ಅಮೆರಿಕದ ವಾಲ್ ಮಾರ್ಟ್ ನಲ್ಲಿ ಗುಂಡಿನ ದಾಳಿ, ಮೂವರ ಸಾವು: ವರದಿ

Team Udayavani, Nov 19, 2019, 11:29 AM IST

ವಾಷಿಂಗ್ಟನ್: ಪ್ರತಿಷ್ಠಿತ ವಾಲ್ ಮಾರ್ಟ್ ಮಳಿಗೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಸೋಮವಾರ ಮುಂಜಾನೆ ಒಕ್ಲಹೋಮದಲ್ಲಿ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ವಾಲ್ ಮಾರ್ಟ್ ಮುಂಭಾಗದ ವಾಹನ ನಿಲುಗಡೆ ಸ್ಥಳದಲ್ಲಿ ನಡೆದ ಜಗಳದಿಂದಾಗಿ ಈ ಶೂಟೌಟ್ ಘಟನೆ ನಡೆದಿರುವುದಾಗಿ ಡಂಕನ್ ನಗರದ ಪೊಲೀಸ್ ಅಧಿಕಾರಿ ಡಾನೈ ಫೋರ್ಡ್ ತಿಳಿಸಿದ್ದಾರೆ.

ಗುಂಡಿನ ದಾಳಿ ನಡೆಸಿದ ವ್ಯಕ್ತಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಇಬ್ಬರು ಪುರುಷರು, ಓರ್ವ ಮಹಿಳೆ ಸೇರಿದ್ದಾರೆ. ಇಬ್ಬರು ವಾಹನದೊಳಗೆ ಇದ್ದಿದ್ದು, ಒಬ್ಬರು ವಾಹನದ ಹೊರಗೆ ಇದ್ದಿರುವುದಾಗಿ ಅಧಿಕಾರಿ ವಿವರಿಸಿದ್ದಾರೆ. ಸ್ಥಳದಲ್ಲಿ ಹ್ಯಾಂಡ್ ಗನ್ ದೊರೆತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಶೂಟರ್ ವಾಹನದೊಳಗೆ ಇದ್ದ ಇಬ್ಬರ ಮೇಲೆ ಏಕಾಏಕಿ ದಾಳಿ ನಡೆಸಿದ್ದ. ಬಳಿಕ ತನಗೆ ತಾನೇ ಗುಂಡು ಹೊಡೆದುಕೊಂಡು ಸಾವನ್ನಪ್ಪಿರುವುದಾಗಿ ವಿವರಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ