತು ಕರೆಯ ಮೇರೆಗೆ ಕರ್ತವ್ಯಕ್ಕೆ ಮರಳಲು ಸಜ್ಜಾದಾಗ ತಾಯಿ ವಿಜಯ ತಿಲಕವಿಟ್ಟು ಆಶೀರ್ವದಿಸಿದರೆ, ದೇಶ ರಕ್ಷಣೆಗೆ ತಾಯಿ ಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಕರ್ತವ್ಯಕ್ಕೆ ತೆರಳಿದರು. ಮಂಡ್ಯ ತಾಲೂಕಿನ ಹಲ್ಲೇ ಗೆರೆಯ ಚಿಕ್ಕಲಿಂಗಯ್ಯ, ಕೆಂಪಮ್ಮ ದಂಪತಿ ಪುತ್ರ ಮಹೇಂದ್ರ ಹರಿಯಾಣದಲ್ಲಿ ಭಾರತೀಯ ಸೇನೆಯ ಬೆಟಾಲಿಯನ್‌ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮದುವೆಯಾಗಿ ನಾಲ್ಕೇ ದಿನಕ್ಕೆ ಸೇವೆಗೆ‌

ಮದುವೆಯಾದ ನಾಲ್ಕೇ ದಿನಕ್ಕೆ ಸೇನೆಯ ಮೇಲಧಿಕಾರಿ ಗಳ ಕರೆಯ ಮೇರೆಗೆ ಕರ್ತವ್ಯಕ್ಕೆ ಹೊರಟ ಯೋಧನನ್ನು ಇಡೀ ಕುಟುಂಬವೇ ಹೃದಯಸ್ಪರ್ಶಿಯಾಗಿ ಗುರು ವಾರ ಬೀಳ್ಕೊಟ್ಟಿತು.ಚಿಕ್ಕೋಡಿ ತಾಲೂಕಿನ ಮಲಿಕವಾಡ ಗ್ರಾಮದ ಯೋಧ ರಾಜೇಂದ್ರ ಸುತಾರ ಭಾರತೀಯ ವಾಯುಸೇನೆಯಲ್ಲಿ ಏರ್‌ಮನ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹದಿನೈದುದಿನಗಳ ಹಿಂದೆಯಷ್ಟೇ ಮದುವೆ ಹಿನ್ನೆಲೆಯಲ್ಲಿ ರಜೆಯ ಮೇಲೆ ಗ್ರಾಮಕ್ಕೆ ಬಂದಿದ್ದರು. ಫೆ. 24 ರಂದು ಮದುವೆ ನೆರ ವೇರಿದೆ. 4 ದಿನಗಳ ಹಿಂದೆಯಷ್ಟೆ ಮದುವೆ ಯಾಗಿದ್ದ ಯೋಧ ಗುರುವಾರ ಮೇಲಧಿ ಕಾರಿ ಗಳ ಕರೆಯ ಮೇರೆಗೆ ಹೊರಡಲು ಸಿದಟಛಿನಾದಾಗ ಪತ್ನಿ ಮಾಧುರಿ ಕಣ್ಣೀರು ಸುರಿಸಿ ಧೈರ್ಯ ತಂದುಕೊಂಡು ಹೋಗಿ ಬಾ ಎಂದು ಬೀಳ್ಕೊಟ್ಟಳು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ