ಕೋವಿಡ್-19 ಗೆದ್ದ 113 ವರ್ಷದ ಸ್ಪ್ಯಾನಿಷ್ ಮಹಿಳೆ: ಇವರ ಆರೋಗ್ಯದ ಗುಟ್ಟೇನು ಗೊತ್ತಾ ?
Team Udayavani, May 13, 2020, 9:00 AM IST
ಮ್ಯಾಡ್ರಿಡ್: ಸ್ಪೇನ್ ನ 113 ವರ್ಷದ ವೃದ್ಧೆಯೊಬ್ಬರು ಕೋವಿಡ್ -19 ವೈರಸ್ ಅನ್ನು ಜಯಿಸಿದ ಘಟನೆ ನಡೆದಿದೆ. ಇವರು ವಾಸವಿರುವ ಮನೆಯ ಸುತ್ತಮುತ್ತಲಿನಲ್ಲಿ ಹಲವು ವ್ಯಕ್ತಿಗಳು ಸೊಂಕಿನಿಂದ ಮೃತಪಟ್ಟಿದ್ದು ಕಳೆದ ಏಪ್ರಿಲ್ ನಲ್ಲಿ ಈ ವೃದ್ಧೆ ಕೂಡ ಸೋಂಕಿಗೆ ತುತ್ತಾಗಿದ್ದರು ಎಂದು ಎನ್ ಡಿಟಿವಿ ತಿಳಿಸಿದೆ.
ಮರಿಯಾ ಬ್ರೆನಾಯ್ಸ್ ಎಂಬ ಈ ಮಹಿಳೆ 1907ರಲ್ಲಿ ಅಮೆರಿಕಾದಲ್ಲಿ ಜನಿಸಿದ್ದು ಕಳೆದ 20 ವರ್ಷಗಳಿಂದ ಸ್ಪೇನ್ ನಲ್ಲಿ ನೆಲೆಸಿದ್ದಾರೆ. ಈ ದೇಶದಲ್ಲಿರುವ ಅತೀ ಹಿರಿಯ ವ್ಯಕ್ತಿ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಏಪ್ರಿಲ್ ನಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಾಗ ಅವರನ್ನು ಪ್ರತ್ಯೇಕ ಕೋಣೆಯಲ್ಲಿ ಐಶೋಲೇಶನ್ ಮಾಡಲಾಗಿತ್ತು. ಇವರನ್ನು ಪರೀಕ್ಷಿಸಲು ಒಬ್ಬರು ಆರೋಗ್ಯ ಸಿಬ್ಬಂದಿಗೆ ಮಾತ್ರ ಅವಕಾಶವಿತ್ತು. ಕಳೆದ ವಾರ ಬಂದ ವರದಿ ನೆಗೆಟಿವ್ ಎಂದಿದ್ದು, ಇದೀಗ ಸೋಂಕಿನಿಂದ ಗುಣಮುಖರಾಗಿ, ಆರೋಗ್ಯದಿಂದಿದ್ದಾರೆ ಎಂದು ಸ್ಪೇನ್ ಮಾಧ್ಯಮಗಳು ತಿಳಿಸಿವೆ.
ಮರಿಯಾ ಬ್ರೆನಾಯ್ಸ್ ಅವರಿಗೆ ಮೂರು ಜನ ಮಕ್ಕಳಿದ್ದು , ಇವರ ಸುದೀರ್ಘ ಜೀವನದ ರಹಸ್ಯವೇನು ಎಂಬ ಪ್ರೆಶ್ನೆಯನ್ನು ಯಾರಾದರೂ ಕೇಳಿದರೆ ನಗುಮೊಗದಿಂದಲೇ ‘ಉತ್ತಮ ಆರೋಗ್ಯ” ಎಂದು ಉತ್ತರಿಸುತ್ತಾರೆ.
ಸ್ಪೇನ್ ಕೋವಿಡ್ ಆರ್ಭಟಕ್ಕೆ ತತ್ತರಿಸಿ ಹೋಗಿದ್ದು ಇಲ್ಲಿ 27 ಸಾವಿರಕ್ಕಿಂತ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ