ಯೋಗೇಶ್ವರ್ ನನಗೆ ನೂರಾರು ಕೋಟಿ ಆಫರ್ ನೀಡಿದ್ದರು: ಕೈ ಶಾಸಕ ಅನಿಲ್
Team Udayavani, Sep 16, 2018, 12:13 PM IST
ಮೈಸೂರು: ಮೈತ್ರಿ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಹುನ್ನಾರ ನಡೆಸಿದ್ದು ,ಆಪರೇಷನ್ ಕಮಲಕ್ಕೆ ಯತ್ನಿಸುತ್ತಿದೆ ಎನ್ನುವ ಆರೋಪ, ಪ್ರತ್ಯಾರೋಪಗಳ ಬೆನ್ನಲ್ಲೇ ಹೊಸಕೋಟೆಯ ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಅವರು ಇನ್ನೊಂದು ಬಾಂಬ್ ಸಿಡಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅನಿಲ್ ನನಗೆ ಸಿ.ಪಿ.ಯೋಗೇಶ್ವರ್ ಅವರು ಕರೆ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಬಿಜೆಪಿಗೆ ಸೇರ್ಪಡೆಯಾಗುವಂತೆ ಆಹ್ವಾನ ನೀಡಿದ್ದರು. ಬಿಜೆಪಿ ನನಗೆ ಉಪಚುನಾವಣೆಯಲ್ಲಿ ಟಿಕೆಟ್ ಮತ್ತು ಸಚಿವ ಸ್ಥಾನದ ಭರವಸೆಯನ್ನೂ ನೀಡಿತು ಎಂದು ನೇರ ಆರೋಪ ಮಾಡಿದ್ದಾರೆ.
3 ತಿಂಗಳ ಹಿಂದೆ ಸರ್ಕಾರ ರಚಿಸುವ ವೇಳೆಯಲ್ಲೂ ನನ್ನನ್ನು ಸಂಪರ್ಕಿಸಿದ್ದರು. ನೂರಾರು ಕೋಟಿ ರೂಪಾಯಿ ಆಫರ್ ನೀಡಿದ್ದರು ಎಂದರು.
ನನಗೆ ಕಷ್ಟ ಕಾಲದಲ್ಲಿ ಕೈ ಹಿಡಿದದ್ದು ಕಾಂಗ್ರೆಸ್ ಪಕ್ಷ. ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಆಫರ್ ತಿರಸ್ಕರಿಸಿದ್ದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂದಾರ್ತಿ ಸಮೀಪ ಕಾರಿನಲ್ಲಿ ಭಸ್ಮವಾಗಿದ್ದು ಬೆಂಗಳೂರಿನ ನವ ಜೋಡಿ!
ಪರಿಷತ್ : ಹಿಂದುಳಿದ ವರ್ಗ,ಮುಸ್ಲಿಂ ಅಥವಾ ಕ್ರೈಸ್ತರಿಗೆ ಅವಕಾಶಕ್ಕೆ ಸಿದ್ದರಾಮಯ್ಯ ಮನವಿ
ಅಲ್ಲಿ ಲವ್- ಇಲ್ಲಿ ಮದುವೆ: ತಾಳಿ ಕಟ್ಟುವ ವೇಳೆ ಮದುವೆಗೆ ‘ನೋ ‘ಎಂದು ವಧುವಿನ ಹೈಡ್ರಾಮಾ
ಹಿಂದೂ ಸಮಾಜವನ್ನು ರಕ್ಷಣೆ ಮಾಡುವ ಉದ್ದೇಶದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ: ಈಶ್ವರಪ್ಪ
ಮಳೆ ಅನಾಹುತ : 8 ವಲಯಗಳ ಕಾರ್ಯಪಡೆಗೆ ಸಚಿವರುಗಳ ನೇತೃತ್ವ