Udayavni Special

ಯಶಸಿನ್ವಿ ಯೋಜನೆ ರದ್ದು: ನೋಟಿಸ್‌


Team Udayavani, May 30, 2018, 6:00 AM IST

y-31.jpg

ಬೆಂಗಳೂರು: ಯಶಸ್ವಿನಿ ಆರೋಗ್ಯ ಯೋಜನೆ ರದ್ದು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ರಿಟ್‌ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ತುರ್ತು ನೋಟಿಸ್‌ ಜಾರಿಗೊಳಿಸಿದೆ.

ಈ ಕುರಿತು ನಂಜನಗೂಡು ತಾಲೂಕಿನ ಟಿ.ಎಸ್‌ ವಿದ್ಯಾಸಾಗರ್‌, ಹಾಸನ ಜಿಲ್ಲೆ ಮಹದೇವಿ ಜತ್ತಿ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮಂಗಳವಾರ ನಡೆಸಿದ ನ್ಯಾ.ಅರವಿಂದ ಕುಮಾರ್‌ ಅವರಿದ್ದ ಏಕಸದಸ್ಯ ಪೀಠ, ಪ್ರತಿವಾದಿಗಳಾದ ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆ, ಯಶಸ್ವಿನಿ ಕೋ ಆಪರೇಟಿವ್‌ ಹೆಲ್ತ್‌ಕೇರ್‌ ಟ್ರಸ್ಟ್‌, ಸಹಕಾರ ಇಲಾಖೆಗೆ ತುರ್ತು ನೋಟಿಸ್‌ ಜಾರಿಗೊಳಿಸಿತು. ಅಲ್ಲದೆ, ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆಯೂ ತಾಕೀತು ಮಾಡಿದ ನ್ಯಾಯಪೀಠ ಜೂನ್‌ 6ಕ್ಕೆ ವಿಚಾರಣೆ ಮುಂದೂಡಿತು. 

ರಾಜ್ಯಸರ್ಕಾರ ಯಶಸ್ವಿನಿ, ವಾಜಪೇಯಿ ಆರೋಗ್ಯ ಶ್ರೀ ಸೇರಿ ಆಯ್ದ ಸಬ್ಸಿಡಿ ದರದ ಆರೋಗ್ಯ ಯೋಜನೆಗಳನ್ನು ಒಟ್ಟುಗೂಡಿಸಿ ಆರೋಗ್ಯ ಕರ್ನಾಟಕ ಯೋಜನೆ ಎಂದು ಜಾರಿಗೊಳಿಸಿದೆ. ಹೀಗಾಗಿ ಯಶಸ್ವಿನಿ ಯೋಜನೆ ಪ್ರಯೋಜನ ಮೇ 31ಕ್ಕೆ ಕೊನೆಗೊಳ್ಳಲಿದೆ. ಆದರೆ, ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಫ‌ಲಾನು ಭವಿಗಳೇ ಹೆಚ್ಚಿನ ಚಿಕಿತ್ಸಾ ಮೊತ್ತ ಭರಿಸಬೇಕಾಗುತ್ತದೆ ಹಾಗೂ ಕೆಲ ನಿಯಮಗಳು ಅಸಮರ್ಪಕವಾಗಿವೆ. ಹೀಗಾಗಿ ಯಶಸ್ವಿ ಯೋಜನೆ ರದ್ದುಗೊಳಿಸಿದ ಸರ್ಕಾರದ ಆದೇಶವನ್ನೇ  ದ್ದುಗೊಳಿಸುವಂತೆ ಅರ್ಜಿದಾರರು ಕೋರಿದ್ದಾರೆ. 

ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಭೆ 
ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಅವಧಿಯ ಕೊನೇ ಹಂತದಲ್ಲಿ ಜಾರಿಗೆ ತರಲಾಗಿದ್ದ “ಯೂನಿವರ್ಸಲ್‌ ಹೆಲ್ತ್‌ ಸ್ಕೀಮ್‌’ನ ಸಾಧಕ-ಬಾಧಕಗಳ ಬಗ್ಗೆ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಮಂಗಳವಾರ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ, ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅಜಯ್‌ ಸೇಠ್, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್‌. ಮಂಜುನಾಥ್‌ ಸೇರಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಯಶಸ್ವಿನಿ ಆರೋಗ್ಯ ಯೋಜನೆ ಇರುವಾಗಲೇ “ಯೂನಿವರ್ಸಲ್‌ ಹೆಲ್ತ್‌ ಸ್ಕೀಮ್‌’ ಜಾರಿಗೆ ಬಂದಿದೆ. ಈ ಯೋಜನೆ ಅನುಷ್ಠಾನಕ್ಕೆ ತರಬೇಕಾದರೆ ಯಶಸ್ವಿನಿ ಯೋಜನೆ ಬಗ್ಗೆ ಕೆಲವೊಂದು ಗೊಂದಲಗಳು ಎದುರಾಗುತ್ತವೆ. ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಯಶಸ್ವಿನಿ ಯೋಜನೆ ಮುಂದುವರಿಸಿಕೊಂಡು ಹೋಗಬೇಕೆಂಬ ಅಭಿಪ್ರಾಯ ಸಭೆಯಲ್ಲಿ ಬಂದಿದೆ. ಹೀಗಾಗಿ, ಇದರ ಬಗ್ಗೆ ಸಮಗ್ರ ವರದಿ ಸಿದಟಛಿಪಡಿಸಿ ಸಚಿವ ಸಂಪುಟದ ಮುಂದೆ ಮಂಡಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ. ಬುಧವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕಿಶನ್ – ಪೊಲಾರ್ಡ್ ಬ್ಯಾಟಿಂಗ್ ಅಬ್ಬರಕ್ಕೆ ಮ್ಯಾಚ್ ‘ಟೈ’ ; ಸೂಪರ್ ಓವರ್ ನಲ್ಲಿ ಗೆದ್ದ RCB

ಕಿಶನ್ – ಪೊಲಾರ್ಡ್ ಬ್ಯಾಟಿಂಗ್ ಅಬ್ಬರಕ್ಕೆ ಮ್ಯಾಚ್ ‘ಟೈ’ ; ಸೂಪರ್ ಓವರ್ ನಲ್ಲಿ ಗೆದ್ದ RCB

ಕೋವಿಡ್‌ ಆರೈಕೆ ಕೇಂದ್ರದಲ್ಲಿ ಮದುವೆ ಸಮಾರಂಭ! ಭಾವುಕಳಾದ ವಧು

ಕೋವಿಡ್‌ ಆರೈಕೆ ಕೇಂದ್ರದಲ್ಲಿ ಮದುವೆ ಸಮಾರಂಭ! ಭಾವುಕಳಾದ ವಧು

ಎಸ್ಪಿಬಿಯ ಆಸ್ಪತ್ರೆ ಖರ್ಚು ಪಾವತಿಯ ಗಾಳಿಸುದ್ದಿ: ಪುತ್ರ ಚರಣ್‌ ಅಸಮಾಧಾನ

ಎಸ್ಪಿಬಿಯ ಆಸ್ಪತ್ರೆ ಖರ್ಚು ಪಾವತಿಯ ಗಾಳಿಸುದ್ದಿ: ಪುತ್ರ ಚರಣ್‌ ಅಸಮಾಧಾನ

Padikkal-ABD

ಫಿಂಚ್, ಪಡಿಕ್ಕಲ್ ಫಿಪ್ಟೀ ; ABD ಮಸ್ತ್ ಬ್ಯಾಟಿಂಗ್ ಮುಂಬೈ ಗೆಲುವಿಗೆ 202 ರನ್ ಗಳ ಟಾರ್ಗೆಟ್

LACಯಲ್ಲಿ ಬ್ರಹ್ಮೋಸ್, ಆಕಾಶ್ ಮತ್ತು ನಿರ್ಭಯಾ ನಿಯೋಜನೆ ; ಹೆಚ್ಚುತ್ತಿದೆ ಗಡಿ ಟೆನ್ಷನ್!

LACಯಲ್ಲಿ ಬ್ರಹ್ಮೋಸ್, ಆಕಾಶ್ ಮತ್ತು ನಿರ್ಭಯಾ ನಿಯೋಜನೆ ; ಹೆಚ್ಚುತ್ತಿದೆ ಗಡಿ ಟೆನ್ಷನ್!

lords of rings : ಈ “ಗಿಮ್ಲಿ’ ಚಿತ್ರದಲ್ಲಿರುವ ವಿಶೇಷತೆ ಬಗ್ಗೆ ಗೊತ್ತಾ?

lords of rings : ಈ “ಗಿಮ್ಲಿ’ ಚಿತ್ರದಲ್ಲಿರುವ ವಿಶೇಷತೆ ಬಗ್ಗೆ ಗೊತ್ತಾ?

ಆಕಸ್ಮಿಕ ವಿದ್ಯುತ್ ತಗುಲಿ ಎತ್ತಿನೊಂದಿಗೆ ಇಬ್ಬರು ರೈತರ ಸಾವು

ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ವಿದ್ಯುತ್ ಅವಘಡ ಎತ್ತು ಸೇರಿ ಇಬ್ಬರು ರೈತರ ಸಾವು






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಕಸ್ಮಿಕ ವಿದ್ಯುತ್ ತಗುಲಿ ಎತ್ತಿನೊಂದಿಗೆ ಇಬ್ಬರು ರೈತರ ಸಾವು

ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ವಿದ್ಯುತ್ ಅವಘಡ ಎತ್ತು ಸೇರಿ ಇಬ್ಬರು ರೈತರ ಸಾವು

ಮಂತ್ರಾಲಯ ವಿದ್ಯಾಪೀಠದ ಮಕ್ಕಳ ಬಯಕೆಯನ್ನು ಈಡೇರಿಸಿದ ಸುಬುಧೇಂದ್ರ ಶ್ರೀಗಳು..!

ಮಂತ್ರಾಲಯ ವಿದ್ಯಾಪೀಠದ ಬಾಲಕನ ಬಯಕೆಯನ್ನು ಈಡೇರಿಸಿದ ಸುಬುಧೇಂದ್ರ ಶ್ರೀಗಳು..!

madhu

ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಗೂ ಕೋವಿಡ್ ಸೋಂಕು ದೃಢ!

ಮೋದಿ ಇರೋದರಿಂದ ನಾವಿದ್ದೇವೆ! ಬಂದ್ ಮಾಡಲು ಬಂದ ರೈತ ಮುಖಂಡರಿಗೆ ವೃದ್ಧ ವ್ಯಾಪಾರಿಯ ತಿರುಗೇಟು

ಮೋದಿ ಇರೋದರಿಂದ ನಾವಿದ್ದೇವೆ! ಬಂದ್ ಮಾಡಲು ಬಂದ ರೈತ ಮುಖಂಡರಿಗೆ ವೃದ್ಧ ವ್ಯಾಪಾರಿಯ ತಿರುಗೇಟು

ಎದೆನೋವು: ಸಂಸದ ಉಮೇಶ್ ಜಾಧವ್ ಆಸ್ಪತ್ರೆಗೆ ದಾಖಲು

ಎದೆನೋವು: ಸಂಸದ ಉಮೇಶ್ ಜಾಧವ್ ಆಸ್ಪತ್ರೆಗೆ ದಾಖಲು

MUST WATCH

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆ

udayavani youtube

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ Moodbidri, BC Roadನಲ್ಲಿ Protest

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆ

udayavani youtube

JD(s) workers clash with Police at Shimoga anti farm bill protest | Udayavani

udayavani youtube

ಹೀರೆಕಾಯಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ



ಹೊಸ ಸೇರ್ಪಡೆ

ಕೃಷ್ಣ ಜನ್ಮಸ್ಥಾನ ಕೇಸು: ಅ.15ಕ್ಕೆ ತೀರ್ಮಾನ

ಕೃಷ್ಣ ಜನ್ಮಸ್ಥಾನ ಕೇಸು: ಅ.15ಕ್ಕೆ ತೀರ್ಮಾನ

ಲೈಂಗಿಕ ದೌರ್ಜನ್ಯ, ಸುಲಿಗೆ: ಅಪರಾಧಿಗೆ 7 ವರ್ಷ ಶಿಕ್ಷೆ

ಲೈಂಗಿಕ ದೌರ್ಜನ್ಯ, ಸುಲಿಗೆ: ಅಪರಾಧಿಗೆ 7 ವರ್ಷ ಶಿಕ್ಷೆ

ಕಿಶನ್ – ಪೊಲಾರ್ಡ್ ಬ್ಯಾಟಿಂಗ್ ಅಬ್ಬರಕ್ಕೆ ಮ್ಯಾಚ್ ‘ಟೈ’ ; ಸೂಪರ್ ಓವರ್ ನಲ್ಲಿ ಗೆದ್ದ RCB

ಕಿಶನ್ – ಪೊಲಾರ್ಡ್ ಬ್ಯಾಟಿಂಗ್ ಅಬ್ಬರಕ್ಕೆ ಮ್ಯಾಚ್ ‘ಟೈ’ ; ಸೂಪರ್ ಓವರ್ ನಲ್ಲಿ ಗೆದ್ದ RCB

ಬ್ಯಾಂಕ್‌ಗಳಲ್ಲಿ ಅರ್ಜಿಗಳ ತ್ವರಿತ ವಿಲೇವಾರಿಗೆ ಸೂಚನೆ

ಬ್ಯಾಂಕ್‌ಗಳಲ್ಲಿ ಅರ್ಜಿಗಳ ತ್ವರಿತ ವಿಲೇವಾರಿಗೆ ಸೂಚನೆ

ಕೊಡಗು ಜಿಲ್ಲೆಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಕೊಡಗು ಜಿಲ್ಲೆಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.