ಪಾಕಿಸ್ಥಾನ : ಗೂಡ್ಸ್‌ ರೈಲಿಗೆ ಪ್ರಯಾಣಿಕರ ರೈಲು ಢಿಕ್ಕಿ; 11 ಸಾವು, 60 ಜಖಂ

Team Udayavani, Jul 11, 2019, 11:22 AM IST

ಲಾಹೋರ್‌ : ಪಾಕಿಸ್ಥಾನದ ಪೂರ್ವ ಪಂಜಾಬ್‌ ಪ್ರಾಂತ್ಯದಲ್ಲಿ ಇಂದು ಗುರುವಾರ ಬೆಳಗ್ಗೆ ವೇಗವಾಗಿ ಧಾವಿಸುತ್ತಿದ್ದ ಅಕ್‌ಬರ್‌ ಎಕ್ಸ್‌ಪ್ರೆಸ್‌ ಪ್ರಯಾಣಿಕರ ರೈಲು, ಗೂಡ್ಸ್‌ ರೈಲಿಗೆ ಢಿಕ್ಕಿ ಹೊಡೆದ ಭೀಕರ ಅವಘಡದಲ್ಲಿ 11 ಮಂದಿ ಮೃತಪಟ್ಟು, 60 ಜನರು ಗಾಯಗೊಂಡರು.

ಪೂರ್ವ ಪಂಜಾಬ್‌ ಪ್ರಾಂತ್ಯದ ಸಾದಿಕಾಬಾದ್‌ ತೆಹಶೀಲ್‌ ನ ವಾಲಹಾರ್‌ ರೈಲು ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್‌ ರೈಲಿಗೆ ಕ್ವೆಟ್ಟಾ ಕಡೆಗೆ ಹೋಗುತ್ತಿದ್ದ ಪ್ರಯಾಣಿಕರ ರೈಲು ಢಿಕ್ಕಿಯಾಯಿತು ಎಂದು ರೇಡಿಯೋ ಪಾಕಿಸ್ಥಾನ್‌ ವರದಿ ಮಾಡಿದೆ.

ಗೂಡ್ಸ್‌ ಟ್ರೈನ್‌ ಲೂಪ್‌ ಲೈನ್‌ ನಲ್ಲಿ ನಿಂತಿತ್ತು. ಮುಖ್ಯ ಲೈನಿನಲ್ಲಿ ಹೋಗಬೇಕಾಗಿದ್ದ ಅಕ್‌ಬರ್‌ ಎಕ್ಸ್‌ಪ್ರೆಸ್‌ ರೈಲು ತಪ್ಪು ಲೈನ್‌ನಲ್ಲಿ ಹೋದದ್ದೇ ಭೀಕರ ಅವಘಡಕ್ಕೆ ಕಾರಣವಾಯಿತು ಎಂದು ವರದಿ ಹೇಳಿದೆ.

ಮೃತರಲ್ಲಿ ಓರ್ವ ಮಹಿಳೆ ಮತ್ತು ಎಂಟು ಪುರುಷರು ಸೇರಿದ್ದಾರೆ; 9 ಮಹಿಳೆಯರು ಮತ್ತು 11 ಮಕ್ಕಳು ಗಾಯಾಳುಗಳಲ್ಲಿ ಸೇರಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ಅಧಿಕಾರಿ ರಹೀಮ್‌ ಯಾರ್‌ ಖಾನ್‌ ಉಮರ್‌ ಸಲಾಮತ್‌ ತಿಳಿಸಿದ್ದಾರೆ.

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ