ಚೀನಕ್ಕೆ ಪಾಕ್‌ ಯುವತಿಯರ ಸ್ಮಗ್ಲಿಂಗ್‌

Team Udayavani, Dec 5, 2019, 1:00 AM IST

ಲಾಹೋರ್‌: ಚೀನ ತನ್ನ ಪರಮ ಆಪ್ತ ರಾಷ್ಟ್ರವೆಂದು ಪಾಕಿಸ್ಥಾನ ಆಗಾಗ ಹೇಳಿಕೊಳ್ಳುತ್ತದೆ. ಅದೇ ರಾಷ್ಟ್ರಕ್ಕೆ ಪಾಕಿಸ್ಥಾನದ 629 ಯುವತಿಯರನ್ನು ಕಳ್ಳ ಸಾಗಣೆ ಮಾಡುವ ಜಾಲವೊಂದು ಬಯಲಾಗಿದೆ. 2018ರಿಂದಲೇ ಈ ಜಾಲ ಸಕ್ರಿಯವಾಗಿದೆ ಎಂದು ಪಾಕಿಸ್ಥಾನದ ತನಿಖಾ ಸಂಸ್ಥೆಗಳು ಕಂಡುಕೊಂಡಿವೆ.

ಪಾಕಿಸ್ಥಾನ ಸರಕಾರದ ಹಲವಾರು ಪ್ರಮುಖ ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿದ್ದಾರೆ. ಅದನ್ನು ಛೇದಿಸಿದರೆ, ಪಾಕಿಸ್ಥಾನ ಮತ್ತು ಚೀನದ ಸ್ನೇಹಕ್ಕೆ ಧಕ್ಕೆಯಾಗುತ್ತದೆ ಎಂಬ ಒತ್ತಡವಿದೆ. ಹೀಗಾಗಿ, ಅವರೂ ಮಾನವ ಕಳ್ಳಸಾಗಾಣಿಕೆಯನ್ನು ಬೆಂಬಲಿಸುವ ಸ್ಥಿತಿ ಉಂಟಾಗಿದೆ ಎಂದು ಗುಪ್ತಚರ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

ಜತೆಗೆ ಇದುವರೆಗೆ ಕಳ್ಳಸಾಗಣೆಗೊಂಡಿರುವ ಮಹಿಳೆಯರ ಪಟ್ಟಿಯನ್ನೂ ಸಲ್ಲಿಕೆ ಮಾಡಲಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಫೈಸಲಾಬಾದ್‌ ಕೋರ್ಟ್‌ 31 ಚೀನ ಪೌರರನ್ನು ಮಾನವ ಕಳ್ಳಸಾಗಾಣಿಕೆ ಕುರಿತು ದೋಷ ಸಾಬೀತುಪಡಿಸಲಾಗಿತ್ತು. ಚೀನದಲ್ಲಿ ಒಂದೇ ಮಗು ನೀತಿ ಜಾರಿಗೊಳಿಸಿದ ಬಳಿಕ ಹೆಣ್ಣು ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿದಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ