ಪುಪುವಾ ನ್ಯೂಗಿನಿಯಾ: ಬುಡಕಟ್ಟು ಗುಂಪುಗಳ ಕಾಳಗಕ್ಕೆ ಇಬ್ಬರು ಗರ್ಭಿಣಿಯರ ಸಹಿತ 24 ಬಲಿ

Team Udayavani, Jul 10, 2019, 11:34 AM IST

ಪೋರ್ಟ್‌ ಮೋರ್‌ಸ್‌ಬೀ : ಪಪುವಾ ನ್ಯೂಗಿಯಾದ ಅರಾಜಕ ಹೈಲ್ಯಾಂಡ್‌ ಪ್ರದೇಶದಲ್ಲಿ ಬುಡಕಟ್ಟು ಗುಂಪುಗಳ ಕಾಳಗದಲ್ಲಿ ಇಬ್ಬರು ಗರ್ಭಿಣಿಯರ ಸಹಿತ 24 ಮಂದಿ ಹತಾರಾಗಿರುವುದು ವರದಿಯಾಗಿದೆ.

ಘಟನೆಯನ್ನು ಅನುಸರಿಸಿ ಪ್ರಧಾನ ಮಂತ್ರಿ, ಕ್ಷಿಪ ನ್ಯಾಯದ ಭರವಸೆಯನ್ನು ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಪಪುವಾ ನ್ಯೂಗಿನಿಯಾದ ಅತ್ಯಂತ ದುರ್ಗಮ ಪಶ್ಚಿಮ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಸಾಗುತ್ತಿದ್ದ ಬುಡಕಟ್ಟು ಗುಂಪು ಕಾಳಗಕ್ಕೆ 24 ಮಂದಿ ಬಲಿಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಪಪುವಾ ನ್ಯೂಗಿನಿಯಾದಲ್ಲಿ ಕಳೆದ ಹಲವು ಶತಮಾನಗಳಿಂದ ಬುಡಕಟ್ಟು ಗುಂಪುಗಳ ನಡುವೆ ಸಂಘರ್ಷ, ಕಾಳಗ ನಡೆಯುವುದು ಸಾಮಾನ್ಯವಾಗಿದೆ. ವಿಶೇಷವೆಂದರೆ ಈ ಬುಡಕಟ್ಟು ಜನರಿಗೆ ಹೇರಳ ಪ್ರಮಾಣದಲ್ಲಿ ಅತ್ಯಾಧುನಿಕ ಆಟೋಮ್ಯಾಟಿಕ್‌ ಶಸ್ತ್ರಾಸ್ತ್ರಗಳು ಸಿಗುತ್ತಿರುವುದರಿಂದ ಪ್ರತೀ ಬಾರಿ ಸಂಘರ್ಷ, ಕಾಳಗ ಸ್ಫೋಟಗೊಂಡಾಗ ಅತ್ಯಧಿಕ ಸಂಖ್ಯೆಯ ಸಾವು ಸಂಭವಿಸುವುದು ಈಚೆಗೆ ಸಾಮಾನ್ಯವಾಗಿದೆ.

 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ