ಇಲ್ಲಿ ಮರಳು ಕದ್ದಿದ್ದಕ್ಕೆ 6 ವರ್ಷ ಜೈಲೂಟ!

ಇಟೆಲಿಯ ಸಾರ್ಡಿನಿಯಾದ ಚಿಯಾ ಬೀಚ್‌ನಲ್ಲಿ ಮರಳು ಕದ್ದರೆ ಹುಷಾರ್‌

Team Udayavani, Aug 20, 2019, 8:20 PM IST

ಲಂಡನ್‌: ನಮ್ಮಲ್ಲಾದರೆ ಅಷ್ಟೇನಾ.. ಹೋಗಲಿ ಬಿಡಿ, ನಾಲ್ಕು ಲಾರಿಯಾದರೂ ತೆಗೆದುಕೊಂಡು ಹೋಗಲಿ ಎಂದು ಬಿಟ್ಟಿರುತ್ತಿದ್ದರು. ಆದರೆ ಅಲ್ಲಿ ನೋ.. ನೆವರ್‌! ಪರಿಣಾಮ ದಂಪತಿ ಇನ್ನು 6 ವರ್ಷ ಜೈಲೂಟ ಮಾಡುವಂತಾಗಿದೆ. ಇಷ್ಟಕ್ಕೂ ಅವರು ಮಾಡಿದ ತಪ್ಪು ಎಂದರೆ ಸಮುದ್ರ ತೀರದಿಂದ ಮರಳು ಕದ್ದಿದ್ದು!

ಇಟೆಲಿಯ ಸಾರ್ಡಿನಿಯಾ ಎಂಬಲ್ಲಿನ ಚಿಯಾ ಬೀಚ್‌ನಿಂದ ಫ್ರೆಂಚ್‌ ದಂಪತಿ 14 ಪ್ಲಾಸ್ಟಿಕ್‌ ಬಾಟಲಿಗಳಲ್ಲಿ ಹೊಯಿಗೆ ತುಂಬಿಸಿ ಕೊಂಡೊಯ್ದಿದ್ದರಂತೆ. ಒಟ್ಟು 40 ಕೆ.ಜಿ.ಯಷ್ಟು ಮರಳನ್ನು ಅವರು ಕಾರಲ್ಲಿ ಕೊಂಡೊಯ್ದಿದ್ದು, ಹಡಗು ಹತ್ತಲು ಹೊರಟಿದ್ದಾರೆ. ಈ ವೇಳೆ ಅವರು ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿದ್ದಾಗಿ ಪೊಲೀಸರು ಹೇಳಿದ್ದಾರೆ. ದಂಪತಿಗೆ ಇಲ್ಲಿಂದ ಮರಳು ಕೊಂಡೊಯ್ಯುವುದು ಅಪರಾಧ ಎಂದು ಗೊತ್ತಿರಲಿಲ್ಲವಂತೆ. ಆದರೂ ಅವರಿಗೆ 6 ವರ್ಷ ಜೈಲೂಟ ಗ್ಯಾರೆಂಟಿ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.

ಅಂಥದ್ದೇನಿದೆ ವಿಶೇಷ?
ಸಾರ್ಡಿನಿಯಾದ ಸುತ್ತಮುತ್ತಲಿನ ಮರಳು ಚಿನ್ನಕ್ಕಿಂತ ಹೆಚ್ಚು ಬೆಲೆ ಬಾಳುವಂಥದ್ದು. ಇದರಲ್ಲಿ ಪುಡಿಯಾದ ಹವಳ, ಸಮುದ್ರ ಅವಶೇಷಗಳು, ಪಳೆಯುಳಿಕೆಯ ಅಂಶಗಳಿಂದ ವಿಶಿಷ್ಟವಾಗಿದೆ. ಇದು ತುಸು ಗುಲಾಬಿ ಬಣ್ಣದಲ್ಲಿರುತ್ತದಂತೆ. ಹೆಚ್ಚು ಆಕರ್ಷಕವೂ ಹೌದು. ಇದನ್ನು ವ್ಯಾಪಕ ಪ್ರಮಾಣದಲ್ಲಿ ಕಳ್ಳ ಸಾಗಣೆ ಮಾಡಲಾಗುತ್ತದಂತೆ. ಪ್ರಾಕೃತಿಕವಾಗಿ ಈ ಮರಳು ಅಮೂಲ್ಯವಾದದ್ದು. ಇದರ ಮರಳುಗಾರಿಕೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದೂ ಹೇಳಲಾಗಿದೆ. ಆದ್ದರಿಂದ ಮರಳು ಕದಿಯುವ ವಿರುದ್ಧ ಕಠಿನ ಕಾನೂನು ಕ್ರಮವಾಗುತ್ತದೆ. ಸ್ವಲ್ಪ ಮರಳು ಕದ್ದರೂ ಸುಮಾರು 2 ಲಕ್ಷ ರೂ.ಗಳಷ್ಟು ದಂಡವನ್ನೂ ಹಾಕುತ್ತಾರಂತೆ. ಹೀಗೆ ಕದಿಯುವವರೆಲ್ಲ ಪ್ರವಾಸಿಗಳೇ ಆಗಿದ್ದಾರಂತೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ