4 ಸಾವಿರ ಕೋಟಿ ಲಾಟರಿ ಹೊಡೀತು
Team Udayavani, Aug 28, 2017, 7:20 AM IST
ವಾಷಿಂಗ್ಟನ್: ದಕ್ಷಿಣ ಅಮೆರಿಕದ ನಿವಾಸಿ ವ್ಯಾಂಕ್ಝೈಕ್ ಬುಧವಾರದವರೆಗೆ ಆಸ್ಪತ್ರೆ ಸಿಬ್ಬಂದಿ. ಆದರೆ ಶುಕ್ರವಾರ ಬೆಳಗಾಗುತ್ತಲೇ ಒಂದಲ್ಲ, ಎರಡಲ್ಲ ನಾಲ್ಕು ಸಹಸ್ರ ಕೋಟಿಗೆ ಒಡತಿ!
ನಿಜವಾಗ್ಯೂ ಲಾಟರಿ ಹೊಡೆಯೋದು ಅಂದ್ರೆ ಇದುವೇ. ನಿನ್ನೆ ರಾತ್ರಿ ಆಸ್ಪತ್ರೆ ಡ್ನೂಟಿ ಮುಗಿಸಿಕೊಂಡು ಬಂದಾಗ ಕೆಲವೇ ಸಾವಿರ ರೂ. ಇದ್ದ ವ್ಯಾಂಕ್ಝೈಕ್ ಗಳಿಕೆ ಬೆಳಗಾಗು ವಷ್ಟರಲ್ಲೇ ಸಹಸ್ರ ಕೋಟಿಗೆ ಏರಿಕೆಯಾಗಲು ಕಾರಣ ಲಾಟರಿ ಟಿಕೆಟ್. ಈ ಮಹಿಳೆ ಗೆದ್ದಿರುವುದು ಬರೋಬ್ಬರಿ 4842 ಕೋಟಿ ರೂ. (758.7 ಮಿಲಿಯನ್ ಡಾಲರ್). ಆದರೆ ಈ ಹಣದಲ್ಲಿ ಅರ್ಧದಷ್ಟನ್ನು ವ್ಯಾಂಕ್ಝೈಕ್ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಬೇಕಿದೆ. ಇನ್ನೊಂದು ವಿಶೇಷವೆಂದರೆ ವ್ಯಾಂಕ್ಝೈಕ್ಗೆ ಒಲಿದಿರುವುದು ಉತ್ತರ ಅಮೆರಿಕದ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತದ ಜಾಕ್ಪಾಟ್.
ಮಧ್ಯಮ ವರ್ಗದ ಮಹಿಳೆಯೊಬ್ಬಳು ಬೆಳಗಾಗುವುದರೊಳಗೆ ಸಹಸ್ರ ಕೋಟಿಗೆ ಒಡತಿಯಾದರೆ ಕಳ್ಳಕಾಕರ ದೃಷ್ಟಿ ಬೀಳದಿರಲು ಸಾಧ್ಯವೇ ಇಲ್ಲ. ವ್ಯಾಂಕ್ ವಿಷಯದಲ್ಲೂ ಇದೇ ಆಗಿದೆ. ಆದರೆ ವಿಷಯ ತಿಳಿಯುತ್ತಿ ದ್ದಂತೆ ಪೊಲೀಸರ ವಾಹನ ಹೋಗಿ ವ್ಯಾಂಕ್ಝೈಕ್ ಮನೆ ಮುಂದೆ ನಿಂತಿದ್ದು, ಸೂಕ್ತ ರಕ್ಷಣೆಯ ಭರವಸೆ ಒದಗಿಸಿದೆ. ಇದೇ ವೇಳೆ ವ್ಯಾಂಕ್ರನ್ನು ಹುಡುಕಿಕೊಂಡು ಬರುವವರ ಸಂಖ್ಯೆಯೂ ಹೆಚ್ಚಿದ್ದು, ಮಾಧ್ಯಮದವರು ಅಕ್ಕಪಕ್ಕದ ಮನೆಗಳ ಬಾಗಿಲು ಬಡಿದು “ಇಲ್ಲಿ ವ್ಯಾಂಕ್ಝೈಕ್ ಮನೆ ಎಲ್ಲಿದೆ’ ಎಂದು ಕೇಳುತ್ತಿದ್ದಾರೆ. ಈ ಹಿಂದೆಯೂ ಇದೇ ರೀತಿ ಲಾಟರಿ ಗೆದ್ದವರು ದರೋಡೆಕೋರರ ಗುಂಡಿಗೆ ಬಲಿಯಾಗಿದ್ದರಂತೆ. ಹೀಗಾಗಿಯೇ ಈಗ ವ್ಯಾಂಕ್ಗೂ ಪೊಲೀಸರು ಭದ್ರತೆ ಒದಗಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್