ಲಂಡನ್: ಟ್ರಕ್ ಕಂಟೈನರ್ ನಲ್ಲಿ 39 ಶವಗಳು ಪತ್ತೆ, ಚಾಲಕ ಪೊಲೀಸರ ವಶಕ್ಕೆ
Team Udayavani, Oct 23, 2019, 3:16 PM IST
ಲಂಡನ್: ಬಲ್ಗೇರಿಯಾದಿಂದ ಆಗಮಿಸಿದ್ದ ಟ್ರಕ್ ಕಂಟೈನರ್ ನಲ್ಲಿ ಬುಧವಾರ 39 ಶವಗಳು ಪತ್ತೆಯಾಗಿರುವ ಘಟನೆ ಲಂಡನ್ ಸಮೀಪ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಎಸ್ಸೆಕ್ಸ್ ಪೊಲೀಸರ ಪ್ರಕಾರ, ಪೂರ್ವ ಲಂಡನ್ ನ ಇಂಡಸ್ಟ್ರೀಯಲ್ ಪಾರ್ಕ್ ನಲ್ಲಿ ಟ್ರಕ್ ಕಂಟೈನರ್ ನಲ್ಲಿ ಪತ್ತೆಯಾಗಿರುವ 39 ಜನರೂ ಸಾವನ್ನಪ್ಪಿದ್ದಾರೆ. ಇದರಲ್ಲಿ 38 ವಯಸ್ಕರ ಹಾಗೂ ಒಂದು ಅಪ್ರಾಪ್ತನ ಶವಗಳು ಇದ್ದಿರುವುದಾಗಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಐರ್ಲ್ಯಾಂಡ್ ನ 25 ವರ್ಷದ ಯುವಕನನ್ನು ಶಂಕೆಯ ಮೇಲೆ ಬಂಧಿಸಲಾಗಿದೆ. ಇದೊಂದು ದುರಂತದ ಘಟನೆ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಎಸ್ಸೆಕ್ಸ್ ಪೊಲೀಸ್ ವರಿಷ್ಠಾಧಿಕಾರಿ ಆ್ಯಂಡ್ರ್ಯೂ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು