ಎತ್ತಿನ ಹೊಳೆಗೆ ಹಸಿರು ನಿಶಾನೆ


Team Udayavani, Oct 7, 2017, 8:11 AM IST

07-4.jpg

ಬೆಂಗಳೂರು/ಮಂಗಳೂರು: ವಿವಾದಿತ ಎತ್ತಿನಹೊಳೆ ಯೋಜನೆಯ ಮೊದಲ ಹಂತಕ್ಕೆ ದೆಹಲಿಯ ರಾಷ್ಟ್ರೀಯ
ಹಸಿರು ನ್ಯಾಯಾಧಿಕರಣ “ಗ್ರೀನ್‌ ಸಿಗ್ನಲ್‌’ ತೋರಿಸಿದೆ. ಈ ಮೂಲಕ ಯೋಜನೆಗೆ ಇದ್ದ ದೊಡ್ಡ ಆತಂಕ ನಿವಾರಣೆಯಾಗಿದ್ದು, 2018ರ ಫೆಬ್ರವರಿಯಲ್ಲಿ ಯೋಜನೆಯ ಮೊದಲ ಹಂತ ಪೂರ್ಣಗೊಳಿಸಲಾಗುವುದು ಎಂದು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಕೆ. ಜೈಪ್ರಕಾಶ್‌ ತಿಳಿಸಿದರು.

ಉದ್ದೇಶಿತ ಯೋಜನೆಯು ಬರಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವುದಾಗಿದ್ದರಿಂದ ಅರಣ್ಯ
ಮತ್ತು ಪರಿಸರ ಸಚಿವಾಲಯದ ಅನುಮತಿಯ ಅವಶ್ಯಕತೆ ಇಲ್ಲ ಎಂದು ನಿಗಮದ ವಾದವನ್ನು ಪುರಸ್ಕರಿಸಿದ
ನ್ಯಾಯಾಧಿಕರಣ, ಎತ್ತಿನಹೊಳೆ ಯೋಜನೆ ಮುಂದುವರಿ  ಸಲು ಅನುಮತಿ ನೀಡಿದೆ ಎಂದು ಅವರು ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯು 13.93 ಹೆಕ್ಟೇರ್‌ ಪಶ್ಚಿಮಘಟ್ಟದ ಅರಣ್ಯ ಪ್ರದೇಶದಲ್ಲಿ ಹಾದುಹೋಗುತ್ತದೆ. ಅಷ್ಟೇ ಅಲ್ಲ, ಕೆರೆ ತುಂಬಿಸುವ ಈ ಯೋಜನೆಯು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಆದರೆ, ಈ ಸಂಬಂಧ ಅರಣ್ಯ ಮತ್ತು ಪರಿಸರ ಸಚಿವಾಲಯದ ಅನುಮತಿ ಪಡೆದಿಲ್ಲ ಎಂದು ಆಕ್ಷೇಪಿಸಿ ಕೆ.ಎನ್‌. ಸೋಮಶೇಖರ್‌ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಹಸಿರು ನ್ಯಾಯಾಧಿಕರಣ ವಜಾಗೊಳಿಸಿದೆ ಎಂದು ಸ್ಪಷ್ಟಪಡಿಸಿದರು.

ಅಂತಿಮ ಆದೇಶ: ಇದು ಮಧ್ಯಂತರ ಆದೇಶವೋ  ಅಥವಾ ಅಂತಿಮ ಆದೇಶವೋ ಎಂಬ ಸುದ್ದಿಗಾರರ
ಪ್ರಶ್ನೆಗೆ ಉತ್ತರಿಸಿದ ಜೈಪ್ರಕಾಶ್‌, ಇದು ಅಂತಿಮ ಆದೇಶವೇ ಆಗಿದೆ ಎಂದು ಸ್ಪಷ್ಟವಾಗಿ ಹೇಳಿದರು. ಆದರೆ, ಔಪಚಾರಿಕವಾಗಿ ನ್ಯಾಯಾಧಿಕರಣವು ಕೆಲವು ನಿರ್ದೇಶನಗಳನ್ನು ನೀಡುವುದು ಸಹಜ. ವಾರದಲ್ಲಿ ವಿವರವಾದ ಆದೇಶ ಪ್ರತಿ ಕೈಸೇರಲಿದೆ. ಯೋಜನೆಗೆ ಸಂಬಂಧಿಸಿದಂತೆ ಇನ್ನೂ ಎರಡು ಆಕ್ಷೇಪಣಾ ಅರ್ಜಿಗಳು ನ್ಯಾಯಾಲಯದಲ್ಲಿ  ವಿಚಾರಣೆ ಹಂತದಲ್ಲಿವೆ. ಆದರೆ, ಆ ಅರ್ಜಿಗಳು ಕೂಡ ಈ ಮೇಲಿನ ಅಂಶಗಳಡಿ ಸಲ್ಲಿಕೆಯಾಗಿರುವುದರಿಂದ ನಿಗಮದ ಪರ ತೀರ್ಪು ಬರಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಫೆಬ್ರವರಿಗೆ ಮೊದಲ ಹಂತ ಅಂತ್ಯ: ಇಡೀ ಯೋಜನೆ ಒಟ್ಟಾರೆ ಮೂರು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಎತ್ತಿನಹೊಳೆಯಿಂದ ನೀರನ್ನು ಮೇಲಕ್ಕೆತ್ತಿ ಸಕಲೇಶಪುರದವರೆಗೂ ತರಲಾಗುವುದು. ಇದಕ್ಕಾಗಿ
3,760 ಕೋಟಿ ರೂ. ಮೀಸಲಿಟ್ಟಿದ್ದು, ಈ ಪೈಕಿ 2,280 ಕೋಟಿ ರೂ. ಖರ್ಚಾಗಿದೆ. ಶೇ. 70ರಷ್ಟು ಕಾಮಗಾರಿ
ಪ್ರಗತಿಯಾಗಿದ್ದು, ಫೆಬ್ರವರಿ ಅಂತ್ಯಕ್ಕೆ ಪೂರ್ಣಗೊಳಿಸುವ ಗುರಿ ಇದೆ ಎಂದು ಮಾಹಿತಿ ನೀಡಿದರು. ಎರಡನೇ ಹಂತದಲ್ಲಿ ಬೈರಗೊಂಡ ಬಳಿ ಜಲಾಶಯ ನಿರ್ಮಿಸಿ, ಅಲ್ಲಿಗೆ ಈ ನೀರನ್ನು ಹರಿಸಲಾಗುವುದು. ನಂತರ ಹಂಚಿಕೆ ಮಾಡಲಾಗುವುದು. ಒಟ್ಟಾರೆ 246 ಕಿ.ಮೀ. ದೂರದಿಂದ ನೀರು ತರಲಾಗುತ್ತಿದ್ದು, ಈ ಮಾರ್ಗದಲ್ಲಿ ನಾಲ್ಕು ಟನಲ್‌ಗ‌ಳು ಬರುತ್ತವೆ. ಏಳು ಹಳ್ಳಿಗಳನ್ನು ಸ್ಥಳಾಂತರಿಸಬೇಕಾಗುತ್ತದೆ. ಹಣದ ಕೊರತೆ ಇಲ್ಲ. ಭೂಸ್ವಾಧೀನ, ಅರಣ್ಯ ಸೇರಿದಂತೆ ಇದ್ದ ಅಡತಡೆಗಳೂ ನಿವಾರಣೆಯಾಗಿವೆ. ಹಾಗಾಗಿ, ಮೂರ್‍ನಾಲ್ಕು ವರ್ಷಗಳಲ್ಲಿ ಇಡೀ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಆಕ್ಷೇಪಗಳೇನು?: ಯೋಜನೆಗೆ ಅಗತ್ಯವಿರುವ ಅರಣ್ಯಭೂಮಿಗಾಗಿ ಅನುಮತಿ ಕೋರಿ ಪರಿಸರ ಮತ್ತು  ಅರಣ್ಯ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿಲ್ಲ. ಪಶ್ಚಿಮಘಟ್ಟದಲ್ಲಿ ಅದರಲ್ಲೂ ಸೂಕ್ಷ್ಮ ವಲಯದಲ್ಲಿ ಬರುವುದರಿಂದ ಪರಿಸರ
ಮತ್ತು ಅರಣ್ಯ ಸಚಿವಾಲಯದ ಅನುಮತಿ ಪಡೆದಿಲ್ಲ. ಯೋಜನೆಯು ವಿಶೇಷವಾಗಿ ಕುಡಿಯುವ ನೀರಿಗೆ
ಸಂಬಂಧಿಸಿಲ್ಲ; ಕೆರೆ ತುಂಬಿಸುವುದರಿಂದ ಸಣ್ಣ ನೀರಾವರಿಗೆ ಬರುತ್ತದೆ. ಹಾಗಾಗಿ, ಪರಿಸರದ ಅನುಮತಿ
ಕಡ್ಡಾಯ. ಯೋಜನೆಯಿಂದ ನೀರಿನ ಲಭ್ಯತೆ ಬಗ್ಗೆ ಅಂದಾಜಿಸುವ ಮಾಹಿತಿ ಅಸಮರ್ಪಕವಾಗಿದೆ. ನದಿಪಾತ್ರದಲ್ಲಿ ವಾಸಿಸುವ ಜನರ ಮೇಲಾಗುವ ಪರಿಣಾಮದ ಬಗ್ಗೆ ಯೋಚಿಸಿಲ್ಲ ಎಂದು ಸೋಮಶೇಖರ್‌ ವಾದ ಮುಂದಿಟ್ಟಿದ್ದರು.

ನಿಗಮದ ವಾದ: ಯೋಜನೆ ಪೂರ್ಣವಾದ ನಂತರ ಕೇವಲ ಜೂನ್‌ 15ರಿಂದ ಅಕ್ಟೋಬರ್‌ 30ರ ಒಳಗೆ 
ಕಾರ್ಯನಿರ್ವಹಿಸಲಿದ್ದು, ಹೆಚ್ಚುವರಿ ನೀರನ್ನು ಮಾತ್ರ ಪಡೆಯಲಾಗುತ್ತಿದೆ. ಯೋಜನೆ ಅಡಿ ಕೆರೆಗಳನ್ನು ಶೇ. 50ರಷ್ಟು ಮಾತ್ರ ತುಂಬಿಸಲಾಗುತ್ತಿದೆ. ಬರಪೀಡಿತ ಪ್ರದೇಶದಲ್ಲಿನ ಅಂತರ್ಜಲಮಟ್ಟ ಹೆಚ್ಚಿಸುವುದು ಇದರ ಉದ್ದೇಶವಾಗಿದ್ದು, ಸಣ್ಣ ನೀರಾವರಿಗೆ ಸಂಬಂಧಿಸಿದ ಚಟುವಟಿಕೆಗಳು ನಡೆಯುವುದೇ ಇಲ್ಲ. ಕುಡಿಯುವ ನೀರಿನ ಯೋಜನೆ ಇದಾಗಿದ್ದರಿಂದ ಪರಿಸರ ಸಚಿವಾಲಯದ ಅನುಮತಿ ಅವಶ್ಯಕತೆ ಇಲ್ಲ. ಅಷ್ಟಕ್ಕೂ ಈ ಯೋಜನೆ 2013ರ ಮಾರ್ಚ್‌ನಲ್ಲಿ ಅನುಮೋದನೆಗೊಂಡಿದ್ದರಿಂದ 2017ರ ಫೆಬ್ರವರಿಯಲ್ಲಿ ಹೊರಡಿಸಿದ ಪರಿಸರ ಪರಿಣಾಮ ಮೌಲ್ಯಮಾಪನ (ಇಐಎ) ಅಧಿಸೂಚನೆ ಅನ್ವಯಿಸುವುದಿಲ್ಲ. ಯೋಜನೆಯಿಂದ ಲಭ್ಯವಾಗುವ ನೀರಿನ ಅಂದಾಜಿನ ಬಗ್ಗೆ ಕೇಂದ್ರ ಜಲ ಆಯೋಗ, ಎನ್‌ಐಎಚ್‌, ಕೆಎಸ್‌ ಎನ್‌ಡಿಎಂಸಿ ಮತ್ತಿತರ ಸಂಸ್ಥೆಗಳಿಂದ ಅಧ್ಯಯನ ನಡೆಸಲಾಗಿದೆ ಎಂದು ಹೇಳಿತ್ತು.  ಎನ್‌ಜಿಟಿ ಮುಂದೆ ವಿಡಿಯೊ ಯೋಜನೆ ಕುರಿತು ಅನಿಮೇಷನ್‌ ವಿಡಿಯೊ ಸಿದ್ಧಪಡಿಸಿ, ಎನ್‌ಜಿಟಿ ಮುಂದೆ ಸಾದರ 
ಪಡಿಸಲಾಯಿತು. ಈ ಪ್ರಯೋಗ ಇದೇ ಮೊದಲ ಬಾರಿ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೈಪ್ರಕಾಶ್‌ ತಿಳಿಸಿದರು. ಎತ್ತಿನಹೊಳೆ ಯೋಜನೆ, ಇದರಿಂದಾಗುವ ಪ್ರಯೋಜನಗಳು ಮತ್ತಿತರ ಮಾಹಿತಿಗಳನ್ನು ಒಳಗೊಂಡ ಅನಿಮೇಷನ್‌ ವಿಡಿಯೊ ರೂಪಕವನ್ನು ನ್ಯಾಯಾಧೀಕರಣದ ಮುಂದೆ ಪ್ರದರ್ಶಿಸಲಾಯಿತು ಎಂದರು. 

ಇನ್ನೂ ಅಂತಿಮ ಆದೇಶ ಬಂದಿಲ್ಲ. ಕೇವಲ ಷರತ್ತುಬದ್ಧ ಅನುಮತಿಯನ್ನು ನ್ಯಾಯಾಧೀಕರಣ ನೀಡಿದೆ. ಅದೇನೇ ಇರಲಿ, ಜಲ ರಾಷ್ಟ್ರೀಯ ಸಂಪತ್ತು. ಲಭ್ಯವಿರುವ ನೀರನ್ನು ಕೊರತೆ ಇರುವ ಪ್ರದೇಶಗಳಿಗೆ ಪೂರೈಸಲು ಯಾರೂ ಅಡ್ಡಿಪಡಿಸಬಾರದು. ತರಾತುರಿಯಲ್ಲಿ ಯೋಜನೆ ಅನುಷ್ಠಾನ ಮಾಡುತ್ತಿರುವುದರಿಂದ ಕೊನೆಯ ಫ‌ಲಾನುಭವಿಗಳಿಗೆ (ಕೋಲಾರ-ಚಿಕ್ಕಬಳ್ಳಾಪುರ) ಅನುಕೂಲವಾಗುವುದಿಲ್ಲ.
●ಆರ್‌. ಆಂಜನೇಯರೆಡ್ಡಿ, ಅಧ್ಯಕ್ಷರು, ಶಾಶ್ವತ ನೀರಾವರಿ ಹೋರಾಟ ಸಮಿತಿ

ಅಂತಿಮ ತೀರ್ಪು ಪ್ರಕಟವಾದ ಬಳಿಕ ವಕೀಲರ ಜತೆ ಚರ್ಚಿಸಿ, ಸುಪ್ರೀಂಕೋರ್ಟ್‌ ಮೊರೆ ಹೋಗುತ್ತೇವೆ. ನಿಜವಾಗಿಯೂ ನೀರು ಕೊಡುವುದಾದರೆ ಯೋಜನೆಗೆ ಅಭ್ಯಂತರ ಇಲ್ಲ.
 ●ಕೆ.ಎನ್‌.ಸೋಮಶೇಖರ್‌, ಅರ್ಜಿದಾರ

3   ಸಾವಿರ ಕೋಟಿ ರೂ. ಎತ್ತಿನಹೊಳೆ ಯೋಜನಾ ವೆಚ್ಚ
03  ಹಂತಗಳ ಯೋಜನೆ
3760 ಕೋಟಿ ರೂ. ಮೊದಲ ಹಂತಕ್ಕೆ ಮೀಸಲು
2280 ಕೋಟಿ ರೂ. ಈಗಾಗಲೇ ಖರ್ಚು
2018ರ ಫೆಬ್ರವರಿಗೆ ಮೊದಲ ಹಂತ ಪೂರ್ಣ
07 ಗ್ರಾಮಗಳು ಸ್ಥಳಾಂತರ (5 ಕೊರಟಗೆರೆ ತಾಲ್ಲೂಕು, 2 ದೊಡ್ಡಬಳ್ಳಾ‌ುರದಲ್ಲಿ)
3-4 ವರ್ಷಗಳಲ್ಲಿ ಇಡೀ  ಯೋಜನೆಪೂರ್ಣಗೊಳಿಸುವ ಗುರಿ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.