370 ರದ್ದು ವಾಪಸ್‌ ಪಡೆದರೆ, ರಾಜತಾಂತ್ರಿಕ ಕ್ರಮವೂ ವಾಪಸ್‌: ಪಾಕ್‌

Team Udayavani, Aug 8, 2019, 6:10 PM IST

ಇಸ್ಲಾಮಾಬಾದ್‌: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕ್ರಮವನ್ನು ವಾಪಸ್‌ ಪಡೆದುಕೊಂಡರೆ, ನಾವೂ ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧ ತಗ್ಗಿಸಿರುವುದನ್ನು ಮರುಸ್ಥಾಪಿಸುತ್ತೇವೆ ಎಂದು ಪಾಕ್‌ ಹೇಳಿದೆ.

ರಾಜತಾಂತ್ರಿಕ ಕ್ರಮದ ಕುರಿತಾಗಿ ಮರು ಪರಿಶೀಲನೆ ನಡೆಸಬೇಕು ಎಂದು ಭಾರತ ಹೇಳಿದ ಬೆನ್ನಲ್ಲೇ ಪಾಕ್‌ ವಿದೇಶಾಂಗ ಸಚಿವ ಶಾ ಮೊಹಮದ್‌ ಖುರೇಶಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಅವರು ಕಾಶ್ಮೀರ ಕುರಿತ ನಿರ್ಧಾರದಲ್ಲಿ ಮರು ಪರಿಶೀಲನೆ ನಡೆಸುತ್ತಾರೆಯೇ? ಹಾಗಿದ್ದರೆ ನಮ್ಮ ಕ್ರಮದ ಬಗ್ಗೆ ನಾವೂ ಪರಿಶೀಲನೆ ನಡೆಸುತ್ತೇವೆ. ಸಂಬಂಧ ಮರುಸ್ಥಾಪನೆ ಎನ್ನುವುದು ಎರಡೂ ಕಡೆಯಿಂದ ಆಗಬೇಕು. ಅದನ್ನೇ ಶಿಮ್ಲಾ ಒಪ್ಪಂದ ಹೇಳುತ್ತದೆ ಎಂದು ಹೇಳಿದ್ದಾರೆ.

ಕಾಶ್ಮೀರ ವಿಚಾರದಲ್ಲಿ ನಾವು ಯಾವುದೇ ಮಿಲಿಟರಿ ಕ್ರಮದ ಆಯ್ಕೆ ಹೊಂದಿಲ್ಲ. ಆದರೆ ನಮ್ಮ ವಿರುದ್ಧ ದಾಳಿಗಳಾದರೆ ಪ್ರತಿಕ್ರಿಯಿಸುವ ಆಯ್ಕೆಯನ್ನು ಮುಕ್ತವಾಗಿ ಇಟ್ಟಿದ್ದೇವೆ ಎಂದು ಹೇಳಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ