ಉತ್ತರ ಅಮೆರಿಕ, ಇಂಡೋನೇಷ್ಯಾದಲ್ಲಿ ಕಂಪಿಸಿದ ಭೂಮಿ
Team Udayavani, Jan 24, 2018, 6:05 AM IST
ಆ್ಯಂಕರೂಜ್ (ಅಲಾಸ್ಕಾ): ಉತ್ತರ ಅಮೆರಿಕ ವ್ಯಾಪ್ತಿಯ ಅಲಾಸ್ಕಾದ “ಕೊಡಿಯಾಕ್’ ದ್ವೀಪದಲ್ಲಿ ಮಂಗಳವಾರ ಭೂಕಂಪ ಸಂಭವಿಸಿದೆ. ರಿಕ್ಟರ್ನಲ್ಲಿ ಪ್ರಮಾಣ 7.9 ಎಂದು ದಾಖಲಾಗಿದೆ. ಆರಂಭದಲ್ಲಿ ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿತ್ತಾದರೂ ನಂತರ ಹಿಂಪಡೆಯಲಾಯಿತು. ಅಲಾಸ್ಕಾದ ಗೃಹ ಖಾತೆ ನೀಡಿದ ಮಾಹಿತಿ ಪ್ರಕಾರ ಯಾವುದೇ ಸಾವುನೋವು ಉಂಟಾಗಿರುವ ಬಗ್ಗೆ ವರದಿಯಾಗಿಲ್ಲ. ಸ್ಥಳೀಯ ಕಾಲಮಾನ 12.30ರ ಸುಮಾರಿಗೆ ಭಾರಿ ಪ್ರಮಾಣದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಸುಮಾರು 90 ಸೆಕೆಂಡ್ಗಳ ಕಾಲ ಅದರ ಅನುಭವ ಇತ್ತು. ರಾಜಧಾನಿ ಆ್ಯಂಕರೂಜ್ನಿಂದ 200 ಮೈಲಿ ನೈಋತ್ಯ ಭಾಗದಲ್ಲಿ ಕೊಡಿಯಾಕ್ ದ್ವೀಪವಿದೆ. ಅಮೆರಿಕದ ಭೂಗರ್ಭ ಇಲಾಖೆ ಮೊದಲು ನೀಡಿದ ಎಚ್ಚರಿಕೆಯಲ್ಲಿ ಕಂಪನದ ಪ್ರಮಾಣ 8.2 ಎಂದು ಹೇಳಿತ್ತು.
ಈ ನಡುವೆ ಇಂಡೋನೇಷ್ಯಾದ ದಕ್ಷಿಣ ಕರಾವಳಿ ಪ್ರದೇಶವಾಗಿರುವ ಜಾವಾದಲ್ಲಿಯೂ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಅದರ ಪ್ರಮಾಣ 6.1 ಎಂದು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು