ಕಾಂಗ್ರೆಸ್ ನವರು ಇಂದು ಮಾಡಿದ್ದು ರೌಡಿಸಂ: ಸಿಎಂ ಬೊಮ್ಮಾಯಿ ಕಿಡಿ
ಇವರು ಏನು ಮಾಡಿದರು ನಮ್ಮ ಶಾಸಕರ ಕ್ಷೇತ್ರದಲ್ಲಿ ಎಂದು ಗೊತ್ತಿದೆ....
Team Udayavani, Aug 5, 2022, 9:39 PM IST
ಬೆಂಗಳೂರು: ಬಿಬಿಎಂಪಿ ಮೀಸಲಾತಿ ವಿಚಾರದಲ್ಲಿ ಆಕ್ಷೇಪಣೆ ಹಾಕುವುದಕ್ಕೆ ಸಮಯವಿದೆಯಾದರು ಕಾಂಗ್ರೆಸ್ ನವರು ಇಂದು ವಿಕಾಸಸೌಧದಲ್ಲಿ ನುಗ್ಗಿ ರೌಡಿಸಂ ಮಾಡಿದ್ದಾರೆ, ಇದು ಕಾಂಗ್ರೆಸ್ ಸಂಸ್ಕೃತಿ ತೋರಿಸುತ್ತದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಕಿಡಿ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮೀಸಲಾತಿ 2015 ರ ಹೈಕೋರ್ಟ್ ಜಡ್ಜಮೆಂಟ್ ಪ್ರಕಾರ ಮಾಡಿದ್ದೇವೆ.ಇವರು ಏನು ಮಾಡಿದರು ನಮ್ಮ ಶಾಸಕರ ಕ್ಷೇತ್ರದಲ್ಲಿ ಎಂದು ಗೊತ್ತಿದೆ. ಅವರ ವರ್ತನೆ ಎಷ್ಟರಮಟ್ಟಿಗೆ ಸರಿ ಇದೆ. ಜನ ಇದನ್ನು ಗಮನಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ದೆಹಲಿಯಿಂದ ಬಂದ ಬಳಿಕ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ಕೊಡುತ್ತೇನೆ ಎಂದರು.
ಬಿಬಿಎಂಪಿ ವಾರ್ಡ್ ಮೀಸಲಾತಿ ವಿರೋಧಿಸಿ ರಾಜ್ಯ ನಗರಾಭಿವೃದ್ಧಿ ಇಲಾಖೆ ಎದುರು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು, ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯವನ್ನು ನಿರಾಕರಿಸಲು ಡಿಲಿಮಿಟೇಶನ್ ಮತ್ತು ಮೀಸಲಾತಿಗಳನ್ನು ರಾಜಕೀಯ ಸಾಧನವಾಗಿ ಬಳಸುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಭೀಕರ ಹೊಡೆತ ಎಂದು ಆಕ್ರೋಶ ಹೊರ ಹಾಕಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿದ್ಯುಚ್ಛಕ್ತಿ ಕಾಯ್ದೆ-2022: ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ
ಕಾಂಗ್ರೆಸ್ ಮಾಡಿದ್ದ ಆಸ್ತಿಯನ್ನು ಖಾಸಗಿಯವರಿಗೆ ಕೊಟ್ಟಿದ್ದೇ ಬಿಜೆಪಿ ಸಾಧನೆ: ಮಧು ಬಂಗಾರಪ್ಪ
ಬೂಟಾಟಿಕೆ ದಾಸಯ್ಯನಿಗೆ ಮೈಯೆಲ್ಲ ಪಂಗನಾಮ: ಅಶ್ವತ್ಥನಾರಾಯಣ ವಿರುದ್ದ ಹೆಚ್ ಡಿಕೆ
ಅಮಿತ್ ಶಾ ಬಿಜೆಪಿ ನಾಯಕರಿಗೆ ವಿಳ್ಯದೆಲೆ ಶಾಸ್ತ್ರ ಮಾಡಲು ಬಂದಿದ್ದರಾ?: ಬಿ.ಕೆ. ಹರಿಪ್ರಸಾದ್
ಮನೆ ಮೇಲೆ ಮರ ಬಿದ್ದು ಮಹಿಳೆಯರು ಸಾವು: 2 ತಿಂಗಳ ಹಿಂದೆಯೇ ಮರ ತೆರವಿಗೆ ಮನವಿ ಮಾಡಿದ್ದ ಮೃತರು