ಅಮೇರಿಕದಲ್ಲಿ 8 ತಿಂಗಳ ಮಗು ಸೇರಿ ಭಾರತೀಯ ಮೂಲದ ನಾಲ್ವರ ಅಪಹರಣ
Team Udayavani, Oct 4, 2022, 1:31 PM IST
ಕ್ಯಾಲಿಫೋರ್ನಿಯಾ : 8 ತಿಂಗಳ ಹೆಣ್ಣು ಮಗು ಹಾಗೂ ಪೋಷಕರು ಸೇರಿ ಭಾರತೀಯ ಮೂಲದ ನಾಲ್ವರನ್ನು ಶಸ್ತ್ರಸಜ್ಜಿತ ತಂಡವೊಂದು ಅಪಹರಿಸಿದ ಘಟನೆ ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿ ಎಂಬಲ್ಲಿ ನಡೆದಿದೆ ಎಂದು ಎಬಿಸಿ ವರದಿ ಮಾಡಿದೆ.
ಜಸ್ದೀಪ್ ಸಿಂಗ್ (36), ಜಸ್ಲೀನ್ ಕೌರ್ (27), ಅವರ ಎಂಟು ತಿಂಗಳ ಮಗಳು ಅರುಹಿ ಧೇರಿ ಮತ್ತು 39 ವರ್ಷದ ಅಮನ್ ದೀಪ್ ಸಿಂಗ್ ಅವರನ್ನು ಅಪಹರಿಸಲಾಗಿದೆ ಎಂದು ಎಬಿಸಿ ವರದಿಯನ್ನು ಉಲ್ಲೇಖಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಜನನಿಬಿಡ ಪ್ರದೇಶದಿಂದ ನಾಲ್ವರನ್ನು ಅಪಹರಿಸಲಾಗಿದ್ದು ಘಟನೆಯ ಬಗ್ಗೆ ಹೆಚ್ಚು ಮಾಹಿತಿ ತಿಳಿದು ಬಂದಿಲ್ಲ .ಆದರೆ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಅಪಹರಣಕಾರರು ಅತ್ಯಂತ ಅಪಾಯಕಾರಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.
ಅಪಹರಣಕಾರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದು ಯಾರಿಗಾದರೂ ಅಪಹರಣಕಾರರ ಅಥವಾ ಅಪಹರಣಗೊಂಡವರ ಮಾಹಿತಿ ಲಭ್ಯವಾದಲ್ಲಿ 911 ಗೆ ಕರೆ ಮಾಡುವಂತೆ ಪೊಲೀಸ್ ಅಧಿಕಾರಿಗಳು ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ : ಕಟಪಾಡಿ: ಪೂಜೆ ಮುಗಿಸಿ ಬರುವಾಗ ಕುಸಿದು ಬಿದ್ದು ಮಹಿಳೆ ನಿಧನ