ರೈಲು ಅಪಘಾತದಲ್ಲಿ 32 ಮಂದಿ ಸಾವು : 66 ಜನರಿಗೆ ಗಾಯ!
Team Udayavani, Mar 26, 2021, 6:34 PM IST
ಕೈರೋ(ಈಜಿಪ್ಟ್) : ಎರಡು ರೈಲುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 32 ಮಂದಿ ಸಾವನ್ನಪ್ಪಿದ್ದು, 66 ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಈಜಿಪ್ಟ್ ನಲ್ಲಿ ನಡೆದಿದೆ.
ತಹ್ತಾ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಹತ್ತಾರು ಆಂಬುಲೆನ್ಸ್ ಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ತಿಳಿಸಿದೆ.
ಇತ್ತೀಚೆಗೆ ಈಜಪ್ಟ್ ನಲ್ಲಿ ರೈಲು ಅಪಘಾತಗಳ ಸಂಖ್ಯೆ ಹೆಚ್ಚಿದೆ. ಕಳದೆ ವರ್ಷ ಮಾರ್ಚ್ ತಿಂಗಳಲ್ಲಿ ಎರಡು ಪ್ಯಾಸೆಂಜರ್ ರೈಲುಗಳ ಅಪಘಾತದಿಂದ 13 ಜನರು ಗಾಯಗೊಂಡಿದ್ದರು. ಅಲ್ಲದೆ 2002ರಲ್ಲಿ ರೈಲು ದುರಂತದಲ್ಲಿ ಬರೋಬ್ಬರಿ 373 ಮಂದಿ ಗಾಯಗೊಂಡಿದ್ದರು.