Udayavni Special

ಹಳ್ಳಿ ಹಸನಾಗಲಿ: ಗ್ರಾಮ ಕಟ್ಟುವ ಕೆಲಸದಲ್ಲಿ ಯುವ ಜನರು ಕೈಜೋಡಿಸಬೇಕು


Team Udayavani, Dec 3, 2020, 6:35 AM IST

ಹಳ್ಳಿ ಹಸನಾಗಲಿ: ಗ್ರಾಮ ಕಟ್ಟುವ ಕೆಲಸದಲ್ಲಿ ಯುವ ಜನರು ಕೈಜೋಡಿಸಬೇಕು

ಸಾಂದರ್ಭಿಕ ಚಿತ್ರ

ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯದ ಗ್ರಾಮ ಸರಕಾರಗಳ ಚುಕ್ಕಾಣಿ ಹಿಡಿಯುವವರಿಗಾಗಿ ಚುನಾವಣೆ ನಡೆಯಲಿದೆ. ಕೊರೊನಾದಂಥ ಸಂಕಷ್ಟದ ಸಮಯದಲ್ಲಿ ಗ್ರಾಮಗಳ ಭವಿಷ್ಯ ನಿರ್ಧರಿಸುವ ಈ ಚುನಾವಣೆ ನಡೆಯುತ್ತಿರುವುದು ವಿಶೇಷ. ಈ ಚುನಾವಣೆಯಲ್ಲಿ ಹೆಚ್ಚು ವಿದ್ಯಾವಂತರು, ಯುವ ಜನರು ಭಾಗಿಯಾಗಲಿ ಎಂಬುದು “ಉದಯವಾಣಿ’ ಆಶಯ.

ಗ್ರಾಮ ಪಂಚಾಯತ್‌ ಚುನಾವಣೆ ಎಂದರೆ ಯುವ ಜನತೆಯಲ್ಲಿ ಆಸಕ್ತಿ ಅಷ್ಟಕ್ಕಷ್ಟೇ. ಇದಕ್ಕೆ ಅರಿವಿನ ಕೊರತೆ ಒಂದು ಕಾರಣವಾದರೆ, ಗ್ರಾ.ಪಂ.ಗಳ ವ್ಯಾಪ್ತಿ ಚಿಕ್ಕದು ಎಂಬ ಔದಾಸೀನ್ಯ ಮತ್ತೂಂದು ಕಾರಣ. ಆದರೆ ತನ್ನ ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳಲು ಒಬ್ಬ ಶಾಸಕ, ಸಂಸದನಿಗಿಂತಲೂ ಹೆಚ್ಚಿನ ಅಧಿಕಾರ – ಅವಕಾಶ ಒಬ್ಬ ಗ್ರಾಮ ಪಂಚಾಯತ್‌ ಸದಸ್ಯ ಇಲ್ಲವೇ ಅಧ್ಯಕ್ಷನಿಗೆ ಇರುತ್ತದೆ ಎಂಬ ಸಂಗತಿ ಹೆಚ್ಚಿನವರಿಗೆ ತಿಳಿದಿಲ್ಲ.

ಈ ಬಾರಿಯ ಗ್ರಾ.ಪಂ. ಚುನಾವಣೆ ವಿಶೇಷ ಸಂದರ್ಭದಲ್ಲಿ ನಡೆಯುತ್ತಿದೆ. ಅದರಲ್ಲೂ ಈ ಬಾರಿ ಕೊರೊನಾ ಕಾರಣದಿಂದ ಸಾವಿರಾರು ಯುವ ಜನರು ನಗರಗಳನ್ನು ಬಿಟ್ಟು ಹಳ್ಳಿ ಸೇರಿದ್ದಾರೆ. ಇವರೂ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾದರೆ ಗ್ರಾಮಗಳು ನಿಜವಾದ ಪ್ರಗತಿ ಕಾಣಲು ಸಾಧ್ಯ.

ಪಕ್ಷ ರಹಿತ ವ್ಯವಸ್ಥೆ
ಪಕ್ಷ ರಹಿತ ಚುನಾವಣ ವ್ಯವಸ್ಥೆ ಇರುವ ಗ್ರಾ.ಪಂ. ಚುನಾವಣೆಗಳು ನಿಜ ಅರ್ಥದಲ್ಲಿ ಪಕ್ಷಾತೀತವಾಗಿ, ನಿಷ್ಪಕ್ಷವಾಗಿ ಮತ್ತು ಪಾರ ದರ್ಶಕವಾಗಿ ನಡೆಯಬೇಕು.

ಇದಕ್ಕಾಗಿ ವಿದ್ಯಾವಂತ ಯುವಕ-ಯುವತಿಯರು, ಮುಖ್ಯವಾಗಿ ಶೇ. 50ರಷ್ಟು ಮೀಸಲಾತಿ ಅವಕಾಶ ಹೊಂದಿರುವ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಸ್ಪರ್ಧೆಗೆ ಮುಂದಾಗಬೇಕು. ಮತದಾನದಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಇದು ನೇರವಾಗಿ ಪಕ್ಷ ರಹಿತ ಚುನಾವಣ ವ್ಯವಸ್ಥೆ ಆಗಿದ್ದರೂ, ಗ್ರಾ.ಪಂ. ಚುನಾವಣೆಗಳಲ್ಲಿ ಪರೋಕ್ಷವಾಗಿ ಪಕ್ಷ ರಾಜಕಾರಣದ ಪ್ರಭಾವ ಮತ್ತು ಪ್ರಾಬಲ್ಯ ಇರುವುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇ ಬೇಕು. ಒಂದು ರೀತಿಯಲ್ಲಿ ಗ್ರಾ.ಪಂ.ಗಳು ಅಧಿಕಾರ ರಾಜಕಾರಣದ ಆರಂಭಿಕ ಮೆಟ್ಟಿಲುಗಳೆಂದರೆ ತಪ್ಪಿಲ್ಲ. ಜತೆಗೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ “ಗ್ರಾಮ ಸ್ವರಾಜ್ಯ’ದ ಆಶಯಗಳನ್ನು ಸಾಕಾರ ಗೊಳಿಸುವಲ್ಲಿ ಗ್ರಾ.ಪಂ.ಗಳು ಪ್ರಧಾನ ಭೂಮಿಕೆ ವಹಿಸುತ್ತವೆ.

ಗ್ರಾ.ಪಂ.ಗಳಿಗೆ ಹೊಣೆ ಹೆಚ್ಚು
ಪಂಚಾಯತ್‌ಗಳು ಸ್ಥಳೀಯ ಸರಕಾರಗಳಾಗಿ ಕಾರ್ಯ ನಿರ್ವ ಹಿಸಬೇಕು ಎಂಬುದು ಪಂಚಾಯತ್‌ರಾಜ್‌ ವ್ಯವಸ್ಥೆಯ ಮೂಲ ಆಶಯ. ಸರಕಾರದ ವಿವಿಧ ಇಲಾಖೆಗಳ 29ಕ್ಕೂ ಹೆಚ್ಚು ವಿಷಯಗಳು ಗ್ರಾ.ಪಂ. ಮೂಲಕ ನೇರವಾಗಿ ಕಾರ್ಯಗತಗೊಳ್ಳಬೇಕು ಎಂದು ಪಂಚಾಯತ್‌ರಾಜ್‌ ಕಾಯ್ದೆ ಹೇಳುತ್ತದೆ. ಕೇಂದ್ರ ಸರಕಾರದಿಂದ ಅನುದಾನವು ನೇರವಾಗಿ ಪಂಚಾಯಿತ್‌ಗಳಿಗೆ ಬರುತ್ತದೆ. ಫ‌ಲಾನು ಭವಿಗಳ ಆಯ್ಕೆ, ಕ್ರಿಯಾ ಯೋಜನೆಗಳಿಗೆ ಅನುಮೋದನೆ ಮತ್ತು ಅನು ಷ್ಠಾನದ ವಿಚಾರದಲ್ಲಿ ಗ್ರಾಮ ಸಭೆಯ ತೀರ್ಮಾನವೇ ಅಂತಿಮ.

ಗ್ರಾಮೀಣ ಭಾಗದ ಜನರು ಮೂಲಸೌಕರ್ಯ ಪಡೆದು, ಆ ಮೂಲಕ ಗ್ರಾಮ ಅಭಿವೃದ್ಧಿ ಹೊಂದಲು ಗ್ರಾ.ಪಂ. ಚುನಾವಣೆ ಬಹಳ ಮಹತ್ವದ್ದು. ಪ್ರತಿ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯದ ಎಲ್ಲ ಗ್ರಾಮಗಳ ನಾಗರಿಕರು ಕೈ ಜೋಡಿಸಬೇಕು. ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಬೇಕು. ಒಳ್ಳೆಯ ಪ್ರತಿನಿಧಿಗಳು ಆಯ್ಕೆಯಾಗಬೇಕು. ಆ ಮೂಲಕ ಗ್ರಾಮ ಸ್ವರಾಜ್ಯದ ಕನಸು ನನಸಾಗಬೇಕು.
– ಕೆ.ಎಸ್‌. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ

ಹಳ್ಳಿಗಳಲ್ಲಿ ಪಕ್ಷ ಬೆರೆಸದೆ ಯೋಗ್ಯ ಅಭ್ಯರ್ಥಿಗಳು ಆಯ್ಕೆಯಾಗಬೇಕು. ಮೂರೂ ಪಕ್ಷಗಳು ಇದರ ಬಗ್ಗೆ ಗಮನಹರಿಸಬೇಕು. ನಾವೆಲ್ಲರೂ ಗಾಂಧೀಜಿಯವರ ಕನಸು ನನಸು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು..
– ಎಚ್‌.ಕೆ. ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ

ಯಾರು ಸ್ಪರ್ಧಿಸಬಹುದು?
ಭಾರತೀಯ ನಾಗರಿಕರಾಗಿರುವ ಮತ್ತು ಮತದಾರರ ಪಟ್ಟಿಯಲ್ಲಿ ಹೆಸರು ಇರುವ, 21 ವರ್ಷ ಪೂರೈಸಿರುವ ಪ್ರತಿಯೊಬ್ಬರೂ ಸ್ಪರ್ಧಿಸಲು ಅರ್ಹರು.

ವೆಚ್ಚಕ್ಕೆ ಮಿತಿ ಇಲ್ಲ
ಪಕ್ಷ ರಹಿತ ಚುನಾವಣೆ ಆಗಿರುವುದರಿಂದ ಗ್ರಾ.ಪಂ. ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ವೆಚ್ಚದ ಮಿತಿ ಇರುವುದಿಲ್ಲ. ಆದರೆ ನಾಮಪತ್ರ ಸಲ್ಲಿಸುವಾಗ ಸಾಮಾನ್ಯ ವರ್ಗದ ಅಭ್ಯರ್ಥಿಗಳು 200 ರೂ. ಮತ್ತು ಮೀಸಲಾತಿ ವರ್ಗದ ಅಭ್ಯರ್ಥಿಗಳು 100 ರೂ. ಠೇವಣಿ ಇರಿಸಬೇಕು.

ಪಕ್ಷದ ಚಿಹ್ನೆ , ಭಾವಚಿತ್ರಕ್ಕೆ ಅವಕಾಶವಿಲ್ಲ
ಗ್ರಾ.ಪಂ. ಚುನಾವಣೆಗಳು ಪಕ್ಷರಹಿತ ವಾಗಿ ನಡೆಯುವುದರಿಂದ ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ಮತ್ತು ರಾಜಕೀಯ ಮುಖಂಡರ ಭಾವಚಿತ್ರಗಳನ್ನು ಬಳಸಿ ಪ್ರಚಾರ ಮಾಡದಂತೆ ಅಭ್ಯರ್ಥಿಗಳಿಗೆ ತಿಳಿಸಬೇಕು. ಒಂದು ವೇಳೆ ಅಂತಹ ಪ್ರಚಾರ ನಡೆಸಿದಲ್ಲಿ ಅಭ್ಯರ್ಥಿಯು ಮುದ್ರಿಸಿರುವ ಕರಪತ್ರ, ಬ್ಯಾನರ್‌ ಅಥವಾ ಇನ್ಯಾವುದೇ ಪ್ರಚಾರ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಯೋಗ ನಿರ್ದೇಶನ ನೀಡಿದೆ.

ನೀತಿ ಸಂಹಿತೆ ಮಾರ್ಗಸೂಚಿ ಬಿಡುಗಡೆ
ಗ್ರಾ.ಪಂ. ಸಾರ್ವತ್ರಿಕ ಚುನಾವಣೆ-2020ರ ಸಂಬಂಧ ಚುನಾವಣ ಆಯೋಗವು ನೀತಿ ಸಂಹಿತೆ ಮಾರ್ಗಸೂಚಿ ಹೊರಡಿಸಿದೆ. ಚಾಲ್ತಿಯಲ್ಲಿರುವ ಮತ್ತು ಈಗಾಗಲೇ ಅನುಮೋದನೆಗೊಂಡಿರುವ ಯೋಜನೆ, ಕಾಮಗಾರಿಗಳಿಗೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಆದರೆ ಡಿ. 31ರ ವರೆಗೆ ಹೊಸ ಯೋಜನೆ, ಕಾಮಗಾರಿಗೆ ಅವಕಾಶವಿರುವುದಿಲ್ಲ.

01- ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಥವಾ ಈ ಯೋಜನೆಯಡಿ ಇತರ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬಹುದು. ಆದರೆ ಇಂತಹ ಯೋಜನೆಗಳ ಅನುಷ್ಠಾನವನ್ನು ಸಾರ್ವಜನಿಕ ಸಮಾರಂಭ ಅಥವಾ ರಾಜಕೀಯ ನಾಯಕರ ಉಪಸ್ಥಿತಿಯಲ್ಲಿ ನಡೆಸುವಂತಿಲ್ಲ.
02- ನೆರೆ ಪೀಡಿತ ಮತ್ತು ಪ್ರಕೃತಿ ವಿಕೋಪ ಪೀಡಿತ ಜನ ಸಮುದಾಯಕ್ಕೆ ನೀಡಲಾಗುವ ಪರಿಹಾರ ಅಥವಾ ಸೌಲಭ್ಯಗಳಿಗೆ ನೀತಿ ಸಂಹಿತೆ ಅಡ್ಡಿ ಆಗುವುದಿಲ್ಲ.

03- ಶಾಸಕರು, ಸಚಿವರು, ಸಂಸದರಿಗೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕರ್ತವ್ಯ ನಿರ್ವ ಹಣೆಗೆ ಒದಗಿಸಲಾದ ಸರಕಾರಿ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳುವ ಆವಶ್ಯಕತೆಯಿಲ್ಲ. ಆದರೆ ಚುನಾವಣ ಪ್ರಚಾರಕ್ಕೆ ಸರಕಾರಿ ವಾಹನ ಬಳಸುವಂತಿಲ್ಲ.

04-  ಸಾಂಸ್ಕೃತಿಕ ಮತ್ತು ಧಾರ್ಮಿಕ ಸಭೆ, ಸಮಾರಂಭಗಳನ್ನು ನಡೆಸಲು ಅವಕಾಶ ವಿದೆ. ಆದರೆ ಇಂತಹ ಸಮಾರಂಭಗಳಲ್ಲಿ ರಾಜಕೀಯ ನಾಯಕರು ಪಾಲ್ಗೊಂಡು ಮತದಾರರ ಮೇಲೆ ಪ್ರಭಾವ ಬೀರುವಂತಹ ಯಾವುದೇ ಘೋಷಣೆ ಅಥವಾ ಆಶ್ವಾಸನೆ ನೀಡುವಂತಿಲ್ಲ.

05- ಸಚಿವರು, ಶಾಸಕರು ಕೆಡಿಪಿ ಸಭೆ, ಜನ ಸ್ಪಂದನ ಸಭೆ ನಡೆಸುವಂತಿಲ್ಲ. ಗ್ರಾಮೀಣ ಭಾಗದಲ್ಲಿ ಸಚಿವರು, ಶಾಸಕರು ಯಾವುದೇ ಕಾರ್ಯ ಕ್ರಮ ಆಯೋಜಿಸಿ ಮತದಾರರ ಮೇಲೆ ಪ್ರಭಾವ ಬೀರುವುದು ನಿಷಿದ್ಧ.

06- ಚಾಲ್ತಿ ನೇಮಕಾತಿ ಪ್ರಕ್ರಿಯೆಗಳನ್ನು ನಿಲ್ಲಿ ಸುವ ಅಗತ್ಯವಿಲ್ಲ. ಆದರೆ ಅಂತಿಮ ಪಟ್ಟಿ ಪ್ರಕಟಿಸಬಾರದು. ತಾತ್ಕಾಲಿಕ ಹುದ್ದೆ ನೇಮಕಾತಿಗೆ ಅವ ಕಾಶವಿಲ್ಲ. ತುರ್ತು ಸೇವೆ ಅಗತ್ಯವಿದ್ದಲ್ಲಿ ಆಯೋಗದ ಅನುಮತಿ ಪಡೆಯಬೇಕು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

tdy-2

ಮುಂಬೈ : ಬಾಯ್‌ಫ್ರೆಂಡ್‌ ಜತೆ ಪತ್ನಿ ಪರಾರಿ: ಪತಿ ದೂರು

ಚಿಕ್ಕಬಳ್ಳಾಪುರ : ದ್ವಿತೀಯ ಹಂತದ ಕೋವಿಡ್ ಲಸಿಕೆ ಅಭಿಯಾನ ಆರಂಭ- 2358 ಫಲಾನುಭವಿಗಳಿಗೆ

ಚಿಕ್ಕಬಳ್ಳಾಪುರ : ದ್ವಿತೀಯ ಹಂತದ ಕೋವಿಡ್ ಲಸಿಕೆ ಅಭಿಯಾನ ಆರಂಭ- 2358 ಫಲಾನುಭವಿಗಳಿಗೆ

ರಸ್ತೆ ನಿರ್ಮಾಣ ವಿಚಾರ : ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ : ಹಲವರಿಗೆ ಗಾಯ

ರಸ್ತೆ ನಿರ್ಮಾಣ ವಿಚಾರ : ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ : ಹಲವರಿಗೆ ಗಾಯ

tdy-1

ರಕ್ಷಣಾ ‌ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ .ಜ.20 ರಂದು ಕಾರವಾರ ನೌಕಾನೆಲೆಗೆ ಭೇಟಿ

ಹುದ್ದೆ ನೇಮಕಾತಿಗೆ ವ್ಯಕ್ತಿಯಿಂದ ಹಣ ಸ್ವೀಕರಿಸುತ್ತಿದ್ದ ಮಹಿಳಾ ಅಧಿಕಾರಿ ಎಸಿಬಿ ಬಲೆಗೆ

ಹುದ್ದೆ ನೇಮಕಾತಿಗೆ ವ್ಯಕ್ತಿಯಿಂದ ಹಣ ಸ್ವೀಕರಿಸುತ್ತಿದ್ದ ಮಹಿಳಾ ಅಧಿಕಾರಿ ಎಸಿಬಿ ಬಲೆಗೆ

ಭೀಕರ ರಸ್ತೆ ಅಪಘಾತ ; ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಸಾವು

ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಭೀಕರ ಅಪಘಾತ : ಮೂವರು ಸ್ಥಳದಲ್ಲೇ ಸಾವು

ಮುಂದಿನ ಐಪಿಎಲ್‌ನಲ್ಲಿ ಒಂದು ತಂಡ ಮಾತ್ರ ಹೆಚ್ಚಳ?

ಮುಂದಿನ ಐಪಿಎಲ್‌ನಲ್ಲಿ ಒಂದು ತಂಡ ಮಾತ್ರ ಹೆಚ್ಚಳ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹುದ್ದೆ ನೇಮಕಾತಿಗೆ ವ್ಯಕ್ತಿಯಿಂದ ಹಣ ಸ್ವೀಕರಿಸುತ್ತಿದ್ದ ಮಹಿಳಾ ಅಧಿಕಾರಿ ಎಸಿಬಿ ಬಲೆಗೆ

ಹುದ್ದೆ ನೇಮಕಾತಿಗೆ ವ್ಯಕ್ತಿಯಿಂದ ಹಣ ಸ್ವೀಕರಿಸುತ್ತಿದ್ದ ಮಹಿಳಾ ಅಧಿಕಾರಿ ಎಸಿಬಿ ಬಲೆಗೆ

ಭೀಕರ ರಸ್ತೆ ಅಪಘಾತ ; ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಸಾವು

ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಭೀಕರ ಅಪಘಾತ : ಮೂವರು ಸ್ಥಳದಲ್ಲೇ ಸಾವು

ಸಂಡೂರಿನ ವ್ಯಕ್ತಿ ಮೃತಪಟ್ಟಿರುವುದು ಕೋವಿಡ್ ಲಸಿಕೆಯಿಂದಲ್ಲ, ಹೃದಯಾಘಾತದಿಂದ : ಸುಧಾಕರ್‌

ಸಂಡೂರಿನ ವ್ಯಕ್ತಿ ಮೃತಪಟ್ಟಿರುವುದು ಕೋವಿಡ್ ಲಸಿಕೆಯಿಂದಲ್ಲ, ಹೃದಯಾಘಾತದಿಂದ : ಸುಧಾಕರ್‌

ಗೋಹತ್ಯೆ ನಿಷೇಧ ಕಾಯ್ದೆ: ಕರಂಬಳ್ಳಿಯಲ್ಲಿ ಮುಖ್ಯಮಂತ್ರಿ ಗೋಪೂಜೆ

ಗೋಹತ್ಯೆ ನಿಷೇಧ ಕಾಯ್ದೆ: ಕರಂಬಳ್ಳಿಯಲ್ಲಿ ಮುಖ್ಯಮಂತ್ರಿಗಳಿಂದ ಗೋಪೂಜೆ

ವ್ಯಾಪಾರಿಯಿಂದ ಹಣ ದೋಚಿದ ಪ್ರಕರಣ : ಹನೂರು ಪೊಲೀಸರಿಂದ 4 ಮಂದಿ ಆರೋಪಿಗಳ ಬಂಧನ

ವ್ಯಾಪಾರಿಯಿಂದ ಹಣ ದೋಚಿದ ಪ್ರಕರಣ : ಹನೂರು ಪೊಲೀಸರಿಂದ 4 ಮಂದಿ ಆರೋಪಿಗಳ ಬಂಧನ

MUST WATCH

udayavani youtube

KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ | Udayavani

udayavani youtube

Whatsapp ಅನ್ನು ಓವರ್ ಟೇಕ್ ಮಾಡಿದ ಸಿಗ್ನಲ್!!??

udayavani youtube

ದ.ಕ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚಾಲನೆ

udayavani youtube

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಅಭಿಯಾನ; ಪ್ರಥಮ ಡೋಸ್ ನೀಡಿ ಚಾಲನೆ

udayavani youtube

ಉಡುಪಿಯಲ್ಲಿ ಕೋರೋನಾ ಲಸಿಕೆ ಪಡೆದ ಮೊದಲ ವ್ಯಕ್ತಿಯ ಮಾತು

ಹೊಸ ಸೇರ್ಪಡೆ

ಖಾಲಿ ಜಾಗ ಗುರುತಿಸಿ ಶೀಘ್ರ ಪಾರ್ಕಿಂಗ್‌ಗೆ ವ್ಯವಸ್ಥೆ: ವೇದವ್ಯಾಸ ಕಾಮತ್‌

ಖಾಲಿ ಜಾಗ ಗುರುತಿಸಿ ಶೀಘ್ರ ಪಾರ್ಕಿಂಗ್‌ಗೆ ವ್ಯವಸ್ಥೆ: ವೇದವ್ಯಾಸ ಕಾಮತ್‌

ಸುಳ್ಯ: ನಗರದಲ್ಲಿ ಅಲೆಮಾರಿಗಳ ಕಾಟ

ಸುಳ್ಯ: ನಗರದಲ್ಲಿ ಅಲೆಮಾರಿಗಳ ಕಾಟ

ಕಡಬ: ಆರಂಭವಾಗಬೇಕಿದೆ ಸ.ಪ. ಕಾಲೇಜು

ಕಡಬ: ಆರಂಭವಾಗಬೇಕಿದೆ ಸ.ಪ. ಕಾಲೇಜು

ಕಾರ್ಕಳ ಕಜೆ ಅಕ್ಕಿ, ಬಿಳಿ ಬೆಂಡೆ ಬ್ರ್ಯಾಂಡಿಂಗ್‌ ಬಿಡುಗಡೆ

ಕಾರ್ಕಳ ಕಜೆ ಅಕ್ಕಿ, ಬಿಳಿ ಬೆಂಡೆ ಬ್ರ್ಯಾಂಡಿಂಗ್‌ ಬಿಡುಗಡೆ

ಕುಂದಾಪುರ ಕೋಡಿ ಸೇತುವೆ ಕಾಮಗಾರಿ ವಾರದಲ್ಲಿ ಆರಂಭ

ಕುಂದಾಪುರ ಕೋಡಿ ಸೇತುವೆ ಕಾಮಗಾರಿ ವಾರದಲ್ಲಿ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.